ವಿರಾಟ್ ಕೊಹ್ಲಿಗೆ ಬಿಸಿಸಿಐ ಮಾಡಿದ್ದು ಇದೀಗ ರವೀಂದ್ರ ಜಡೇಜಾಗು CSK ಆಡಳಿತ ಮಾಡಿತೇ? ಈ ಘಟನೆಗಳು ಇದಕ್ಕೆ ಪೂರಕ ಎಂಬಂತೆ ನಡೆದಿದೆ.

226

ರವೀಂದ್ರ ಜಡೇಜಾ ಅತ್ಯುತ್ತಮ ಬ್ಯಾಟ್ಸಮನ್, ಅತ್ಯುತ್ತಮ ಸ್ಪಿನ್ನರ್ ಹಾಗೇನೇ ಅತ್ಯತ್ತಮ ಫೀಲ್ಡರ್. ಇದರಲ್ಲಿ ಎರಡನೇ ಮಾತಿಲ್ಲ. ತಮ್ಮ ಉತ್ತಮ ಪ್ರದರ್ಶನ ಇಂದ ಇಂದಿಗೂ ಭಾರತೀಯ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಅದೇ ರೀತಿ ಬೇರೆ ಯಾವುದೇ ತಂಡಕ್ಕೆ ಹೋಗದೆ ಐಪಿಎಲ್ ಅಲ್ಲಿ ಚೆನ್ನೈ ಪರ ಇಂದಿಗೂ ಆಡುತ್ತಿದ್ದಾರೆ. ಇದರಲ್ಲಿ ಗೊತ್ತಾಗುತ್ತದೆ ರವೀಂದ್ರ ಜಡೇಜಾ ಅವರ ಮೇಲೆ ಚೆನ್ನೈ ಎಷ್ಟೊಂದು ನಂಬಿಕೆ ಇಟ್ಟಿದೆ ಎನ್ನುವುದು. ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ರವೀಂದ್ರ ಜಡೇಜಾ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿಯೂ ಆಯ್ಕೆಯಾಗಿದ್ದರು.

ಒಬ್ಬ ಆಟಗಾರನಿಗೆ ಇನ್ನೇನು ಬೇಕು ಹೇಳಿ, ತಮ್ಮ ಪ್ರದರ್ಶನದಿಂದ ಒಂದು ತಂಡದ ನಾಯಕ ಸ್ಥಾನ ಸಿಗುವುದು ಅಂದರೆ ಅದು ಚಿಕ್ಕ ವಿಷಯವಲ್ಲ, ಅದು ಕೂಡ ಶ್ರೇಷ್ಠ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರನ್ನು ಕೆಳಗಿಳಿಸಿ ಜಡೇಜಾ ಅವರನ್ನು ಮಾಡಿದ್ದು ಇನ್ನು ಕೂಡ ದೊಡ್ಡ ಸಾಧನೆ ನೇ ಆಗಿದೆ. ಅದರ ಅದೃಷ್ಟ ಎನ್ನುವುದು ಯಾವಾಗ ಕೈ ಕೊಡುತ್ತದೆ ಎನ್ನುವುದು ಹೇಳಲು ಸಾಧ್ಯವಿಲ್ಲ. ಇದಕ್ಕೆ ಇನ್ನೊಂದು ಉದಾಹರಣೆ ನಮ್ಮ ವಿರಾಟ್ ಕೊಹ್ಲಿ. ಎಲ್ಲ ಇದ್ದು ಇಂದು ಏನು ಇಲ್ಲದ ಹಾಗೆ ಆಗಿದ್ದಾರೆ. ಇದೀಗ ರವೀಂದ್ರ ಜಡೇಜಾ ಅವರ ಪಾಡು ಕೂಡ ಅದೇ ರೀತಿ ಆಗಿದೆ.

