ಕಂಗನಾರಿಂದ ಕರಿಷ್ಮಾ ಕಪೂರ್ ವರೆಗೂ ಶಾರುಖ್ ಖಾನ್ ಜೊತೆ ನಟಿಸಲು ಒಪ್ಪದ ಈ ೫ ಸುಂದರ ನಟಿಯರು. ಯಾರಿವರು?

773

ಬಾಲಿವುಡ್ ಸಿನಿಮಾ ಕಿಂಗ್ ಖಾನ್ ಅಂತಾನೆ ಕರೆಸಿಕೊಳ್ಳೋ ಶಾರುಖ್ ಖಾನ್ ಕೋಟ್ಯಂತರ ಹೃದಯದಲ್ಲಿ ಮನೆ ಮಾಡಿರುವ ನಟ. ಅದೇ ರೀತಿ ಕೋಟ್ಯಂತರ ಜನರ ವಿರೋಧ ಕಟ್ಟಿಕೊಂಡ ನಟ ಅಂತಲೂ ಹೇಳಬಹುದು. ಪ್ರತಿ ನಟಿಗೂ ಶಾರುಖ್ ಖಾನ್ ಜೊತೆ ನಟಿಸಬೇಕು ಅನ್ನೋ ಆಸೆ ಇರುತ್ತದೆ, ಅದಲ್ಲದೆ ಶಾರುಖ್ ಖಾನ್ ಜೊತೆ ನಟಿಸದ ಕೆಲವು ಹೆಸರು ಮಾಡಿದ ನಟಿಯರು ಇದ್ದಾರೆ. ಯಾರವರು? ಅದರ ಸಂಪೂರ್ಣ ಮಾಹಿತಿ ಇಲ್ಲಿದೆ. ಪೂರ್ತಿ ಓದಿ ನಿಮ್ಮ ಗೆಳಯರ ಬಳಿ ಶೇರ್ ಮಾಡಿಕೊಳ್ಳಿ.

ಮೊದಲನೇದಾಗಿ ಸಮಂತಾ, ತೆಲುಗಿನ ನಟಿ ಯಾರಿಗೆ ತಾನೇ ಗೊತ್ತಿಲ್ಲ ಇತ್ತೀಚಿಗೆ ಹಿಂದಿಯ ಫ್ಯಾಮಿಲಿ ಮ್ಯಾನ್ ೨ ಚಿತ್ರದಲ್ಲಿ ನಟಿಸಿ ಇಡೀ ದೇಶದ ಜನರ ಮನಸು ಗೆದ್ದಾಕೆ. ಅದಲ್ಲದೆ ಇತ್ತೀಚಿಗೆ ಶಾರುಖ್ ಖಾನ್ ಜೊತೆ ನಟಿಸೋ ಆಫರ್ ಕೂಡ ಬಂದಿತಂತೆ ಆದರೆ ಅವರ ಪರ್ಸನಲ್ ಸಮಸ್ಯೆ ಇಂದ ನಟಿಸಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ. ಇನ್ನು ಎರಡನೇ ನಟಿ ಸೋನಂ ಕಪೂರ್, ಅನಿಲ್ ಕಪೂರ್ ಅವರ ಮಗಳಾದ ಸೋನಂ ಕಪೂರ್ ಬಾಲಿವುಡ್ ಅಲ್ಲಿ ಸುಮಾರು ಚಲನಚಿತ್ರದಲ್ಲಿ ನಟನೆ ಮಾಡಿದ್ದಾರೆ, ಆದರೆ ಅವರ ಯಾವ ಚಿತ್ರಗಳು ಕೂಡ ಅಷ್ಟು ದೊಡ್ಡ ಸದ್ದು ಮಾಡಲಿಲ್ಲ. ತಮ್ಮ ನಟನೆ ಶುರು ಮಾಡುವ ಸಂಧರ್ಭದಲ್ಲಿ ಶಾರುಖ್ ಅವರ ಜೊತೆ ನಟಿಸಲು ಅನೇಕ ಆಫರ್ ಬಂದಿತಂತೆ ಆದರೆ ಅವರಿಬ್ಬರ ನಡುವಿನ ಕೆಮಿಸ್ಟ್ರಿ ಜನರಿಗೆ ಇಷ್ಟ ಆಗುವುದಿಲ್ಲ ಎನ್ನುವ ಕಾರಣಕ್ಕೆ ಶಾರುಖ್ ಖಾನ್ ಜೊತೆ ನಟಿಸಲು ಒಪ್ಪಲಿಲ್ಲ.

