Cricket News: ಸತತ ಕ್ಯಾಚ್ ಬಿಟ್ಟ ವಿರಾಟ್ ಕೊಹ್ಲಿ. ಇದರ ಬಗ್ಗೆ ಪ್ರತಿಕ್ರಿಯೆ ನೀಡಿದ ಕ್ರಿಕೆಟ್ ಅಭಿಮಾನಿಗಳು.

118

ಬಾಂಗ್ಲಾದೇಶದ ವಿರುದ್ದ ನಡೆದ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli) ತಮ್ಮ ಕಳಪೆ ಪ್ರದರ್ಶನ ತೋರಿದ್ದಾರೆ. ಹಿರಿಯ ಆಟಗಾರ ಎನಿಸಿಕೊಂಡ ಆಟಗಾರ ಹಾಗು ತಮ್ಮನ್ನು ತಾವು ಫಿಟ್ ಎಂದು ಕರೆಸಿಕೊಳ್ಳುವ ಆಟಗಾರ ಸತತವಾಗಿ ಕ್ಯಾಚ್ ಗಳನ್ನೂ ಬಿಟ್ಟಿದ್ದು ಅವರ ಫಿಟ್ನೆಸ್ ಬಗ್ಗೆ ಅಭಿಮಾನಿಗಳಲ್ಲಿ ಅನುಮಾನ ಮೂಡುವಂತೆ ಮಾಡಿದೆ. ಅಲ್ಲದೆ ಟೆಸ್ಟ್ ಪಂದ್ಯಗಳಲ್ಲಿ ಯಾವುದೇ ಹೇಳಿಕೊಳ್ಳುವಂತಹ ಪ್ರದರ್ಶನ ಬರದೇ ಇದಿದ್ದು ಇದೀಗ ಎಲ್ಲೆಡೆ ಸುದ್ದಿ ಮಾಡುತ್ತಿದೆ.

ತಮ್ಮ ಫಿಟ್ನೆಸ್ ಇಂದಾನೆ ಗುರುತಿಸಿಕೊಂಡಿರುವ ವಿರಾಟ್ ಕೊಹ್ಲಿ ಒಟ್ಟು ನಾಲ್ಕು ಕ್ಯಾಚ್ ಬಿಟ್ಟಿದ್ದು ಎಲ್ಲರಿಗು ಅಚ್ಚರಿ ಮೂಡಿಸಿದೆ. ಹಾಗೇನೇ ಈ ನಾಲ್ಕು ಕ್ಯಾಚ್ ಬಿಟ್ಟಿದ್ದರಿಂದ ಬಾಂಗ್ಲಾದೇಶ (Bangladesh) ತಂಡ ಒಟ್ಟಾರೆ 118 ರನ್ ಕಲೆ ಹಾಕಿತ್ತು. ಇದು ಭಾರತಕ್ಕೆ ನುಂಗಲಾರದ ತುಪ್ಪವಾಗಿ ಪರಿಣಮಿಸಿತ್ತು ಎಂದು ಹೇಳಿದರೆ ತಪ್ಪಾಗಲಾರದು. ಭಾರತ ತಂಡ ಕೂಡ 74 ರನ್ ಗಳಿಗೆ 7 ವಿಕೆಟ್ ಕಳೆದು ಕೊಂಡು ಸೋಲು ಗೆಲುವಿನ ನಡುವೆ ಪರದಾಡಿತ್ತು. ಆದರೆ ಅಶ್ವಿನ್ (R.Ashwin) ಹಾಗು ಶ್ರೇಯಸ್ ಅಯ್ಯರ್ (Shreyas Iyer) ಅವರ ಜೊತೆಯಾಟ ಮೂಲಕ ಭಾರತ ಗೆಲುವಿನ ದಡ ಸೇರಿತ್ತು.

ವಿರಾಟ್ ಕೊಹ್ಲಿ (Virat Kohli) ಅವರು ಬಿಟ್ಟ ನಾಲ್ಕು ಕ್ಯಾಚ್ ಬಗ್ಗೆ ಕ್ರಿಕೆಟ್ ಅಭಿಮಾನಿಗಳು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಸ್ಲಿಪ್ ಅಲ್ಲಿ ನಿಂತು ಕ್ಯಾಚ್ ಬಿಟ್ಟಿದ್ದು ಯಾವ ಕಾಮೆಂಟೇಟರ್ ಗು ಕಾಣಲಿಲ್ಲ. ಇದರ ಬದಲು ಅವರೆಲ್ಲ ಕೆ ಎಲ್ ರಾಹುಲ್ (K.L. Rahul) ಅವರ ಬಗ್ಗೆ ಅವರನ್ನು ಬದಲಿಸುವ ಬಗ್ಗೆ ಮಾತಾಡಿ ಈ ವಿಷಯವನ್ನು ಬೇರೆಡೆ ಮಾಡಿದರು ಎಂದು ಹೇಳಿದರೆ, ಇನ್ನು ಕೆಲವರು ಕ್ಯಾಚ್ ಬಹಳ ಕಷ್ಟವಾಗಿತ್ತು. ಇದನ್ನು ಯಾರು ಕೂಡ ಹಿಡಿಯಲು ಸಾದ್ಯವಿರಲಿಲ್ಲ ಎಂದು ಕೊಹ್ಲಿ ಅವರನ್ನು ಸಮರ್ಥನೆ ಮಾಡಿದ್ದಾರೆ.

ಇನ್ನು ಕೆಲವರು ವಿರಾಟ್ ಕೊಹ್ಲಿ (Virat Kohli) ಅಂದರೆ ಫಿಟ್ನೆಸ್ ಎಂದು ಹೇಳುವ ಅವರ ಅಭಿಮಾನಿಗಳು ಅಂದು ರೋಹಿತ್ ಶರ್ಮ (Rohit Sharma) ಯಾವತ್ತೂ ಕ್ಯಾಚ್ ಬಿಡಲ್ಲ ಆದರೂ ಕೂಡ ಒಂದು ಕ್ಯಾಚ್ ಬಿಟಿದ್ದಕ್ಕೆ ಅವರನ್ನು ತಂಡದಿಂದಲೇ ತೆಗೆದುಬಿಡಬೇಕು, ರೋಹಿತ್ ಶರ್ಮ ತಂಡದಲ್ಲಿ ಆಡಲು ಅಯೋಗ್ಯರು ಎಂದು ಲೇವಡಿಸಿದ್ದರು. ಇಂದು ವಿರಾಟ್ ಕೊಹ್ಲಿ ಕ್ಯಾಚ್ ಬಿಟ್ಟ ತಕ್ಷಣ ಅದು ಕಷ್ಟದ ಕ್ಯಾಚ್ ಎಂದು ಕಾರಣ ಹೇಳುತ್ತಿದ್ದಾರೆ ಎಂದು ಟ್ವೀಟ್ (Tweet) ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

Leave A Reply

Your email address will not be published.