ICC T20 WorldCup: ಭಾರತ ತಂಡದಲ್ಲಿ ಇವರನ್ನು ನೋಡಲು ಕೂಡ ಬಯಸಲ್ಲ. ಹಿರಿಯ ಆಟಗಾರ ಬಗ್ಗೆ ದಿಟ್ಟ ಅಭಿಪ್ರಾಯ ವ್ಯಕ್ತಪಡಿಸಿದ ವೀರೇಂದ್ರ ಸೆಹ್ವಾಗ್.

159

ಇತರ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಹಾಗೇನೇ ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಕೂಡ ನವೆಂಬರ್ 10 ರಂದು ಅಡಿಲೇಡ್ ನಲ್ಲಿ ನಡೆದ ಎರಡನೇ ಸೆಮಿ ಫೈನಲ್ ನಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್ ಗಳ ಸೋಲಿನ ನಂತರ, ವಿಶ್ವಕಪ್ ನಿಂದ ಮುಜುಗರದ ನಿರ್ಗಮನದ ಬಗ್ಗೆ ಸಂಪೂರ್ಣವಾಗಿ ನಿರಾಶೆಗೊಂಡಿದ್ದಾರೆ. ಇದು ಸಾಮಾನ್ಯವಾಗಿ ಮುಜುಗರಕ್ಕೀಡು ಮಾಡುವಂತಹ ವಿಷಯವೇ ಆಗಿದೆ.

ವಿಶ್ವಕಪ್ ನ ನಾಕೌಟ್ ಪಂದ್ಯದಲ್ಲಿ ಭಾರತದ ಮತ್ತೊಂದು ವೈಫಲ್ಯಕ್ಕೆ ಭಾರತದ ಆಟಗಾರರ ಮನಸ್ಥಿತಿಯನ್ನು ಅನೇಕರು ದೂಷಿಸಿದರೆ, ಮಾಜಿ ಓಪನರ್ ವೀರೇಂದ್ರ ಸೆಹ್ವಾಗ್ ಮುಂದಿನ ವಿಶ್ವಕಪ್ ಪಂದ್ಯಕ್ಕೆ ತಂಡದಲ್ಲಿ ಈ ಮುಖಗಳನ್ನು ನೋಡಲು ಕೂಡ ಬಯಸಲ್ಲ ಎಂದು ಹೇಳಿದ್ದಾರೆ. ರಾಷ್ಟೀಯ ತಂಡದ ಸೆಟಪ್ ನಲ್ಲಿ ಬದಲಾವಣೆ ಬೇಕೆಂದು ಹೇಳಿದ್ದಾರೆ.

ಮೆಗಾ ICC ಇವೆಂಟ್ ಗೆ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್ ರಂತಹ ಆಟಗಾರರನ್ನು 2007 ರ ವಿಶ್ವಕಪ್ ಗೆ ಆಯ್ಕೆ ಮಾಡಿರಲಿಲ್ಲ. ಅಂತಹ ತಂಡವನ್ನೇ ಇನ್ನೊಮ್ಮೆ ಮುಂದಿನ ವಿಶ್ವಕಪ್ ಗೆ ಮಾಡಬೇಕಿದೆ. ಅಂದು ಯುವ ಆಟಗಾರರು ಮಹೇಂದ್ರ ಸಿಂಗ್ ಧೋನಿ ಅವರ ನಾಯಕತ್ವದಲ್ಲಿ ಮೊದಲ ಟಿ-೨೦ ಆವೃತ್ತಿಯನ್ನು ಗೆಲ್ಲುವ ಮೂಲಕ ಕ್ರಿಕೆಟ್ ಜಗತ್ತನ್ನು ಬೆರಗುಗೊಳಿಸಿದ್ದರು ಎಂದು ಸೆಹ್ವಾಗ್ ಹೇಳಿದ್ದಾರೆ.

20 ವರ್ಷ ಕ್ರಿಕೆಟ್ ಅನುಭವ ಹೊಂದಿರದ ಯುವಕರ ತಂಡ ವಿಶ್ವಕಪ್ ಗೆಲ್ಲಿಸಿತ್ತು 2007 ರಲ್ಲಿ. ಈಗಲೂ ಕೂಡ ಹಾಗೇನೇ, ಯಾವ ಹಿರಿಯ ಆಟಗಾರರನ್ನು ಕೂಡ ನೋಡಬಯಸುವುದಿಲ್ಲ. ಹೀಗೆ ಮಾಡದಿದ್ದರೆ ನಮಗೆ ಫಲಿತಾಂಶಗಳು ಬರುವುದಿಲ್ಲ. ಈ ಮನಸ್ಥಿತಿ ಇಟ್ಟಕೊಂಡು ಸರಿ ಎಂದು ಹೇಳುವ ಆಯ್ಕೆಗಾರರು ಮುಂದಿನ ವಿಶ್ವಕಪ್ ವರೆಗೆ ಇರುತ್ತಾರೆಯೇ ಇಲವೇ ಎನ್ನುವುದೇ ಸಮಸ್ಯೆ. ಇಂದು ಸರಿ ಎಂದರು ಕೂಡ ಮುಂದಿನ ವಿಶ್ವಕಪ್ ಸಮಯದಲ್ಲಿ ಬೇರೇನೇ ಆಯ್ಕೆಗಾರರು ಇರುತ್ತಾರೆ. ಈ ಮಾದರಿ ಯಾರೇ ಆಯ್ಕೆಗಾರರು ಇದ್ದರು ಕೂಡ ಅನುಸರಿಸಬೇಕು ಎಂದು ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.

Leave A Reply

Your email address will not be published.