ವಿರಾಟ್ ಕೊಹ್ಲಿ ಹಾಗು ವೀರೇಂದ್ರ ಸೆಹ್ವಾಗ್ ಧಾಖಲೆ ಹಿಂದಿಕ್ಕಿದ ಕೆ ಎಲ್ ರಾಹುಲ್. ಇದೀಗ ಧೋನಿ ಸಮಾನರಾಗಿದ್ದರೆ.

2,216

ಜನವರಿ ೩ ರಂದು ಪ್ರಾಂಭವಾದ ಎರಡನೇ ಟೆಸ್ಟ್ ಅಲ್ಲಿ ವಿರಾಟ್ ಕೊಹ್ಲಿ ಅವರು ಅಲಭ್ಯರಿದ್ದ ಕಾರಣ ಕೆ ಎಲ್ ರಾಹುಲ್ ಅವರು ಸೌತ್ ಆಫ್ರಿಕಾ ದ ವಿರುದ್ದದ ಟೆಸ್ಟ್ ಪಂದ್ಯದಲ್ಲಿ ನಾಯಕರಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಅತ್ಯುತ್ತಮ ಫಾರಂ ಅಲ್ಲಿ ಇರುವ ಕೆ ಎಲ್ ರಾಹುಲ್ ಅವರಿಗೆ ದೊರಕಬೇಕಾದ ಸ್ಥಾನಮಾನ ಇದೀಗ ದೊರೆತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಟೆಸ್ಟ್ ತಂಡವನ್ನು ಮುನ್ನಡೆಸುವ ೩೪ನೇ ನಾಯಕನಾಗಿ ರಾಹುಲ್ ಆಯ್ಕೆ ಆಗಿದ್ದರೆ. ಇದರೊಂದಿಗೆ ಈ ಧಾಖಲೆ ಮಾಡುವ ಮೂಲಕ ಕೊಹ್ಲಿ ಹಾಗು ಸೆಹ್ವಾಗ್ ಅವರನ್ನು ಹಿಂದಿಕ್ಕಿದ್ದಾರೆ.

ತನ್ನ ಬೆನ್ನು ನೋವಿನ ಕಾರಣ ಎರಡನೇ ಟೆಸ್ಟ್ ಗೆ ಅಲಭ್ಯ ಇದ್ದ ಕಾರಣ ಉಪನಾಯಕನಾದ ಕೆ ಎಲ್ ರಾಹುಲ್ ನಾಯಕನಾಗಿ ತಂಡವನ್ನು ಮುನ್ನಡೆಸುವ ಜವಾಬ್ದಾರಿ ದೊರೆಯಿತು. ಈ ನಾಯಕತ್ವ ವಹಿಸುತ್ತಲೇ ದಾಖಲೆ ಮಾಡಿ ಘಟಾನುಘಟಿಗಳನ್ನು ಹಿಂದಿಕ್ಕಿದ್ದಾರೆ. ಮೊಹಮ್ಮದ್ ಅಜರುದ್ದೀನ್ ನಂತರ ಕೆ ಎಲ್ ರಾಹುಲ್ ಒಬ್ಬರೇ ಲಿಮಿಟೆಡ್ ಫಾರ್ಮ್ಯಾಟ್ ಆದಂತಹ ಏಕದಿನ ಹಾಗು ಟಿ-೨೦ ತಂಡದ ನಾಯಕತ್ವ ವಹಿಸದೆ ನೇರವಾಗಿ ಟೆಸ್ಟ್ ತಂಡದ ನಾಯಕ ಪದವಿ ಪಡೆದಿದ್ದಾರೆ.

ಈ ನಾಯಕತ್ವ ವಹಿಸಿಕೊಳ್ಳುವುದರ ಮೂಲಕ ವಿರಾಟ್ ಕೊಹ್ಲಿ, ವೀರೇಂದ್ರ ಸೆಹ್ವಾಗ್ ಹಾಗು ಜಿ ಎಸ ರಾಮಚಂದ್ರ ಅವರನ್ನ ಹಿಂದಿಕ್ಕಿ ಧೋನಿಯವರ ಜೊತೆ ೨ನೇ ಸ್ಥಾನಕ್ಕೆ ಬಂದಿದ್ದಾರೆ. ಇದಲ್ಲದೆ ಮೊದಲನೇ ಸ್ಥಾನದಲ್ಲಿ ಅಜಿಂಕ್ಯ ರಹಾನೆ ಇದ್ದಾರೆ. ರಹಾನೆ ಪ್ರಥಮ ಶ್ರೇಣಿಯಲ್ಲೂ ನಾಯಕತ್ವ ಪಡೆಯದೇ ನೇರ ಅಂತಾರಾಷ್ಟ್ರೀಯ ಭಾರತೀಯ ತಂಡದ ನಾಯಕತ್ವ ವಹಿಸಿದವರಾಗಿದ್ದರೆ. ಭಾರತ ತಂಡದ ನಾಯಕತ್ವ ವಹಿಸಿದ ಕರ್ನಾಟಕದ ನಾಲ್ಕನೇ ಆಟಗರಾಗಿ ಹೊರಹೊಮ್ಮಿದ್ದಾರೆ ಕೆ ಎಲ್ ರಾಹುಲ್. ಇದಕ್ಕಿಂತ ಮೊದಲು ಗುಂಡಪ್ಪ ವಿಶ್ವನಾಥ್, ರಾಹುಲ್ ದ್ರಾವಿಡ್ ಹಾಗು ಅನಿಲ್ ಕುಂಬ್ಳೆ ಭಾರತೀಯ ಟೆಸ್ಟ್ ತಂಡವನ್ನು ಮುನ್ನಡೆಸಿದ್ದಾರೆ.

Leave A Reply

Your email address will not be published.