ಪಠಾಣ್ ಸಹೋದರರ ಬೊಂಬಾಟ್ ಆಟ, ಲೆಜೆಂಡ್ ಕ್ರಿಕೆಟ್ ಲೀಗ್ ಅಲ್ಲಿ ಮೊದಲ ಪಂದ್ಯ ಗೆದ್ದ ಭಾರತದ ಮಹಾರಾಜಾ ತಂಡ.

430

ಲೆಜೆಂಡ್ಸ್ ಕ್ರಿಕೆಟ್ ಲೀಗ್ ಪ್ರಾರಂಭವಾಗಿದೆ. ಭಾರತ ತಂಡ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಮಹಾರಾಜಾ ತಂಡ ಏಶಿಯನ್ ಲಯನ್ಸ್ ತಂಡವನ್ನು ೬ ವಿಕೆಟ್ಗಳಿಂದ ಸೋಲಿಸಿದೆ. ಈ ಟೂರ್ನಿಯಲ್ಲಿ ಒಟ್ಟು ೩ ತಂಡಗಳು ಭಾಗವಹಿಸಿದೆ. ಇದರಲ್ಲಿ ಭಾರತದ ಮಹಾರಾಜಾ, ಶ್ರೀಲಂಕಾ ಹಾಗು ಪಾಕಿಸ್ತಾನದ ಏಶಿಯನ್ ಲಯನ್ಸ್ ಹಾಗು ಆಸ್ಟ್ರೇಲಿಯಾ ಹಾಗು ಇತರ ದೇಶಗಳ ವರ್ಲ್ಡ್ಸ್ ಜಯಂಟ್ಸ್ ತಂಡಗಳು ಭಾಗವಹಿಸಿದೆ. ಈ ತಂಡಗಳಲ್ಲಿ ಭಾಗವಹಿಸುವ ಎಲ್ಲ ಆಟಗಾರರು ಮಾಜಿ ಕ್ರಿಕೆಟ್ ಆಟಗಾರರು.

ನಿನ್ನೆ ನಡೆದ ಅಂದರೆ ೨೦ ಗುರುವಾರ ೨೦೨೨ ರಂದು ಎಮಿರೇಟ್ ಅಲ್ಲಿ ನಡೆದ ಲೆಜೆಂಡ್ಸ್ ಲೀಗ್ ನ ಮೊದಲ ಪಂದ್ಯ ಏಷ್ಯಾ ಲಯನ್ಸ್ ಹಾಗು ಇಂಡಿಯಾ ಮಹಾರಾಜ್ ನಡುವೆ ನಡೆದಿತ್ತು. ಈ ಪಂದ್ಯದಲ್ಲಿ ವೀರೇಂದ್ರ ಸೆಹ್ವಾಗ್ ಅಲ್ಲದೆ ಯುವರಾಜ್ ಸಿಂಗ್, ಹರ್ಭಜನ್ ಸಿಂಗ್ ಆರ್. ಪಿ. ಸಿಂಗ್ ತಂಡದಲ್ಲಿ ಇರಲಿಲ್ಲ. ಈ ಪಂದ್ಯದಲ್ಲಿ ಪಠಾಣ್ ಸಹೋದರರಾದ ಇರ್ಫಾನ್ ಪಠಾಣ್ ಹಾಗು ಯೂಸಫ್ ಪಠಾಣ್ ತಮ್ಮ ಬೊಂಬಾಟ್ ಪ್ರದರ್ಶನ ಮೂಲಕ ತಂಡ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಏಶಿಯನ್ ಲಯನ್ಸ್ ನಿಗದಿತ ೨೦ ಓವರ್ಗಳಲ್ಲಿ ೭ ವಿಕೆಟ್ ಕಳೆದುಕೊಂಡು ೧೭೫ ರನ್ ಗಳಿಸಿತು.

