ನೋಡುವವರಿಲ್ಲದೆ ಸಪ್ಪೆಯಾಗಿದ್ದ ಐಪಿಎಲ್ ಗೆ ಹೊಸ ಹುರುಪು ನೀಡಿದ್ದು RCB – LSG ಪಂದ್ಯ. ಹಾಟ್ ಸ್ಟಾರ್ ಮೂಲಕ ಪಂದ್ಯ ನೋಡಿದ ಜನರ ಸಂಖ್ಯೆ ಎಷ್ಟು ಗೊತ್ತೇ?

258

ಇಂಡಿಯನ್ ಪ್ರೀಮಿಯರ್ ಲೀಗ್ ೧೫ ನೇ ಆವೃತ್ತಿ ಮುಕ್ತಾಯ ಹಂತದಲ್ಲಿದೆ. ಆದರೆ ಈ ಬಾರಿಯ ಐಪಿಎಲ್ ತನ್ನ ಇತಿಹಾಸದಲ್ಲೇ ವೀಕ್ಷಕರ ಸಂಖ್ಯೆ ತುಂಬಾ ಪ್ರಮಾಣದಲ್ಲಿ ಕಡಿಮೆ ಆಗಿತ್ತು. ಇದಕ್ಕೆ ಮರು ಸ್ಫೂರ್ತಿ ನೀಡಿದ್ದು RCB ಹಾಗು LSG ನಡುವೆ ನಡೆದ ಎಲಿಮಿನೇಟರ್ ಪಂದ್ಯ. ಡಿಸ್ನಿ+ ಹಾಟ್ ಸ್ಟಾರ್ ಅಲ್ಲಿ ಭರ್ಜರಿ ವೀಕ್ಷಣೆ ಪಡೆಯುವ ಮೂಲಕ ದಾಖಲೆ ನಿರ್ಮಿಸಿದೆ. ಇದೆ ರೀತಿ ಹಳೆಯ ದಾಖಲೆ ಕೂಡ ಸರಿಸಿದೆ. ವಿರಾಟ್ ಕೊಹ್ಲಿ ಹಾಗು ಡುಪ್ಲೆಸಿಸ್ ಅವರ ವಿಕೆಟ್ ಕಳೆದುಕೊಂಡು ತೊಂದರೆ ಅನುಭವಿಸಿದ RCB ಗೆ ಆಸರೆಯಾದದ್ದು ರಜತ್ ಪಾಟೀದಾರ್.

ಐಪಿಎಲ್ ನ ಅಧಿಕೃತ ಸ್ಟ್ರೀಮಿಂಗ್ ಪಾರ್ಟ್ನರ್ ಡಿಸ್ನಿ + ಹಾಟ್ ಸ್ಟಾರ್ RCB ಹಾಗು LSG ನಡುವಿನ ಪಂದ್ಯದಲ್ಲಿ ಅದು ಕೂಡ RCB ಬ್ಯಾಟಿಂಗ್ ಮಾಡುವ ಸಮಯ ಬರೋಬ್ಬರಿ ೮.೭ ಮಿಲಿಯಾನ್ ಅಂದರೆ ೮೭ ಲಕ್ಷ ಜನರಿಂದ ವೀಕ್ಷಣೆಗೆ ಒಳಪಟ್ಟಿತು. ಪಂದ್ಯದ ಮೊದಲರ್ಧದಲ್ಲಿ ೮.೨ ಮಿಲಿಯನ್ ವೀಕ್ಷಕರಿದ್ದರೆ, ೧೮ ನೇ ಓವರ್ ಗೆ ವೀಕ್ಷಕರ ಸಂಖ್ಯೆ ೮.೩ ಮಿಲಿಯನ್ ಗೆ ಏರಿಕೆ ಆಯಿತು. ಇದಕ್ಕಿಂತ ಮೊದಲ ಉತ್ತಮ ವೀಕ್ಷಣೆ ಇದಿದ್ದು ಈ ಬಾರಿಯ ಚೆನ್ನೈ ಹಾಗು ಮುಂಬೈ ನಡುವಿನ ಪಂದ್ಯದ ಸಮಯದಲ್ಲಿ. ಆ ಪಂದ್ಯದ ಒಟ್ಟು ವೀಕ್ಷಣೆ ೮.೩ ಮಿಲಿಯಾನ್ ಇತ್ತು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗು ಲೂಕ್ನೋ ತಂಡದ ನಡುವಿನ ಪಂದ್ಯದ ವೀಕ್ಷಣೆ ಈ ಆವೃತ್ತಿಯ ವೀಕ್ಷಣೆಗಳಲ್ಲೇ ಅತಿ ಹೆಚ್ಚಾಗಿದ್ದು ದಾಖಲೆ ನಿರ್ಮಿಸಿದೆ. ಇನ್ನು ಅತಿ ಹೆಚ್ಚು ಒಟ್ಟಾರೆ ವೀಕ್ಷಣೆ ಗೊಂಡ ಪಂದ್ಯ ಎಂದರೆ ಐಪಿಎಲ್ ೧೨ ನೇ ಆವೃತ್ತಿಯ ಫೈನಲ್ ಮ್ಯಾಚ್ ಸಂದರ್ಭದಲ್ಲಿ. ಆ ಪಂದ್ಯದಲ್ಲಿ ಒಟ್ಟು ವೀಕ್ಷಕರು ಇದಿದ್ದು ಬರೋಬ್ಬರಿ ೧೮ ಮಿಲಿಯನ್. ಇದು ಕೇವಲ ಡಿಸ್ನಿ + ಹಾಟ್ ಸ್ಟಾರ್ ಲೆಕ್ಕವಷ್ಟೆ ಇನ್ನು ಟಿವಿ ಅಲ್ಲಿ ನೋಡಿದವರ ಸಂಖ್ಯೆ ಬೇರೇನೇ ಇದೆ. ಅದೇನೇ ಇರಲಿ ಈ ಬಾರಿಯ ಕಳೆ ಕಳೆದುಕೊಂಡಿದ್ದ ಐಪಿಎಲ್ ಗೆ ಮರುಜೀವ ಕೊಟ್ಟಿದ್ದು ಬೆಂಗಳೂರು ಹಾಗು ಲೂಕ್ನೋ ತಂಡದ ನಡುವಿನ ಪಂದ್ಯ.

Leave A Reply

Your email address will not be published.