ಬೆಂಗಳೂರು ಪಿಚ್ ಅಲ್ಲ, ಆಸ್ಟ್ರೇಲಿಯಾ ಪಿಚ್. ಕಾರ್ತಿಕ್ ಬದಲು ಈ ಆಟಗಾರನನ್ನು ಆಡಿಸಿ ಎಂದ ವೀರೇಂದ್ರ ಸೆಹ್ವಾಗ್.

490

ಸೌತ್ ಆಫ್ರಿಕಾ ಪಂದ್ಯದಲ್ಲಿ ಭಾರತ ೫ ವಿಕೆಟ್ ಗಳ ಹೀನಾಯ ಸೋಲು ಅನುಭವಿಸಿತು. ವಿಶ್ವಕಪ್ ಪಂದ್ಯದಲ್ಲಿ ಕೇವಲ 139 ರನ್ ಗಳನ್ನೂ ಮಾತ್ರ ಪೇರಿಸಿ ಎಲ್ಲೆಡೆ ಮುಜುಗರ ಕ್ಕೆ ಒಳಗಾಗಿತ್ತು. ಅಲ್ಲದೆ ಉತ್ತಮ ಬ್ಯಾಟಿಂಗ್ ಸಾಮರ್ಥ್ಯ ಇದ್ದರು ಕೂಡ ಭಾರತದ ಆರಂಭಿಕ ಹಾಗು ಮಾಧ್ಯಮ ಕ್ರಮಾಂಕ ಯಾವ ಪ್ರಯೋಜನಕ್ಕೂ ಬರಲಿಲ್ಲ. ಹಾರ್ದಿಕ್, ರಾಹುಲ್, ರೋಹಿತ್, ಕೊಹ್ಲಿ ಇವರೆಲ್ಲರೂ ಕೂಡ ರನ್ ಮಾಡುವಲ್ಲಿ ವಿಫಲರಾದರು. ಇದಲ್ಲದೆ ಉತ್ತಮ ಫಿನಿಶರ್ ಎಂದು ತಂಡಕ್ಕೆ ಸೇರಿಕೊಂಡ ದಿನೇಶ್ ಕಾರ್ತಿಕ್ ಇಲ್ಲಿ ತನಕ ನಡೆದ ಎರಡು ಪಂದ್ಯದಲ್ಲಿ ಯಾವುದೇ ಉತ್ತಮ ಆಟ ಆಡಲಿಲ್ಲ.

ಈ ಪಂದ್ಯದ ಮೂಲಕ ಭಾರತ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಾರಿದೆ ಹಾಗೇನೇ ಆಫ್ರಿಕಾ ಮೊದಲ ಸ್ಥಾನಕ್ಕೇರಿದೆ. ಹಾಗೇನೇ ಪಾಕಿಸ್ತಾನ ಸೆಮಿಫೈನಲ್ ಅವಕಾಶ ಕೂಡ ಭಾರತ ಸೋತಿದ್ದರಿಂದ ಕೈ ತಪ್ಪಿದೆ. ಈ ಪಂದ್ಯ ಮುಗಿದ ಬಳಿಕ ಭಾರತದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ತಂಡದ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಅಲ್ಲದೆ ಆಟಗಾರನ ಬದಲಾವಣೆಗೂ ಸಲಹೆ ನೀಡಿದ್ದಾರೆ. ದಿನೇಶ್ ಕಾರ್ತಿಕ್ ನಿನ್ನೆಯ ಪಂದ್ಯದಲ್ಲಿ ಗಾಯಾಳು ಆಗಿ ಹೊರಹೋಗಿದ್ದರೆ. ಇವರ ಬದಲಿಗೆ ರಿಷಬ್ ಪಂತ್ ಅವರನ್ನು ತಂಡದಲ್ಲಿ ಸೇರಿಸಬೇಕೆಂದು ಸೆಹ್ವಾಗ್ ಅಭಿಪ್ರಾಯ ಪಟ್ಟಿದ್ದಾರೆ.

ಅಲ್ಲದೆ ೧೧ ಮಂದಿಯ ಆಟದಲ್ಲಿ ರಿಷಬ್ ಪಂತ್ ಮೊದಲಿಂದಲೂ ಇರಬೇಕಿತ್ತು ಎಂದು ಹೇಳಿದ್ದಾರೆ. ಆಸ್ಟ್ರೇಲಿಯಾದಲ್ಲಿ ರಿಷಬ್ ಪಂತ್ ಗೆ ಟೆಸ್ಟ್ ಕ್ರಿಕೆಟ್ ಆಡಿ ಅನುಭವ ಇದೆ. ಆದರೆ ದಿನೇಶ್ ಕಾರ್ತಿಕ್ ಆಸ್ಟ್ರೇಲಿಯಾದಲ್ಲಿ ಒಂದು ಪಂದ್ಯ ಕೂಡ ಆಡಿದ ಅನುಭವವಿಲ್ಲ. ಇದು ಬೆಂಗಳೂರು ಪಿಚ್ ಅಲ್ಲ, ಹೊದ್ದ ಬದಲು ಪಂತ್ ಅವರನ್ನು ಆಡಿಸಬೇಕಿತ್ತು. ಅವರಿಗೆ ಅಲ್ಲಿ ಆಡಿದ ಅನುಭವ ಇದೆ ಎಂದು ಸೆಹ್ವಾಗ್ ಹೇಳಿದ್ದಾರೆ. ಗಬ್ಬಾ ಟೆಸ್ಟ್ ಪಂದ್ಯದಲ್ಲಿ ರಿಷಬ್ ಪಂತ್ ಆಸ್ಟ್ರೇಲಿಯನ್ನರ ಗರ್ವ ಬಂಗ ಮಾಡಿದ್ದೂ ಎಲ್ಲರಿಗು ನೆನಪಿದೆ. ಆದ್ದರಿಂದ ರಿಷಬ್ ಪಂತ್ ತಂಡದಲ್ಲಿ ಇರುವುದು ಉತ್ತಮ ಎಂದು ಹೇಳಿದ್ದಾರೆ. ನಿಮ್ಮ ಅಭಿಪ್ರಾಯ ಏನು ಇದರ ಬಗ್ಗೆ?

Leave A Reply

Your email address will not be published.