ಮದುವೆಯಾಗಲು ಹುಡುಗ ಸಿಗುತ್ತಿಲ್ಲ ಎಂದ ಖ್ಯಾತ ನಟಿ, ಕೊನೆಗೆ ಬೇಸತ್ತು ಎಂತಹ ನಿರ್ಧಾರ ತೆಗೆದುಕೊಂಡಿದ್ದಾರೆ ಗೊತ್ತೇ??

230

ಸೋಲೊಗ್ಯಾಮಿ ಪ್ರವೃತ್ತಿ ಈಗ ಭಾರತದಲ್ಲಿ ಸಹ ಶುರುವಾಗಿದೆ. ಸೋಲೊಗ್ಯಾಮಿ ಎಂದರೆ ತನ್ನನ್ನು ತಾನೇ ಮದುವೆ ಆಗುವುದು. ಭಾರತದ ಗುಜರಾತ್ ನ ಹುಡುಗಿ ಕ್ಷಮಾ ಬಿಂದು ತನ್ನನ್ನು ತಾನೇ ಮದುವೆಯಾಗಿ ಸಂಚಲನ ಸೃಷ್ಟಿಸಿದ್ದಳು. ಇದೀಗ ಎರಡನೆಯದಾಗಿ ಹಿಂದಿ ಕಿರುತೆರೆಯ ಖ್ಯಾತ ನಟಿ ಕನಿಷ್ಕಾ ಸೋನಿ ಸಹ ತನ್ನನ್ನು ತಾನೇ ಮದುವೆಯಾಗಿ ಶಾಕ್ ನೀಡಿದ್ದಾರೆ. ಇತ್ತೀಚೆಗೆ ವಧುವಿನ ಅಲಂಕಾರದಲ್ಲಿರುವ ಫೋಟೋಗಳನ್ನು ಶೇರ್ ಮಾಡಿ, ತನ್ನನ್ನು ತಾನೇ ಮದುವೆ ಆಗಿರುವ ವಿಚಾರ ತಿಳಿಸಿ, ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡಿದ್ದರು..

ಬಳಿಕ ಪ್ರೆಸ್ ಮೀಟ್ ಒಂದರಲ್ಲಿ ಮಾತನಾಡಿ, ತಾವು ಈ ನಿರ್ಧಾರ ಮಾಡಿದ್ದು ಯಾಕೆ ಎಂದು ತಿಳಿಸಿದ್ದಾರೆ. ಆಕೆ ಮುಂಬೈಗೆ ಬಂದ ಬಳಿಕ ಸಾಕಷ್ಟು ಹುಡುಗರು ಪ್ರೊಪೋಸ್ ಮಾಡಿದ್ದು, 1200 ರಿಂದ 1300 ಹುಡುಗರನ್ನು ರಿಜೆಕ್ಟ್ ಮಾಡಿರುವುದಾಗಿ ಹೇಳಿದ್ದಾರೆ. “ನಾನು ಕೆಲವು ಪುರುಷರ ಜೊತೆಗೆ ರಿಲೇಶನ್ಷಿಪ್ ನಲ್ಲಿದ್ದೆ, ಆದರೆ ಅದ್ಯಾವುದು ಒಳ್ಳೆಯ ರೀತಿಯಲ್ಲಿ ಇರಲಿಲ್ಲ. ಅವೆಲ್ಲವೂ ನೋವು ನೀಡಿದೆ, ಹಿಂಸಾತ್ಮಕವಾಗಿತ್ತು. ಒಬ್ಬ ಸ್ಟಾರ್ ನಟನ ಜೊತೆಗೆ ರಿಲೇಶನ್ಷಿಪ್ ನಲ್ಲಿದ್ದು, ಆತನ ನಿಜ ಸ್ವರೂಪ ಏನು ಎಂದು ಒಂದೆರಡು ತಿಂಗಳಲ್ಲಿ ಗೊತ್ತಾಯಿತು. ಮತ್ತೊಬ್ಬ ವ್ಯಕ್ತಿ ರಿಲೇಶನ್ಷಿಪ್ ನಲ್ಲಿದ್ದಾಗ ಬೇರೆ ರೀತಿಯೇ ವರ್ತಿಸುತ್ತಿದ್ದ, ಪ್ರತಿ 15 ನಿಮಿಷಕ್ಕೆ ಒಂದು ಸಾರಿ ಕೋಪ ಮಾಡಿಕೊಳ್ಳುತ್ತಿದ್ದ, ಆ ಸಂಬಂಧದಿಂದ ಒಂದೂವರೆ ವರ್ಷದಲ್ಲಿ ಹೊರಗೆ ಬಂದೆ. ಆದರೆ ಆ ಘಟನೆಗಳಿಂದ ಹೊರಬರಲು 5 ವರ್ಷ ಬೇಕಾಯಿತು..

ಸಿನಿಮಾ ನಿರ್ದೇಶಕರು ನಿರ್ಮಾಪಕರು ಸಹ ಅದೇ ರೀತಿ ಇದ್ದರು. ಒಂದು ಸಾರಿ ನಿರ್ಮಾಪಕರೊಬ್ಬರು ನನ್ನ ಹೋಟೆಲ್ ರೂಮ್ ಗೆ ಬಾ ನಿನ್ನ ಸೊಂಟ ನೋಡಬೇಕು ಎಂದು ಹೇಳಿದ್ದರು. ನಾನು ಸಿನಿಮಾದಲ್ಲಿ ಬೇಕಿದ್ದರೆ ಸೊಂಟ ತೋರಿಸುತ್ತೇನೆ ಎಂದು ಹೇಳಿದೆ, ಆತ ಇಲ್ಲಿಗೆ ಬಂದು ತೋರಿಸು ಎಂದು ಹೇಳಿದರು. ಆ ಸಿನಿಮಾ ಇಂದ ಹೊರಬಂದೆ, ಅಕ್ಷಯ್ ಕುಮಾರ್ ಅವರ ಸಿನಿಮಾದಲ್ಲಿ ಐಟಂ ಸಾಂಗ್ ಗೆ ಹೆಜ್ಜೆ ಹಾಕುವ ಅವಕಾಶ ಸಿಕ್ಕಿತು, ಅದು ಕೂಡ ಕೈತಪ್ಪಿ ಹೋಯಿತು. ನಂತರ ತಮಿಳು ಸಿನಿಮಾದ ಐಟಂ ಸಾಂಗ್ ಗೆ ಹೆಜ್ಜೆ ಹಾಕಿದೆ. ನನಗೆ ಯಾವ ಪುರುಷರ ಮೇಲು ನಂಬಿಕೆ ಇಲ್ಲ. ಈಗ ಲೈಂಗಿಕತೆಗು ಪುರುಷರ ಅವಶ್ಯಕತೆ ಇಲ್ಲ. ಹಾಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ..” ಎಂದು ಹೇಳಿದ್ದಾರೆ ಕನಿಷ್ಕಾ ಸೋನಿ.

Leave A Reply

Your email address will not be published.