ಬಿಗ್ ಬಾಸ್ ಮನೆಯಲ್ಲಿ ಜೋಡಿ ಬೇಕಂತ ಮಂಗಳಗೌರಿ ಗೋಳು. ಕಾವ್ಯಶ್ರೀ ಗೌಡ ಗೆ ಸಿಗುತ್ತಾ ಜೋಡಿ?
ಬಿಗ್ ಬಾಸ್ ಮನೆಯಲ್ಲಿ ಈ ಬಾರಿ ಮನೋರಂಜನೆಗೆ ಯಾವುದೇ ಕಡಿಮೆ ಆಗಿಲ್ಲ. ಎಲ್ಲ ಸ್ಪರ್ದಿಗಳು ಕೂಡ ಉತ್ತಮವಾಗಿಯೇ ಆಡುತ್ತಿದ್ದಾರೆ. ಅಲ್ಲದೆ ಮನೋರಂಜನೆ ಕೂಡ ಭರಪೂರವಾಗಿ ಸಿಗುತ್ತಿದೆ. ಆರ್ಯವರ್ಧನ್ ಹಾಗು ಅರುಣ್ ಸಾಗರ್ ಎಲ್ಲರ ಗಮನ ಸೆಳೆಯುವಲ್ಲಿ ಸಫಲರಾಗಿದ್ದಾರೆ ಹಾಗೇನೇ ಉಳಿದ ಅಭ್ಯರ್ಥಿಗಳು ಕೂಡ ತಮ್ಮ ಪ್ರಯತ್ನ ಮಾಡುತ್ತಿದ್ದಾರೆ. ಮಂಗಳಗೌರಿ ಪಾತ್ರದಲ್ಲಿ ಮಿಂಚಿ ಮನೆ ಮಾತಾಗಿರುವ ಕಾವ್ಯಶ್ರೀ ಗೌಡ ಅವರಂತೂ ಬಿಗ್ ಬಾಸ್ ಮನೆಯಲ್ಲಿ ಇತ್ತೀಚಿಗೆ ತುಂಬಾನೇ ಸದ್ದು ಮಾಡುತ್ತಿದ್ದಾರೆ.
ಎಲ್ಲರ ಜೊತೆಗೆ ಕಾವ್ಯಶ್ರೀ ಮುಕ್ತವಾಗಿ ಬೆರೆಯುತ್ತಿದ್ದಾರೆ, ಅವರ ಕಾಮಿಕ್ ಟೈಮಿಂಗ್ ಕೂಡ ಚೆನ್ನಾಗಿದೆ. ಎಲ್ಲರ ಕಾಲೆಳೆಯುತ್ತಾ ತಮ್ಮದೇ ರೀತಿಯಲ್ಲಿ ಹೊರಗಿನ ಹಾಗು ಮನೆಯ ಒಳಗಿನ ಜನರಿಗೆ ಮನೋರಂಜನೆ ನೀಡುತ್ತಿದ್ದಾರೆ. ಇದೀಗ ಇವರು ಮನೆಯಲ್ಲಿ ಆಡಿದ ಮಾತು ಎಲ್ಲರನ್ನು ನಗುವಂತೆ ಮಾಡಿದೆ. ಬಿಗ್ ಬಾಸ್ ಮನೆಯೆಂದರೇನೇ ಗುಂಪು, ಚರ್ಚೆ ಹಾಗು ಸ್ಪರ್ಧೆಗೆ ಹೆಸರಾಗಿರುವಂತದ್ದು. ಹೀಗಿರುವಾಗ ಎಲ್ಲರು ತಮ್ಮದೇ ಆದ ಗೇಮ್ ಪ್ಲಾನ್ ಮಾಡಿಕೊಂಡಿದ್ದಾರೆ. ಹಾಗೇನೇ ಒಬ್ಬರಿಗೊಬ್ಬರು ಜೋಡಿಯಾಗಿ ಗುಂಪಾಗಿನೇ ತಿರುಗುತ್ತಿದ್ದಾರೆ.
ಗೇಮ್ ಅಲ್ಲದೆ ಕೂಡ ಕೆಲವರ ಲವ್ವಿ ಡವ್ವಿ ಕಳೆದ ಬಾರಿ ಸುದ್ದಿ ಕೂಡ ಆಗಿತ್ತು. ಇದೀಗ ಇದನೆಲ್ಲ ನೋಡುತ್ತಿರುವಾಗ ಕಾವ್ಯಶ್ರೀ ಗು ಕೂಡ ಎಲ್ಲರು ಜೋಡಿಯಾಗಿ ಓಡಾಡ್ತಾರೆ, ನನಗು ಒಂದು ಜೋಡಿ ಕೊಡಿ, ತಂಡದಲ್ಲಿ ಇದ್ದರು ಕೂಡ ನಾನು ಒಬ್ಬಂಟಿ ಎಂದು ಕಣ್ಣಿರುವ ಹಾಕುವ ರೀತಿಯಲ್ಲಿ ನಟನೆ ಮಾಡಿ ಮನೆಯಲ್ಲಿ ಇರುವವರನ್ನೆಲ್ಲ ನಗಿಸುತ್ತಿದ್ದಾರೆ. ಮೊದಲಿಂದಲೂ ರೂಪೇಶ್ ಶೆಟ್ಟಿ ಹಾಗು ಸಣ್ಯಾ ಅಯ್ಯರ್ ಮನೆಯಲ್ಲಿ ಜೋಡಿ ಆಗಿ ಓಡಾಡುತ್ತಿದ್ದರೆ, ಇದೀಗ ರಾಕೇಶ್ ಹಾಗು ಅಮೂಲ್ಯ ಕೂಡ ಒಟ್ಟಿಗೆ ಕಾಲ ಕಳೆಯುತ್ತಿದ್ದಾರೆ. ಈ ಸಮಯದಲ್ಲಿ ಕಾವ್ಯಶ್ರೀ ಅವರ ಈ ತಮಾಷೆ ಎಲ್ಲರಲ್ಲೂ ನಗೆಗೀಡು ಮಾಡಿದೆ.