ಹೊಸ ಅವತಾರದಲ್ಲಿ ಯಶ್? ಕೆಜಿಎಫ್ 3 ಕಾಯುತ್ತಿದ್ದ ಅಭಿಮಾನಿಗಳಿಗೆ ಬಿಗ್ ಶಾಕ್ ಕೊಟ್ಟ ಯಶ್?

46

ಯಶ್ ಅವರು ಇಡೀ ಬಾಕ್ಸ್ ಆಫೀಸ್ ಉಡಿಸ್ ಮಾಡಿದ್ದ ನಾಯಕ. ಎಲ್ಲಿಂದಲೋ ಸಣ್ಣ ಹಳ್ಳಿಯಿಂದ ಬಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಕಲಾವಿದ. ಒಳ್ಳೆಯ ಕಥೆ ಮತ್ತು ನಟನೆಗೆ ಭಾಷೆಯ ಯಾವುದೇ ಅಡ್ಡಿಯಿಲ್ಲ ಎಂಬುದನ್ನು ಸಾಧಿಸಿ ತೋರಿಸಿದ ಹೀರೋ ಇವರು. ಕನ್ನಡ ಸಿನೆಮಾ ಒಂದು ಮಾಸ್ ಸಿನೆಮಾ ಆಗಿ ಎಲ್ಲಾ ರೀತಿಯ ಪ್ರೇಕ್ಷಕರ ಮನಸೂರೆ ಗೊಂಡು ಬಹಳ ಯಶಸ್ಸು ಕಂದ ಸಿನಿಮ. ಇದೀಗ ಯಶ್ ಅವರ ಅಭಿಮಾನಿಗಳಿಗೆ ಗುಡ್ ನ್ಯೂಸ್ ಒಂದನ್ನು ಕೊಟ್ಟಿದ್ದಾರೆ. ಹೌದು ಯಶ್ ಅವರ ಮುಂದಿನ ಸಿನೆಮಾಗೆ ಮುಹೂರ್ತ ಫಿಕ್ಸ್ ಆಗಿದೆ.

ಎಲ್ಲಾ ಅಭಿಮಾನಿಗಳು ಕೆಜಿಎಫ್ ಚಾಪ್ಟರ್ 3 2024 ಕ್ಕೆ ಬರುತ್ತದೆ ಎಂದು ಕಾದು ನೋಡುತ್ತಿದ್ದರು. ಕೆಜಿಎಫ್ ಸೀರೀಸ್ ಮುಗಿಸಿ ನಂತರ ಬೇರೆ ಸಿನೆಮಾ ಕೈ ಹಾಕುತ್ತಾರೆ ಎಂದು ಎಲ್ಲಾ ಅಭಿಮಾನಿಗಳು ಅಂದುಕೊಂಡಿದ್ದರು . ಆದರೆ ಇದೀಗ ಎಲ್ಲರೂ ಅಚ್ಚರಿ ಪಡುವಂತೆ ಸುದ್ದಿಯೊಂದು ಹೊರ ಬಂದಿದೆ. ಯಶ್ ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಇದರ ಬಗ್ಗೆ ಮಾಹಿತಿ ಹಂಚಿ ಕೊಂಡಿದ್ದಾರೆ. ಈ ಬಾರಿ ಅವರು ಹೊಂಬಾಳೆ ಅಲ್ಲ ಬದಲಾಗಿ KVN ಪ್ರೊಡಕ್ಷನ್ ಹೌಸ್ ಜೊತೆ ಸಿನೆಮಾ ಮಾಡಲು ಮುಂದೆ ಬಂದಿದ್ದಾರೆ.

ಹೌದು ಡಿಸೆಂಬರ್ 8 ರಂದು ಬೆಳಿಗ್ಗೆ 9.55ಕೆ ಹೊಸ ಸಿನಿಮಾದ ಟೈಟಲ್ ಲಾಂಚ್ ಆಗಲಿದೆ ಎಂದು ಬರೆದುಕೊಂಡಿದ್ದಾರೆ. ಸ್ವಲ್ಪ ದಿನಗಳ ಹಿಂದೆ loading ಎಂಬ ಬರಹ ಇರುವ ಚಿತ್ರದ ಪ್ರೊಫೈಲ್ ಫೋಟೋ ಹಾಕಿ ಸಂಚಲನ ಮೂಡಿಸಿದ್ದ ಇವರು ಇದೀಗ ಅದನ್ನು ಯಾತಕ್ಕಾಗಿ ಹಾಕಿದ್ದಾರೆ ಎಂದು ಸ್ಪಷ್ಟನೆ ಬರುವಂತೆ ಈ ಹೊಸ ವಿಚಾರ ಹಂಚಿಕೊಂಡಿದ್ದಾರೆ. ಮುಂದೆ ಬರುವ ಸಿನೆಮಾ ಕೆಜಿಎಫ್ ಮಾದರಿಯಲ್ಲಿ ಸದ್ದು ಮಾಡಲಿ ಎಂದು ನಾವು ಕೂಡ ಆಶಿಸುತ್ತೇವೆ.

Leave A Reply

Your email address will not be published.