ತಂಡದ ನಾಯಕ ಸ್ಥಾನ ವಹಿಸಿಕೊಂಡ ನಂತರ ಹೊಸ ಉತ್ಸಾಹದೊಂದಿಗೆ ಮೈದಾನಕ್ಕಿಳಿದ ಚೆನ್ನೈ ಸೂಪರ್ ಕಿಂಗ್ಸ್ ಯಾವುದೇ ಪ್ರದರ್ಶನ ಉತ್ತಮವಾಗಿ ನೀಡದೆ ಎಲ್ಲ ಪಂದ್ಯಗಳಲ್ಲಿ ಸೋಲನ್ನು ಅನುಭವಿಸುತ್ತ ಹೋಯಿತು. ಅಂಕಪಟ್ಟಿಯಲ್ಲಿ ಕೊನೆಯಲ್ಲಿ ಮೊದಲನೇ ಹಾಗು ಎರಡನೇ ಸ್ಥಾನದಲ್ಲಿ ಕಾಣಿಸುತ್ತ ಹೋಯಿತು. ಇದು ದೊಡ್ಡ ವಿಷಯಾನೇ ಸರಿ. ಏಕೆಂದರೆ ಅತಿ ಹೆಚ್ಚು ಬಾರಿ ಐಪಿಎಲ್ ಫೈನಲ್ ಗೆ ಹೋದ ತಂಡ, ೫ ಬಾರಿ ಐಪಿಎಲ್ ಕಪ್ ಗೆದ್ದ ತಂಡ ಈ ಬಾರಿಯ ಐಪಿಎಲ್ ಅಲ್ಲಿ ಎಲ್ಲ ಪಂದ್ಯಗಳನ್ನು ಸೋತಿದ್ದು ಅಭಿಮಾನಿಗಳಿಗೆ ಮಾತ್ರವಲ್ಲದೆ ತಂಡದ ಆಡಳಿತದವರಿಗೂ ಕೂಡ ಒಂದು ದೊಡ್ಡ ತಲೆನೋವಾಗಿತ್ತು.

ನಂತರ ಚೆನ್ನೈ ತಂಡದ ನಾಯಕತ್ವ್ ಧೋನಿ ಗೆ ಪುನಃ ನೀಡಲಾಯಿತು. ಆದರೆ ರವೀಂದ್ರ ಜಡೇಜಾ ಧೋನಿ ನಾಯಕತ್ವದಲ್ಲಿ ಕೇವಲ ಒಂದು ಪಂದ್ಯದಲ್ಲಿ ಕಾಣಿಸಿಕೊಂಡಿದ್ದರು. ಅದಾದ ನಂತರ ಗಾಯದ ಸಮಸ್ಯೆ ಇಂದ ಮುಂದಿನ ಪಂದ್ಯದಲ್ಲಿ ಆಡಲಿಲ್ಲ ಎನ್ನುವ ವರದಿ ಬಂದಿತ್ತು. ಇದೀಗ ಐಪಿಎಲ್ ಎಲ್ಲ ಪಂದ್ಯಗಳಿಂದ ಕೂಡ ರವೀಂದ್ರ ಜಡೇಜಾ ಇರಲ್ಲ ಎನ್ನುವ ಸುದ್ದಿ ಬರುತ್ತಿದೆ. ಇದು ಮಾತ್ರ ಅಲ್ಲದೆ ಇದರ ಹಿಂದೆ ಹಲವು ಊಹಾಪೋಹಗಳು ಹರಿದಾಡುತ್ತಿದೆ. ಜಡೇಜಾ ಹಾಗು csk ಆಡಳಿತ ಮಂಡಳಿ ಒಂದಿಗೆ ಅನೇಕ ವಿಚಾರಗಳಿಗೆ ಬಿನ್ನಾಭಿಪ್ರಾಯ ಇದೆ ಅಂತೇ. ಇದರಿಂದ ಜಡೇಜಾ ಬಯೋ ಬಬಲ್ ಇಂದ ಹೊರಬಂದು ತಮ್ಮ ಮನೆಗೆ ತೆರಳಿದ್ದಾರೆ ಎನ್ನುವ ವರದಿ ಕೂಡ ಪ್ರಕಟವಾಗುತ್ತಿದೆ. ಅಲ್ಲದೆ CSK ಇನ್ಸ್ಟಾಗ್ರಾಮ್ ಅಲ್ಲಿ ರವೀಂದ್ರ ಜಡೇಜಾ ಅವರನ್ನು unfollow ಮಾಡಿರುವುದು ಇದಕ್ಕೆಲ್ಲ ಪೂರಕ ಅನ್ನುತ್ತಿದ್ದಾರೆ ಅಭಿಮಾನಿಗಳು.

Leave A Reply

Your email address will not be published.