ವಿರಾಟ್ ಕೊಹ್ಲಿ ಭರ್ಜರಿಯಾಗಿ ಪಾರ್ಮ್ ಗೆ ಮರಳಿದ ಕೂಡಲೇ ಅಭಿಮಾನಿಗಳಿಗೆ ನಿರಾಸೆ. ವಿರಾಟ್ ಕೊಹ್ಲಿ ಇದಕ್ಕೆ ಸೈ ಎನ್ನುತ್ತಾರ?

460

ಸಚಿನ್ ತೆಂಡೂಲ್ಕರ್ ಕ್ರಿಕೆಟ್ ದೇವರು ಅಂತ ಕರೆಯುತ್ತಾರೆ ಹಾಗೇನೇ ಈ ದೇವರ ದಾಖಲೆ ಸರಿದೂಗಿಸುವ ಅವಕಾಶ ಹಾಗು ಸಾಮರ್ಥ್ಯ ಇದ್ದರೆ‌ ಅದು ವಿರಾಟ್ ಕೊಹ್ಲಿ ಒಬ್ಬರೇ ಎಂದು ಸಚಿನ್ ತೆಂಡೂಲ್ಕರ್ ಸ್ವತಃ ಹೇಳಿದ್ದರು. ಇದಕ್ಕೆ ಕೊಹ್ಲಿ ಅವರ ಆಟವೇ ಸಾಕ್ಷಿ. ರನ್ ಮಷೀನ್ ಅಂತಾನೇ ಖ್ಯಾತಿ ಪಡೆದಿರುವ ಕೊಹ್ಲಿ ಅಂತರಾಷ್ಟ್ರೀಯ ಪಂದ್ಯದಲ್ಲಿ ಭಾರತ ಪರ ಒಟ್ಟಾರೆ ೭೦ ಶತಕಗಳನ್ನು ಗಳಿಸಿದ್ದಾರೆ. ಇದು ತೆಂಡೂಲ್ಕರ್ ಅವರ ನಂತರದ ಉತ್ತಮ‌ ಸಾಧನೆಯಾಗಿದೆ.

ಆದರೆ‌ ವಿರಾಟ್ ಕೊಹ್ಲಿ ಅವರ ಈ ಅದ್ಬುತ ಪಾರ್ಮ್ ಮೇಲೆ ಯಾರ ಕಣ್ಣು ಬಿದ್ದಿತ್ತು ಗೊತ್ತಿಲ್ಲ, ಮೂರು ವರ್ಷಗಳಲ್ಲಿ ಕೊಹ್ಲಿ‌ ಕಡೆಯಿಂದ ಶತಕ ಬರಲಿಲ್ಲ. ಅಲ್ಲದೇ ಯಾವುದೇ ಉತ್ತಮ ಪ್ರದರ್ಶನ ಕೂಡಾ ನಾವು ನೋಡಲು ಸಾಧ್ಯವಾಗಿಲ್ಲ. ಅಲ್ಲದೇ ಕಾಲಚಕ್ರ ಹೇಗೆ ಬದಲಾಗುತ್ತದೆ ಎಂದರೆ ಒಂದು ಸಮಯದಲ್ಲಿ ಎಲ್ಲಾ ಅಂತರಾಷ್ಟ್ರೀಯ ಮಾದರಿ ತಂಡಕ್ಕೆ ನಾಯಕರಾಗಿದ್ದ ಕೊಹ್ಲಿ ಇದೀಗ ಯಾವುದೇ ಮಾದರಿಯ ತಂಡದ ನಾಯಕರಾಗಿಲ್ಲ.

ಇನ್ನು ದೇಶೀಯ ಕ್ರಿಕೆಟ್ ಜಾತ್ರೆ ಆದಂತಹ ಐಪಿಎಲ್ ಅಲ್ಲಿ ಕೂಡಾ ಯಾವುದೇ ಹೇಳಿಕೊಳ್ಳುವಂತಹ ಪ್ರದರ್ಶನ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿಯ ಬ್ಯಾಟ್ ಇಂದ ಬರಲಿಲ್ಲ. ಅಲ್ಲದೇ ನಾಯಕತ್ವ ಕೂಡಾ ಇಲ್ಲ. ಇದಲ್ಲದೇ ಈ ಬಾರಿಯ ಒಟ್ಟು ೧೪ ಪಂದ್ಯಗಳಲ್ಲಿ ಅವರು ೨ ಬಾರಿ ಸೊನ್ನೆಗೆ (ಗೋಲ್ಡನ್ ಡಕ್) ಔಟಾಗಿದ್ದಾರೆ. ಇದು ಕೊಹ್ಲಿಯ ಸಮಯ ಸರಿ‌ ಇಲ್ಲ ಎಂಬುದಕ್ಕೆ ಉದಾಹರಣೆಯಾಗಿದೆ.

ಇದೀಗ ಅನೇಕ ದಿಗ್ಗಜ‌ ಆಟಗಾರರು, ರವಿಶಾಸ್ತ್ರಿ, ವಾಸೀಂ ಜಾಫರ್ ರವರ ಅನುಭವದ ಮಾತು ಹಾಗೆನೆ ನಿರ್ದೇಶನದಂತೆ ಸ್ವಲ್ಪ ಮಟ್ಟಿಗೆ‌ ವಿಶ್ರಾಂತಿ ತೆಗೆದುಕೊಳ್ಳಬೇಕು. ಮಾನಸಿಕವಾಗಿ ದೃಡತೆ ಕಂಡುಕೊಳ್ಳಬೇಕು ಇಲ್ಲವಾದಲ್ಲಿ‌‌ ಮುಂದಿನ ವಿಶ್ವಕಪ್ ಗೆ ತಂಡಕ್ಕೆ ಬಾರೀ ಹಿನ್ನಡೆಯಗಾಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ ಅನೇಕರು.

ಮುಂದೆ ದಕ್ಷಿಣ ಆಫ್ರಿಕಾ ಸರಣಿ‌ ನಡೆಯಲಿದೆ. ಇದರಲ್ಲಿ ಅನೇಕ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗುವುದು ಎಂದು ಬಹಳ ವರದಿಗಳು ಬರುತ್ತಿದೆ. ಇದರಲ್ಲಿ ವಿರಾಟ್ ಕೊಹ್ಲಿ ಕೂಡಾ ಇದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇನ್ನು ಕಳೆದ RCB ಹಾಗು ಗುಜರಾತ್ ನಡುವಿನ‌ ಪಂದ್ಯದಲ್ಲಿ ೫೪ ಬಾಲ್ ಗಳಲ್ಲಿ ೭೩ ರನ್ ಗಳಿಸಿ ಭರ್ಜರಿಯಾಗಿ ಪಾರ್ಮ್ ಗೆ ಮರಳಿದ ಕೊಹ್ಲಿ ವಿಶ್ರಾಂತಿಗೆ ತೆರಳಲಿದ್ದಾರೆ ಎನ್ನುವ ಈ ಸುದ್ದಿಗಳು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.

Leave A Reply

Your email address will not be published.