ಕಂಗನಾ ರನೌತ್, ಇತ್ತೀಚಿಗೆ ಪದ್ಮಶ್ರೀ ಪ್ರಶಸ್ತಿ ಪಡೆದ ನಟಿ. ತಮ್ಮ ಕಟು ಮಾತಿನಿಂದಲೇ ಅನೇಕರ ವಿರೋಧ ಕಟ್ಟಕ್ಕೊಂಡ ನಟಿ. ತಮ್ಮ ನಟನೆಯ ಕರಿಯರ್ ಅಲ್ಲಿ ಅನೇಕ ಏಳು ಬೀಳು ನೋಡಿದ ನಟಿ. ಈಗ ಯಶಸ್ಸು ಕಂಡು ಬಾಲಿವುಡ್ ಕ್ವೀನ್ ಅಂತಾನೆ ಕರೆಸಿಕೊಳ್ಳುತ್ತಾರೆ. ಶಾರುಖ್ ಖಾನ್ ಜೊತೆ ಜೀರೋ ಎನ್ನುವ ಸಿನಿಮಾದಲ್ಲಿ ನಟಿಸಲು ಅವಕಾಶ ಇದ್ದರು ಕಂಗನಾ ಇದನ್ನು ನಿರಾಕರಿಸಿದ್ದರು, ನಂತರ ಈ ಪಾತ್ರ ಅನುಷ್ಕಾ ಶರ್ಮ ಅವರಿಗೆ ಸಿಕ್ಕಿತ್ತು. ಕಂಗನಾ ಈ ಆಫರ್ ಯಾಕೆ ನಿರಾಕರಿಸಿದರು ಎನ್ನುವ ಕಾರಣ ಇದುವರೆಗೂ ತಿಳಿದು ಬಂದಿಲ್ಲ.

ಕರಿಷ್ಮಾ ಕಪೂರ್, ಬಾಲಿವುಡ್ ಅಲ್ಲಿ ಅತಿ ಹೆಚ್ಚು ಹೆಸರಿರುವುದು ಕಪೂರ್ ಅನ್ನುವುದರಲ್ಲಿ. ಕರಿಷ್ಮಾ ಕಪೂರ್ ಕರೀನಾ ಕಪೂರ್ ಅವರ ಸಹೋದರಿ. ಅನೇಕ ಸಿನೆಮಾಗಳಲ್ಲಿ ನಟಿಸಿ ಸಹಿ ಎನಿಸಿಕೊಂಡಿರುವ ನಟಿ. ಇವರು ಶಾರುಖ್ ಖಾನ್ ಜೊತೆ ಸಿನಿಮಾದಲ್ಲಿ ನಟಿಸಿದ್ದಾರೆ ಆದರೆ ಕುಚ್ ಕುಚ್ ಹೋತ ಹೈ ಸಿನಿಮಾದಲ್ಲಿ ನಟಿಸಲು ನಿರಾಕರಿಸಿದ್ದರಂತೆ. ಮುಂದಿನ ನಟಿ ಶ್ರೀದೇವಿ, ಶ್ರೀದೇವಿ ಕೂಡ ಶಾರುಖ್ ಖಾನ್ ಜೊತೆ ನಟನೆ ಮಾಡಿದ್ದಾರೆ ಆದರೆ ಡರ್ ಎನ್ನುವ ಚಿತ್ರ ದ ಆಫರ್ ಬಂದಾಗ ಅದನ್ನು ನಿರಾಕರಿಸಿದ್ದಾರೆ.

Leave A Reply

Your email address will not be published.