ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಆಟದ ಮೂಲಕ ಸುದ್ದಿಯಾಗಿ ಇದೀಗ ಕಣ್ಮರೆ ಆದ ಈ ನಾಲ್ಕು ಟಾಪ್ ಭಾರತದ ಆಟಗಾರರು.

311

ಭಾರತ ತಂಡದಲ್ಲಿ ಸ್ಥಾನ ಪಡೆಯಬೇಕೆಂದರೆ ಅದಕ್ಕೆ ಸಾಕಷ್ಟು ಸ್ಪರ್ಧೆ ಇದೆ. ಒಬ್ಬರಿಗಿಂತ ಇನ್ನೊಬ್ಬರು ಉತ್ತಮರಂತೆ ಇದ್ದಾರೆ ಆಟಗಾರರು. ಅದಲ್ಲದೆ ಐಪಿಎಲ್ (IPL) ಬಂದಮೇಲಂತೂ ನಮಗೆ ಅನೇಕ ಯುವ ಆಟಗಾರರು ತಮ್ಮ ಕೌಶಲ್ಯ ಮೂಲಕ ಗಮನ ಸೆಳೆದಿದ್ದಾರೆ. ಅನೇಕ ಹಿರಿಯ ಅನುಭವಿ ಆಟಗಾರರು ತಮ್ಮ ಸ್ಥಾನವನ್ನು ಹೊಸ ಯುವ ಆಟಗಾರರಿಗೋಸ್ಕರ. ಹಾಗೇನೇ ಈ ನಾಲ್ಕು ಯುವ ಆಟಗಾರರು ದೊಡ್ಡ ಸುದ್ದಿ ಮಾಡಿದರು ಕೂಡ ನಂತರ ಯಾವುದೇ ಅಂತಾರಾಷ್ಟ್ರೀಯ ಸರಣಿಗೆ ಆಯ್ಕೆ ಗೊಳ್ಳಲಿಲ್ಲ.

೧. ಟಿ. ನಟರಾಜನ್ (T. Natarajan)- ಎಡಗೈ ವೇಗಿ ಟಿ. ನಟರಾಜನ್ ಭಾರತ ತಂಡದ ಪರ ಆಡಿದ ಆಟಗಾರರಲ್ಲಿ ಒಬ್ಬರು. ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಮ್ಯಾಚ್ ವಿನ್ನರ್ ಆಗಿ ಹೊರಹೊಮ್ಮಿದವರು. ಅದಾದ ನಂತರ ಗಾಯದ ಸಮಸ್ಯೆ ಇಂದ ಹೊರ ಹೋದ ಈ ಆಟಗಾರ ಇದೀಗ ಆ ಸಮಸ್ಯೆ ಇಂದ ಹೊರಗೆ ಬಂದರು ಕೂಡ ನ್ಯೂಜಿಲ್ಯಾಂಡ್ ಹಾಗು ಬಾಂಗ್ಲಾದೇಶದ ಸರಣಿಗಳಿಗೆ ಆಯ್ಕೆ ಆಗಿಲ್ಲ.

೨. ಜಯಂತ್ ಯಾದವ್ (Jayant Yadav)- ಸ್ಪಿನ್ ಬೌಲರ್ ಆಗಿರುವ ಜಯಂತ್ ಯಾದವ್ ಭಾರತ ಟೆಸ್ಟ್ ತಂಡದಲ್ಲಿ ರೆಗ್ಯುಲರ್ ಬೌಲರ್ ಆಗಿ ಆಯ್ಕೆ ಆಗುತ್ತಿದ್ದರು. ಆದರೆ ಇವರು ಆಡಿದ ಪಂದ್ಯಗಳ ಸಂಖ್ಯೆ ಬಹಳ ಕಡಿಮೆ. ಅಲ್ಲದೆ ಇದೀಗ ಬಾಂಗ್ಲಾದೇಶ ಹಾಗು ನ್ಯೂಜಿಲ್ಯಾಂಡ್ ಸರಣಿಗೂ ಆಯ್ಕೆ ಆಗಿಲ್ಲ.

೩. ದೇವದತ್ತ ಪಾಡಿಕಲ್ (Devdutt Padikkal)- 2020 ರ IPL ಸರಣಿಯಲ್ಲಿ ಉದಯೋನ್ಮುಖ ಆಟಗಾರನಾಗಿ ಪ್ರಶಸ್ತಿ ಪಡೆದ ನಮ್ಮ ಕರ್ನಾಟಕದ ದೇವದತ್ ಪಡಿಕ್ಕಲ್, ಬೆಂಗಳೂರು ತಂಡದಲ್ಲಿ ಉತ್ತಮ ಎರಡು ಸೀಸನ್ ಆಡಿದ್ದರು. ಎಡಗೈ ಬ್ಯಾಟ್ಸಮನ್ ಆಗಿರುವ ಇವರು ಅಂತಾರಾಷ್ಟ್ರೀಯ ಪಂದ್ಯಕ್ಕೂ ಶ್ರೀ ಲಂಕಾ ವಿರುದ್ಧ ಆಯ್ಕೆ ಆಗಿದ್ದವರು. ಆದರೆ ಸಿಕ್ಕ ಅವಕಾಶದಲ್ಲಿ ಕಳಪೆ ಪ್ರದರ್ಶನ ತೋರಿ ಅದಾದ ನಂತರ ಯಾವುದೇ ಅಂತಾರಾಷ್ಟ್ರೀಯ ಸರಣಿಗೂ ಆಯ್ಕೆ ಆಗಿಲ್ಲ.

೪. ವರುಣ್ ಚಕ್ರವರ್ತಿ (Varun Chakravarthy)- ಸ್ಪಿನ್ ಚತುರ ಅಂತ ಕರೆಸಿಕೊಳ್ಳುವ ವರುಣ್ ಚಕ್ರವರ್ತಿ ಐಪಿಎಲ್ ಅಲ್ಲಿ ತಮ್ಮ ಅಮೋಘ ಪ್ರದರ್ಶನ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಕೋಲ್ಕತ್ತಾ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಅಲ್ಲದೆ ಭಾರತದ ಪರ ICC T20 World Cup 2021 ಕೂಡ ಆಡಿದ್ದರು. ಅದಾದ ನಂತರ ಒಂದು ಅವಕಾಶ ಕೂಡ ಸಿಗಲಿಲ್ಲ ಈ ಆಟಗಾರನಿಗೆ.

Leave A Reply

Your email address will not be published.