Film News: ಖುಲಾಯಿಸಿದ ರಶ್ಮಿಕಾ ಮಂದಣ್ಣ ಅದೃಷ್ಟ. ಅಂತಾರಾಷ್ಟ್ರೀಯ ಕಂಪನಿ ಗೆ ರಾಯಭಾರಿ ಆಗಿ ನೇಮಕ. ಯಾವುದು ಈ ಕಂಪನಿ ಗೊತ್ತೇ?

266

ರಶ್ಮಿಕಾ ಮಂದಣ್ಣ (Rashmika Mandanna) ಭಾರತದ ನ್ಯಾಷನಲ್ ಕ್ರಶ್ ಅಂತಾನೆ ಹೆಚ್ಚು ಜನಪ್ರಿಯ ಆದ ನಟಿ. ಕನ್ನಡದ ಕಿರಿಕ್ ಪಾರ್ಟಿ ಮೂಲಕ ಸಿನೆಮಾಗೆ ಕಾಲಿಟ್ಟ ಈಕೆ ಕರ್ನಾಟಕದ ಪಡ್ಡೆ ಹುಡುಗರ ಮನ ಗೆದ್ದ ಸುಂದರಿ. ಕಾರಣಾಂತರಗಳಿಂದ ಇಂದು ಕರ್ನಾಟಕದ ಅನೇಕರು ಇವರನ್ನು ಇಷ್ಟ ಪಡದೆ ಇದ್ದರು ಕೂಡ, ದೇಶದಾದ್ಯಂತ ಅನೇಕ ಭಾಷೆ ಗಳ ಸಿನೆಮಾದಲ್ಲಿ ನಟಿಸಿ ಸೈ ಅನಿಸಿಕೊಂಡಿದ್ದಾರೆ.

ಸಿನೆಮಾ ರಂಗ ಅಂದರೇನೇ ಹಾಗೆ, ಒಮ್ಮೆ ಸ್ಟಾರ್ ಆದರೆ ಮನೆ ಗೆ ಹುಡುಕಿಕೊಂಡು ಬರುತ್ತದೆ ಅದೃಷ್ಟ. ಸಿನೆಮಾಗಳಿಂದಾನೆ ಬ್ಯುಸಿ ಇರುವ ರಶ್ಮಿಕಾ ಇದೀಗ ಅಂತಾರಾಷ್ಟ್ರೀಯ ಬ್ರಾಂಡ್ ರಾಯಭಾರಿಯಾಗಿ ನೇಮಕ ಮಾಡಲು ಹೊರಟಿದೆ. ಒಂಟಿಸೂಕ ಟೈಗರ್ (Ontisuka Tiger) ಎನ್ನುವ ಜಪಾನೀಸ್ ಕಂಪನಿ ಅಧಿಕೃತವಾಗಿ ಇವರನ್ನು ಆಯ್ಕೆ ಮಾಡಿದೆ. ಇವರು ಇದೀಗ ಭಾರತದ ಅಧಿಕೃತ ರಾಯಭಾರಿ.

ಇದನ್ನು ಕುದ್ದು ರಶ್ಮಿಕಾ ಮಂದಣ್ಣ ಇನ್ಸ್ಟಾಗ್ರಾಮ್ ಅಲ್ಲಿ ಹಂಚಿಕೊಂಡಿದ್ದು, ಭಾರತದ ಮೊದಲ ಜಪಾನೀಸ್ ಬ್ರಾಂಡ್ ನ ರಾಯಭಾರಿಯಾಗಿ ಆಯ್ಕೆ ಆಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಈ ಒಂಟಿಸೂಕ ಟೈಗರ್ ಎನ್ನುವುದು ಫ್ಯಾಷನ್ ಬ್ರಾಂಡ್ ಕಂಪನಿ ಆಗಿದೆ. ಇದನ್ನು ಅಂತಾರಾಷ್ಟ್ರೀಯ ಮಿಲನ್ ಫೆಸ್ಟಿವಲ್ ಅಲ್ಲಿ ಧರಿಸಿದ್ದು ನಂತರ ಇವರು ಇದೀಗ ರಾಯಭಾರಿ ಆಗಿ ಅಧಿಕೃತವಾಗಿ ಆಯ್ಕೆ ಆಗಿದ್ದಾರೆ.

Leave A Reply

Your email address will not be published.