ಬರೋಬ್ಬರಿ 12 ವರ್ಷಗಳ ನಂತರ ವಿಶ್ವಕಪ್ ಅಲ್ಲಿ ಆಡಿದ ದಿನೇಶ್ ಕಾರ್ತಿಕ್. ಇದು ಇವರ ಕೊನೆಯ ವಿಶ್ವಕಪ್?

338

ಮ್ಯಾಚ್ ಫಿನಿಶರ್ ಎಂದೇ ಗುರುತಿಸಿಕೊಂಡಿರುವ ದಿನೇಶ್ ಕಾರ್ತಿಕ್ ಉತ್ತಮ ಬ್ಯಾಟ್ಸಮನ್ ಹಾಗು ಉತ್ತಮ ಕೀಪರ್ ಅಂದರೆ ತಪ್ಪಾಗಲಾರದು. ಧೋನಿ ಅವರ ನಾಯಕತ್ವದ ಸಮಯದಲ್ಲಿ ಇವರು ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಅದಕ್ಕೆ ಕಾರಣ ಧೋನಿ ಎಂದರು ತಪ್ಪಾಗಲಾರದು. ಧೋನಿ ಹಾಗು ಕಾರ್ತಿಕ್ ಇಬ್ಬರ ಸ್ಥಾನ ಹಾಗು ಇಬ್ಬರು ಒಂದೇ ಸಮಯದಲ್ಲಿ ತಮ್ಮ ಕ್ರಿಕೆಟ್ ವೃತ್ತಿ ಜೀವನ ಶುರು ಮಾಡಿದ್ದರು. ಧೋನಿ ನಿವೃತ್ತಿ ನಂತರ ಇದೀಗ ದಿನೇಶ್ ಕಾರ್ತಿಕ್ ತಮ್ಮ ಆಟದ ಮೂಲಕ ಮತ್ತೊಮ್ಮೆ ಭಾರತೀಯ ತಂಡಕ್ಕೆ ಸೇರಿಕೊಂಡಿದ್ದಾರೆ ಕಾರ್ತಿಕ್.

ದಿನೇಶ್ ಕಾರ್ತಿಕ್ ಕೊನೆಯ ಬಾರಿಗೆ ಟಿ-೨೦ ವಿಶ್ವಕಪ್ ಆಡಿದ್ದು ೨೦೧೦ ರಲ್ಲಿ. ಈ ಪಂದ್ಯದಲ್ಲಿ ೧೨ ಬಾಲ್ ಗಳಲ್ಲಿ 13 ರನ್ ಗಳಿಸಿದ್ದರು. ಇದಾದ ಬಳಿಕ ನಡೆದ ೪ ವಿಶ್ವಕಪ್ ಗಳಲ್ಲಿ ಇವರಿಗೆ ತಂಡದಲ್ಲಿ ಸ್ಥಾನ ಸಿಕ್ಕಿರಲಿಲ್ಲ. ಆದರೆ ೧೨ ವರ್ಷಗಳ ನಂತರ ಮತ್ತೊಮ್ಮೆ ಟಿ-೨೦ ವಿಶ್ವಕಪ್ ಅಲ್ಲಿ ಆಡುವ ಅವಕಾಶ ಬಂದೊದಗಿದೆ ದಿನೇಶ್ ಕಾರ್ತಿಕ್ ಗೆ. ಈ ಬಾರಿ ಆಯ್ಕೆ ಆಗಿದ್ದು ಮಾತ್ರವಲ್ಲದೆ ಪ್ಲೇಯಿಂಗ್ ೧೧ ರಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಇದು ದಿನೇಶ್ ಕಾರ್ತಿಕ್ ಅವರ ವೃತ್ತಿ ಜೀವನದ ಶ್ರೇಷ್ಠ ಸಮಯ ಎಂದರೆ ತಪ್ಪಾಗಲಾರದು.

ದಿನೇಶ್ ಕಾರ್ತಿಕ್ ಇಲ್ಲಿಯವರೆಗೆ ಒಟ್ಟು ೭ ವಿಶ್ವಕಪ್ ಪಂದ್ಯ ಆಡಿದ್ದಾರೆ. ದಿನೇಶ್ ಕಾರ್ತಿಕ್ ೨೦೦೭ ರಿಂದ ೨೦೧೦ ರವರೆಗೆ ೭ ಪಂದ್ಯ ಆಡಿದ್ದಾರೆ. ಈ ಪಂದ್ಯಗಳಲ್ಲಿ ಇವರ ಸರಾಸರಿ ೧೧.೪೦ ಮತ್ತು ರನ್ ಗಳಿಸಿದ್ದು 57 ಅಷ್ಟೇ. ಈ ಅವಧಿಯಲ್ಲಿ ಇವರ ಅತ್ಯಧಿಕ ರನ್ ಇದಿದ್ದು 17 ರನ್ ಹಾಗು ಇವರ ಸ್ಟ್ರೈಕ್ ರೇಟ್ ೧೧೧.೭೬. ದಿನೇಶ್ ಕಾರ್ತಿಕ್ ಅವರ ವೃತ್ತಿ ಜೀವನದಲ್ಲಿ ಒಟ್ಟು 57 ಟಿ-೨೦ ಪಂದ್ಯವಾಡಿದ್ದಾರೆ. ಇದರಲ್ಲಿ ಇವರು ೨೯.೨೧ ರ ಸರಾಸರಿಯಲ್ಲಿ ಒಟ್ಟು 672 ರನ್ಗಳನ್ನು ಕಲೆ ಹಾಕಿದ್ದಾರೆ. ಈ ಒಟ್ಟು ಪಂದ್ಯಗಳಲ್ಲಿ ಇವರ ಸ್ಟ್ರೈಕ್ ರೇಟ್ ೧೪೬.೪೦. ಈ ಅನುಭವಿ ಕ್ರಿಕೆಟರ್ ನ ವೃತ್ತಿ ಜೀವನವೇ ಒಂದು ಸ್ಫೂರ್ತಿ. ಹಾಗೇನೇ ಇದು ಇವರ ಕೊನೆಯ ವಿಶ್ವಕಪ್ ಕೂಡ ಆಗಿರಬಹುದು. ಇವರ ಇಚ್ಛೆ ಕೂಡ ಇದೆ ಇದ್ದಿದ್ದು.

Leave A Reply

Your email address will not be published.