ಬೇಜವಾಬ್ದಾರಿ ಆಟವಾಡಿ ತಂಡವನ್ನು ಸದಾ ಸಂಕಷ್ಟಕ್ಕೆ ಸಿಲುಕಿಸುತ್ತಿರುವ ರಿಷಬ್ ಪಂತ್ ರವರ ಕುರಿತು ಗಂಭೀರ್ ಹೇಳಿದ್ದೇನು ಗೊತ್ತೇ??

166

ಏಷ್ಯಾಕಪ್ 2022ನ ಸೂಪರ್ 4 ಹಂತದ ಎರಡು ಪಂದ್ಯಗಳಲ್ಲೂ ಭಾರತ ತಂಡ ಸೋಲು ಕಂಡಿದೆ. ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ತಂಡದ ಆರಂಭ ಚೆನ್ನಾಗಿಯೇ ಇತ್ತು, 10 ಓವರ್ ಮುಗಿಯುವಷ್ಟರಲ್ಲಿ ಭಾರತ, 3 ವಿಕೆಟ್ ನಷ್ಟಕ್ಕೆ ಸುಮಾರು 100 ರನ್ ಗಳ ವರೆಗೂ ಕಲೆಹಾಕಿತ್ತು, ಆ ಸಮಯಕ್ಕೆ ಕ್ರೀಸ್ ಗೆ ಬಂದ ರಿಷಬ್ ಪಂತ್, 12 ಬಾಲ್ ಗಳಲ್ಲಿ ಸುಮಾರು 14 ರನ್ ಗಳಿಸಿದರು, ಇದರಲ್ಲಿ 2 ಫೋರ್ ಸಹ ಇತ್ತು. ಅದರ ನಂತರ ರಿವರ್ಸ್ ಸ್ಟೀಪ್ ಶಾಟ್ ಹೊಡೆದು ಮತ್ತೊಂದು ಬೌಂಡರಿ ಬಾರಿಸುವ ಪ್ರಯತ್ನದಲ್ಲಿದ್ದ ರಿಷಬ್ ಪಂತ್, ಪಾಕಿಸ್ತಾನ್ ನ ಆಸಿಫ್ ಆಲಿ ಅವರಿಗೆ ಸುಲಭವಾದ ಕ್ಯಾಚ್ ಆಗಿ ಔಟ್ ಆದರು.

ನಂತರ ಬಂದ ಟೀಮ್ ಇಂಡಿಯಾದ ಬ್ಯಾಟರ್ ಗಳು ಸ್ಥಿರವಾಗಿ ಬ್ಯಾಟಿಂಗ್ ಪ್ರದರ್ಶನ ನೀಡದ ಕಾರಣ, 20 ಓವರ್ ಗಳ ಕೊನೆಗೆ ಭಾರತ ತಂಡವು 7 ವಿಕೆಟ್ ಗಳ ನಷ್ಟಕ್ಕೆ, 181 ರನ್ ಕಲೆಹಾಕಿತು. ಎರಡನೇ ಇನ್ನಿಂಗ್ಸ್ ನಲ್ಲಿ ಕಳಪೆ ಬೌಲಿಂಗ್ ಪ್ರದರ್ಶನದಿಂದ 19.5 ಓವರ್ ನಲ್ಲಿ ಪಾಕಿಸ್ತಾನ್ ತಂಡ 182 ರನ್ ಗಳಿಸಿ, ಗೆಲುವು ಸಾಧಿಸಿತು. ಇಲ್ಲಿ ರಿಷಬ್ ಪಂತ್ ಅವರ ಮೇಲೆ ಹೆಚ್ಚಿನ ಜವಾಬ್ದಾರಿ ಹಾಗೂ ಅವರಿಗೆ ಉತ್ತಮ ಪ್ರದರ್ಶನ ನೀಡಲು ಒಂದು ಅವಕಾಶ ಸಹ ಸಿಕ್ಕಿತು, ಆದರೆ ಅವರು ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳಲಿಲ್ಲ, ಬೇಜವಾಬ್ದಾರಿ ತನದಿಂದ ಬ್ಯಾಟಿಂಗ್ ಮಾಡಿದ್ದಾರೆ ಎನ್ನುವ ಅಭಿಪ್ರಾಯ ಶುರುವಾಗಿದೆ. ಈ ಬಗ್ಗೆ ಭಾರತದ ಮಾಜಿ ಆಟಗಾರ ಗೌತಮ್ ಗಂಭೀರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಟೆಸ್ಟ್ ಕ್ರಿಕೆಟ್ ಪಂದ್ಯಗಳಲ್ಲಿ ರಿವರ್ಸ್ ಸ್ಟೀಪ್ ಆಡುತ್ತಾರೆ ಎಂದು ನನಗೆ ಗೊತ್ತಿದೆ, ಆದರೆ ಟಿ20 ಪಂದ್ಯದಲ್ಲಿ ಈ ಶಾಟ್ ನ ಅಗತ್ಯವೇ ಇರಲಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಗ್ರ ಪ್ಲೇಯರ್ ಆಗಿದ್ದರೂ, ಈ ಹಂತದಲ್ಲಿ ಈ ರೀತಿಯ ಶಾಟ್ ಹೊಡೆಯುವ ಅಗತ್ಯ ಇರಲಿಲ್ಲ. ಇದು ಅವರ ಶಾಟ್ ಅಲ್ಲ, ಲಾಂಗ್ ಆನ್ ಅಥವಾ ಡೀಪ್ ಮಿಡ್ ವಿಕೆಟ್ ರಿಷಬ್ ಪಂತ್ ಅವರ ಶಾಟ್ ಆಗಿದೆ. ಆ ಸಮಯದಲ್ಲಿ ರಿವರ್ಸ್ ಸ್ಟೀಪ್ ಶಾಟ್ ಬೇಕಿರಲಿಲ್ಲ. ಇದು ರಿಷಬ್ ಪಂತ್ ಅವರ ಶಕ್ತಿಯು ಅಲ್ಲ..” ಎಂದು ಹೇಳಿ ರಿಷಬ್ ಪಂತ್ ಅವರ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.