RRR ಚಿತ್ರದಲ್ಲಿ ತೋರಿಸಿರುವ ಈ ಬಾವುಟ ಎಲ್ಲಿಯದ್ದು? ಇದರ ಬಗೆಗಿನ ವಿಶೇಷತೆ ನಿಮಗೆ ಗೊತ್ತೇ?

483

ರಾಜಮೌಳಿ ನಿರ್ದೇಶನದ RRR ಚಿತ್ರ ಸಿನೆಮಾ ರಂಗದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. 750 ಕೋಟಿ ಗಡಿ ದಾಟಿದೆ ಇದೀಗ 1000ಗಡಿ ದಾಟುವ ಹಂತದಲ್ಲಿ ಇದೆ. ಹಾಗೇನಾದರೂ ಆದರೆ ಇದು ಅತ್ಯಂತ ಯಶಸ್ವಿ ಚಿತ್ರ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಚಿತ್ರ ದೇಶಭಕ್ತಿ ಮತ್ತು ಸ್ವಾತಂತ್ರ್ಯದ ಹಿನ್ನಲೆಯನ್ನು ಹೇಳುತ್ತದೆ. ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮನ್ನು ಅರ್ಪಣೆ ಮಾಡಿದ ಯಾರಿಗೂ ತಿಳಿಯದ ಸ್ವಾತಂತ್ರ್ಯ ಹೋರಾಟಗಾರರ ಬಗೆಗೆ ಚಿತ್ರದಲ್ಲಿ ಹೇಳಲಾಗಿದೆ. ಹಾಗಾದರೆ ಈ ಚಿತ್ರ ಈಗ ಮತ್ತೊಮ್ಮೆ ಸದ್ದು ಮಾಡುತ್ತಿದೆ ಆದರೆ ಅದು ಕಲೆಕ್ಷನ್ ವಿಚಾರದಲ್ಲಿ ಅಲ್ಲ ಬದಲಾಗಿ ಚಿತ್ರದಲ್ಲಿ ತೋರಿಸಿರುವ ಸಣ್ಣ ತುಣುಕು ಹೌದು ಏನಿದು ಬನ್ನಿ ತಿಳಿಯೋಣ.

ಚಿತ್ರದಲ್ಲಿ ಬಾವುಟ ಹಾರಿಸುತ್ತಿರುವ ಒಂದು ದೃಶ್ಯ ಇದೆ ಇದರಲ್ಲಿ ಇರುವ ಬಾವುಟದ ಬಗೆಗೆ ಈಗ ಚರ್ಚೆ ನಡೆಯುತ್ತಿದೆ ಹೌದು. ಈ ಬಾವುಟವನ್ನು ಯಾರು ನೋಡಿರಲಿಕ್ಕಿಲ್ಲ, ಇದರ ಬಗ್ಗೆ ಅನೇಕ ಜನರಿಗೆ ಕುತೂಹಲ ಇರಬಹುದು. ಹಾಗಾದರೆ ಏನು ಇದರ ವಿಶೇಷತೆ ಬನ್ನಿ ತಿಳಿಯೋಣ. ಇದು ಎಲ್ಲಿದ್ದೋ ಬಾವುಟ ಅಲ್ಲ ಬದಲಾಗಿ ನಮ್ಮದೇ ದೇಶದ ಬಾವುಟ ಇದು ಹೌದು. ನಮ್ಮ ದೇಶದ ಬಾವುಟ ಇದು. 1907ರಲ್ಲ ಇದನ್ನು ಮೊದಲಿಗೆ ಬಳಕೆ ಮಾಡಲಾಯಿತು. ದೇಶದ ಜನರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ವಂದೇ ಮಾತರಂ ದ್ಯೇಯ ವಾಕ್ಯ ಹೊಂದಿರುವ ಈ ಬಾವುಟ ಶ್ಯಮಜಿ ಮತ್ತು ಮೇಡಂ ಕಾಮ ಅವರು ಮೊದಲು ಬಳಕೆ ಮಾಡಿದ್ದರು.

ಇದೆ ಸಮಯದ ಸ್ವಾತಂತ್ರ್ಯ ಹೋರಾಟದ ಬಗೆಗೆ ಚಿತ್ರದಲ್ಲಿ ಮೂಡಿ ಬಂದಿದೆ. ಅದೇನೇ ಆಗಲಿ ಈ ಒಂದು ಚಿತ್ರ ನೈಜವಾಗಿ ಯಾರ ಪ್ರಯತ್ನದಿಂದ ಸ್ವಾತಂತ್ರ್ಯ ಬಂದಿದೆ ಎಂದು ಹೇಳುವ ಪ್ರಯತ್ನ ಮಾಡಿದೆ. ಜನ ಮೆಚ್ಚಿಕೊಂಡು ಚಿತ್ರವನ್ನು ಗೆಲ್ಲಿಸಿದ್ದಾರೆ. 1000ಕೋಟಿ ಗಡಿ ದಾಟಲಿ ಎಂದು ಹಾರೈಸೋಣ. ಇದೀಗ RRR ಎರಡನೇ ಭಾಗ ಮಾಡುತ್ತಾರೆ ಎನ್ನುವ ಸುದ್ದಿ ಕೂಡ ಸಾಮಾಜಿಕ ಜಾಲತಾಣದಲ್ಲಿ ನಡೆಡಯುತ್ತಿದೆ. ಇದು ಕೂಡ ಸ್ವತಂತ್ರ ವೀರರ ಬಗೆಗೇನೇ ಇರುವುದಾದರೆ ಇಂತಹ ಅನೇಕ ಚಿತ್ರಗಳು ಮುಂದೆ ಬಂದರೆ ಉತ್ತಮ.

Leave A Reply

Your email address will not be published.