ಹಿಂದಿ ಸಿನೆಮಾ ರಂಗದಲ್ಲಿ ಹೊಸ ದಾಖಲೆ ನಿರ್ಮಿಸಿದ KGF ಚಾಪ್ಟರ್ 2? ಯಾವುದೇ ಬಾಲಿವುಡ್ ಸ್ಟಾರ್ಗಳು ಈ ದಾಖಲೆ ಮಾಡಿಲ್ಲ.

248

KGF KGF KGF ಹೌದು ಇದೊಂದು ಹೆಸರು ಕಳೆದ ಕೆಲವು ವರ್ಷಗಳಿಂದ ಬಹಳಷ್ಟು ಸದ್ದು ಮಾಡುತ್ತಿದೆ. ಈ ಒಂದು ಹೆಸರಿನ ಹಿಂದೆ ಅದೆಷ್ಟೋ ಅಸಂಖ್ಯಾತ ಮಂದಿ ಅಭಿಮಾನಿಗಳು ಇದ್ದಾರೆ. ಕಾರಣ ಈ ಚಿತ್ರ ತಂಡ ಅದರ ಹಿಂದೆ ಹಾಕಿರುವ ಪರಿಶ್ರಮ. ಅಷ್ಟೊಂದು ಸುಲಭದಲ್ಲಿ ಸ್ಟಾರ್ ಡಂ ಯಾರಿಗೂ ಸಿಗುವುದಿಲ್ಲ. 6 ವರ್ಷಗಳ ಕಾಲ ಯಾವುದೇ ಸಿನೆಮಾ ಮಾಡದೆ ಕೇವಲ ಒಂದೇ ಸಿನಿಮಾಗಾಗಿ ತನ್ನ ಜೀವನ ವ್ಯಯಿಸಿದ್ದಾರೆ ಯಶ್. ಇದಕ್ಕೆ ತಕ್ಕಂತೆ ಅವರು ಹೆಸರು ಕೂಡ ಮಾಡಿದ್ದಾರೆ.

ಇದೀಗ ಬಾಲಿವುಡ್ ನ ಸ್ಟಾರ್ ನಟರೆಲ್ಲ ತಮ್ಮನ್ನು ಮುಟ್ಟಿ ನೋಡಿಕೊಳ್ಳುವಂತೆ ಒಂದು ಸಾಧನೆ ಮಾಡಿದ್ದಾರೆ. ಈ ಹಿಂದೆ ಬಾಲಿವುಡ್ ನಲ್ಲಿ ಆಗದ ಸಾಧನೆ ಮಾಡಿದ್ದಾರೆ KGF ಚಿತ್ರ ತಂಡ. ಹೌದು ಇದೆ 14 ರಂದು KGF ಚಾಪ್ಟರ್ 2 ಚಿತ್ರ ತೆರೆ ಕಂಡಿತ್ತು. ಕೇವಲ ಹಿಂದಿ ಅವತರಿಣಿಕೆ ಯಲ್ಲೆ ಸಿನೆಮಾ 54 ಕೋಟಿ ಕಲೆಕ್ಷನ್ ಮಾಡಿದೆ. ಇದು ಹಿಂದಿ ಭಾಷೆಯಲ್ಲಿ ತೆರೆಕಂಡ ಸಿನೆಮಾಗಳಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನೆಮಾ ಆಗಿದೆ. ಯಾವುದೇ ಬಾಲಿವುಡ್ ಮೂವಿ ಕೂಡ ಮೊದಲ ದಿನ ಇಷ್ಟೊಂದು ಕಲೆಕ್ಷನ್ ಮಾಡಿಲ್ಲ.

ಹೌದು ಬಾಲಿವುಡ್ ಸಿನಿಮಾ ಇಂಡಸ್ಟ್ರಿ ಭಾರತದಲ್ಲಿ ಸಿನೆಮಾ ರಂಗಕ್ಕೆ ಕಿಂಗ್ ಆಗಿತ್ತು ಆದರೆ ದಕ್ಷಿಣ ಭಾರತದ ಸಿನೆಮಾ ಒಂದು ಈಗ ಬಾಕ್ಸ್ ಆಫಿಸ್ ಅನ್ನು ಕೊಳ್ಳೆ ಹೊಡೆದಿರುವ ವಿಚಾರ ಎಲ್ಲರಿಗೂ ಶಾಕಿಂಗ್. ಅದೇನೇ ಆಗಲಿ ಸಿನೆಮಾದ ಕಥೆಗೆ ಮತ್ತು ಅದರ ಹಿಂದಿನ ಪರಿಶ್ರಮಕ್ಕೆ ಜನರು ಬೆಲೆ ಕೊಡುತ್ತಿರುವುದು ಕಂಡು ಬರುತ್ತಿದೆ. ಕೇವಲ ಹೆಸರು ಸ್ಟಾರ್ ಡo ಗೆ ಓಲೈಕೆ ಆಗುತ್ತಿದ್ದ ಸಿನೆಮಾ ರಂಗ ಈಗ ಬದಲಾಗಿದೆ ಎಂಬುವುದಕ್ಕೆ KGF ಸಿನೆಮಾ ಸಾಕ್ಷಿ ಆಗಿದೆ.

Leave A Reply

Your email address will not be published.