ಗಾಯದ ಸಮಸ್ಯೆಯಿಂದ ಹೊರಬಂದ ಜೊಫ್ರಾ ಆರ್ಚರ್. ಮುಂಬೈ ಇಂಡಿಯನ್ಸ್ ಬೌಲಿಂಗ್ ಮತ್ತಷ್ಟು ಬಲಿಷ್ಠ. ಈ ಬಾರಿ ಐಪಿಎಲ್ ನಲ್ಲಿ ಶೈನ್ ಆಗಲಿದೆ ಈ ಆಟಗಾರನ ಬೌಲಿಂಗ್.

144

ಜೊಫ್ರಾ ಆರ್ಚರ್ (Jofra Archer) ಹೆಸರು ಯಾರು ಕೇಳಿಲ್ಲ ಹೇಳಿ. ಇವರು ಸ್ವಲ್ಪ ಸಮಯದ ವರೆಗೆ ಕ್ರಿಕೆಟ್ ಇಂದ ದೂರಾನೇ ಇದ್ದರು. ಆದರೆ ವರದಿಗಳ ಪ್ರಕಾರ ಮತ್ತೊಮ್ಮೆ ಇವರು ಮೈದಾನಕ್ಕೆ ಇಳಿಯುತ್ತಾರೆ ಎನ್ನುತ್ತಿದೆ. ಹಾಗೇನೇ 2023 ರ IPL ಅಲ್ಲಿ ಮುಂಬೈ (Mumbai Indians) ಪರ ಆಡಲಿದ್ದಾರೆ ಎಂದು ಕೂಡ ವರದಿಗಳು ಬರುತ್ತಿದೆ. ಈ ಸುದ್ದಿ ಬರುತ್ತಿದ್ದಂತೆ ಕಳೆದ ಆವೃತ್ತಿಯ ಐಪಿಎಲ್ (IPL) ಅಲ್ಲಿ ಮುಂಬೈ ಆಡಿದ ರೀತಿ ನೋಡಿದ್ದ ಅಭಿಮಾನಿಗಳಿಗೆ ತುಸು ನೆಮ್ಮದಿ ತಂದಿದೆ. ಇದರಿಂದ ಮುಂಬೈ ಬೌಲಿಂಗ್ ಮತ್ತಷ್ಟು ಸದೃಢವಾಗಲಿದೆ.

ಐಪಿಎಲ್ 2022 ರಲ್ಲಿ ಜೊಫ್ರಾ ಆರ್ಚರ್ (Jofra Archer) ಅವರು ಗಾಯಾಳು ಆಗಿದ್ದರು ಕೂಡ ಬರೋಬ್ಬರಿ 8 ಕೋಟಿ ಕೊಟ್ಟು ಮುಂಬೈ ಖರೀದಿ ಮಾಡಿತ್ತು. ಇದು ಎಲ್ಲರನ್ನು ಅಚ್ಚರಿ ಕೂಡ ಪಡಿಸಿತ್ತು. ಐಪಿಎಲ್ ಆವೃತ್ತಿಗೆ ಲಭ್ಯ ಇರಲ್ಲ ಅಂತ ಗೊತ್ತಿದ್ದರೂ ಕೂಡ ಅವರನ್ನು ಖರೀದಿ ಮಾಡಿತ್ತು ಮುಂಬೈ ಇಂಡಿಯನ್ಸ್. ಇದರ ಲಾಭ ಮುಂಬೈ ಶೀಘ್ರದಲ್ಲೇ ಪಡೆದುಕೊಳ್ಳಲಿದೆ ಎನ್ನುವುದು ಈ ವರದಿಗಳಿಂದ ತೋರುತ್ತಿದೆ.

