PF ನಿಯಮದಲ್ಲಿ ಮಹತ್ತರ ಬದಲಾವಣೆ. ೧ ಏಪ್ರಿಲ್ ೨೦೨೨ ರಿಂದ ಬರಲಿದೆ ಈ ಹೊಸ ನಿಯಮ?

2,220

ಸಾಮಾನ್ಯವಾಗಿ ಜೀವನದಲ್ಲಿ ಹೆಚ್ಚಿನ ಎಲ್ಲಾ ಜನರು ಉದ್ಯೋಗ ಮಾಡುತ್ತಾ ಇರುತ್ತಾರೆ. ಆದರೆ ಕೆಲವರ ಕೈಯಲ್ಲಿ ಹಣ ಎಂಬುವುದು ಉಳಿಯುವುದಿಲ್ಲ ಖರ್ಚಾಗಿ ಹೋಗುತ್ತದೆ. ಹೀಗಿರುವಾಗ ಎಲ್ಲರ ಕೈಯಲ್ಲೂ ಉಳಿಯುವ ಒಂದು ಉಳಿತಾಯ ಇದ್ದಾರೆ ಅದು ಪಿ ಎಫ್ ಮಾತ್ರ. ಹೌದು ಇದರಿಂದ ಅದೆಷ್ಟೋ ಜನ ಮನೆ ಕಟ್ಟಿದರು, ಅದೆಷ್ಟೋ ಜನ ಮದುವೆ ಮಾಡಿಕೊಂಡರು, ಎಲ್ಲರ ಆಪತ್ಕಾಲದಲ್ಲಿ ಕೈ ಹಿಡಿದಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಇದೆ ಪಿ ಎಫ್ ನಿಯಮದಲ್ಲಿ ಬಾರಿ ಬದಲಾವಣೆ ಆಗುತ್ತಿದೆ. ಹೌದು ಮೋದಿ ಸರ್ಕಾರ ದೊಡ್ಡ ಸರ್ಜರಿ ಮಾಡಲು ಹೊರಟಿದೆ. ಹಾಗಾದರೆ ಏನಿದು ಬದಲಾವಣೆ ಬನ್ನಿ ತಿಳಿಯೋಣ.

ಏಪ್ರಿಲ್ 1 2022 ರ ನಂತರ ಈ ಬದಲಾವಣೆಗಳು ಅನುಷ್ಟಾನಕ್ಕೆ ಬರುವ ಎಲ್ಲಾ ಸಾಧ್ಯತೆಗಳೂ ಇದೆ. ಇಲ್ಲಿ ಪಿ ಎಫ್ ಖಾತೆ ಹೊಂದಿರುವವರನ್ನು ಎರಡು ಗುಂಪಾಗಿ ವಿಂಗಡಿಸಲಾಗುತ್ತದೆ. ಇದರ ಪ್ರಕಾರ ವಾರ್ಷಿಕವಾಗಿ 2.5 ಲಕ್ಷ ರೂಪಾಯಿ ಪಿ ಎಫ್ ನಲ್ಲಿ ಹೂಡಿಕೆ ಮಾಡುವ ಉದ್ಯೋಗಿಗಳಿಗೆ ಯಾವುದೇ ರೀತಿಯ ತೆರಿಗೆ ಇರುವುದಿಲ್ಲ. ವಾರ್ಷಿಕವಾಗಿ ಯಾರೆಲ್ಲ 2.5 ಲಕ್ಷಕ್ಕಿಂತ ಹೆಚ್ಚಿನ ಹಣ ಪಿ ಎಫ್ ಖಾತೆಯಲ್ಲಿ ಹೊಂದಿರುತ್ತಾರೆ ಅಂತಹ ಖಾತೆಗೆ ಟ್ಯಾಕ್ಸ್ ಕಟ್ಟಬೇಕು. ಹೌದು ಇದಕ್ಕೆಂದೇ ಆದಾಯ ತೆರಿಗೆ ಇಲಾಖೆ 9D ಅನ್ನು ಪರಿಚಯಿಸಿದೆ. ಹೊಸ ಬದಲಾವಣೆಗಳು ಈಗಾಗಲೇ ಸುದ್ದಿಯಲ್ಲಿ ಇದ್ದು ಬರುವ ಹಣಕಾಸು ವರ್ಷದಲ್ಲಿ ಅನುಷ್ಠಾನ ಗೊಳ್ಳುವುದು ಬಹುತೇಕ ಖಚಿತವಾಗಿದೆ.

ಆದರೆ ಇದರಿಂದ ಸಣ್ಣ ಮತ್ತು ಮದ್ಯಮ ವಲಯದಲ್ಲಿ ಕೆಲಸ ಮಾಡುವ ಯಾವುದೇ ನೌಕರರಿಗೆ ಸಮಸ್ಯೆ ಆಗುವುದಿಲ್ಲ ಬದಲಾಗಿ ಹೆಚ್ಚಿನ ಆದಾಯ ಇರುವ ಉದ್ಯೋಗಿಗಳಿಗೆ ಸಮಸ್ಯೆ ಆಗುತ್ತದೆ. ಕೆಲವರು ತೆರಿಗೆ ವಂಚಿಸಲೆಂದೆ ಹೆಚ್ಚಿನ ಹಣ ಪಿ ಎಫ್ ಖಾತೆಯಲ್ಲಿ ಜಮಾ ಆಗುವಂತೆ ಮಾಡುತ್ತಾರೆ ಇದನ್ನು ತಡಯಬೇಕಾದರೆ ಇಂತಹ ಒಂದು ಕ್ರಮ ಬೇಕು ಎಂದು ಹಣಕಾಸು ಇಲಾಖೆ ಹೇಳುತ್ತದೆ.

Leave A Reply

Your email address will not be published.