ಏಶಿಯನ್ ಲಯನ್ಸ್ ಪರ ಉಪುಲ್ ತರಂಗ ೪೬ ಎಸೆತಗಳಲ್ಲಿ ೬೬ ರನ್ ಗಳಿಸಿದರೆ ಮೀಸಭಾ ಉಲ್ ಹಕ್ ೩೦ ಎಸೆತಗಳಲ್ಲಿ ೪೪ ರನ್ ಗಳಿಸಿ ತಂಡವನ್ನು ೧೭೫ ರನ್ ಗಳಿಸಿ ಉತ್ತಮ ಗುರಿ ನೀಡುವಲ್ಲಿ ಸಫಲರಾದರು. ೧೭೬ ರನ್ ಗುರಿ ಬೆನ್ನಟ್ಟಿದ ಭಾರತದ ಮಹಾರಾಜಾ ತಂಡಕ್ಕೆ ಉತ್ತಮ ಆರಂಭ ದೊರಕಲಿಲ್ಲ. ೩೪ ರನ್ ಗಾಳಿಸುವಷ್ಟರಲ್ಲಿ ತಂಡ ೩ ವಿಕೆಟ್ ಕಾಕೆದುಕೊಂಡಿತ್ತು. ಆದರೆ ನಾಯಕ ಮೊಹಮ್ಮದ್ ಕೈಫ್ ತಂಡವನ್ನು ಸ್ವಲ್ಪ ಮಟ್ಟಿಗೆ ಮುನ್ನಡೆಸುವಲ್ಲಿ ಸಫಲರಾದರು. ಅದೇ ರೀತಿ ಯೂಸುಫ್ ಪಠಾಣ್ ಗೆ ಉತ್ತಮ ಜೊತೆಯಾಟ ನೀಡಿದರು. ಯೂಸುಫ್ ಪಠಾಣ್ ಸೋಲುವ ಪಂದ್ಯವನ್ನು ತಮ್ಮ ಬ್ಯಾಟಿಂಗ್ ಇಂದ ಸಂಪೂರ್ಣ ಚಿತ್ರಣ ಬದಲಿಸಿ ಬಿಟ್ಟರು. ೪೦ ಎಸೆತಗಳಲ್ಲಿ ೮೦ ರನ್ ಗಳಿಸಿ ಭಾರತದ ಗೆಲುವನ್ನು ಭದ್ರ ಪಡಿಸಿದರು.

ಯೂಸುಫ್ ಬ್ಯಾಟ್ ಇಂದ ೯ ಬೌಂಡರಿ ಹಾಗು ೫ ಸಿಕ್ಸರ್ ಗಳಿದ್ದವು. ಆದರೆ ಪಂದ್ಯ ಗೆಲುವವರೆಗೆ ನಿಲುವಲ್ಲಿ ಎಡವಿ ರನೌಟ್ ಗೆ ಪೆವಿಲಿಓನ್ ಸೇರಬೇಕಾಯಿತು. ನಂತರ ಕೈಫ್ ಜೊತೆ ಕೈ ಜೋಡಿಸಿದ ಇರ್ಫಾನ್ ಪಠಾಣ್ ೧೦ ಎಸೆತಗಳಲ್ಲಿ ೨೧ ರನ್ ಮಾಡುವ ಮೂಲಕ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದರು. ಮೊಹಮ್ಮದ್ ಕೈಫ್ ನಿಧಾನಗತಿ ಆಡುವ ಮೂಲಕ ೩೭ ಎಸೆತಗಳಲ್ಲಿ ೪೨ ರನ್ ಗಳಿಸಿ ಅಜೇಯರಾಗಿ ಉಳಿದು ತಂಡದ ಗೆಲುವಿನ ಪಾತ್ರದಾರಿಯಾದರು. ಏಶಿಯನ್ ಲೆಜೆಂಡ್ ಪರ ಶೋಯಿಬ್ ಅಕ್ತರ್ ಹಾಗು ಉಮರ್ ಗುಲ್ ತಲಾ ಒಂದು ವಿಕೆಟ್ ಪಡೆಯುವ ಮೂಲಕ ಮಹಾರಾಜಾ ತಂಡವನ್ನು ಕಟ್ಟಿ ಹಾಕಲು ಪ್ರಯತ್ನಿಸಿದರೂ.

Leave A Reply

Your email address will not be published.