ಜೊಫ್ರಾ ಆರ್ಚರ್ ಮುಂದಿನ ವರ್ಷ ಇಂಗ್ಲೆಂಡ್ (England) ಪರ ಆಡಬಹುದು ಎಂದು ಹೇಳಲಾಗುತ್ತಿದೆ. ಅಲ್ಲದೆ ಮುಂದಿನ ವರ್ಷ ಏಕದಿನ ವಿಶ್ವಕಪ್ ಕೂಡ ಇರಲಿದೆ. ಆದ್ದರಿಂದ ಪ್ರಾಕ್ಟೀಸ್ ಗಾಗಿ ಆದರೂ ಕೂಡ ಮ್ಯಾನೇಜ್ಮೆಂಟ್ ಸ್ವಲ್ಪ ಕ್ರಿಕೆಟ್ ಆಡಬೇಕೆಂದು ಬಯಸುತ್ತದೆ. ಅಂತಹ ಸಂದರ್ಭದಲ್ಲಿ ಐಪಿಎಲ್ 2023 ಆರ್ಚರ್ ಅವರಿಗೆ ಸಂಪೂರ್ಣ ಅವಕಾಶವಾಗಿ ಪರಿಣಮಿಸುತ್ತಿದೆ. ICC ODI 2023 ವಿಶ್ವಕಪ್ (Worldcup) ಭಾರತದಲ್ಲಿ (India) ನಡೆಯಲಿದೆ. ಐಪಿಎಲ್ 2023 ರ ಅನುಭವ ಆರ್ಚರ್ ಗೆ ಧನಾತ್ಮಕವಾಗಿ ಪರಿಣಮಿಸಬಹುದು. ಇನ್ನು ಜಸ್ಪ್ರೀತ್ ಬುಮ್ರಾ ಹಾಗು ಜೊಫ್ರಾ ಆರ್ಚರ್ ಜೋಡಿ ಮುಂಬೈ ಗೆ ಬಲ ನೀಡಿದ್ದಲ್ಲದೆ, ಇವರಿಬ್ಬರ ಬೌಲಿಂಗ್ ಜುಗಲ್ಬಂದಿಗೆ ಅಭಿಮಾನಿಗಳು ಕಾಯುತ್ತಿದ್ದಾರೆ.

Google Image

ಸದ್ಯದ ಮಟ್ಟಿಗೆ ಜೊಫ್ರಾ ಆರ್ಚರ್ ವೇಗದ ಬೌಲಿಂಗ್ ವಿಭಾಗದಲ್ಲಿ ಒಬ್ಬ ಉತ್ತಮ ಬೌಲರ್. ಆದರೆ ಗಾಯದ ಸಮಸ್ಯೆ ಇವರ ದೊಡ್ಡ ತಲೆ ನೋವಾಗಿದೆ. ಇದರಿಂದ ಇವರ ವೃತ್ತಿ ಜೀವನಕ್ಕೂ ಪೆಟ್ಟು ಬೀಳುತ್ತಿದೆ. ಸ್ವಲ್ಪ ದಿನದ ಹಿಂದೆ ವಾಪಸಾಗಿದ್ದರು ಕೂಡ ಗಾಯಾಳುವಾಗಿ ಮತ್ತೊಮ್ಮೆ ತಂಡದಿಂದ ಹೊರ ಹೋಗಬೇಕಾಯಿತು. ಈ ಬಾರಿ ಆರ್ಚರ್ ಫಿಟ್ ಆಗಿರಲಿ ಎಂದು ಎಲ್ಲ ಕ್ರಿಕೆಟ್ ಅಭಿಮಾನಿಗಳು ಆಶಿಸುತ್ತಿದ್ದಾರೆ. ಜೊಫ್ರಾ ಅವರ ಉತ್ತಮ ಬೌಲಿಂಗ್ ಇಂದಾಗಿ ಇಂಗ್ಲೆಂಡ್ (England) 2019 ರಲ್ಲಿ ಏಕದಿನ ವಿಶ್ವಕಪ್ ಗೆದ್ದಿತ್ತು.

Leave A Reply

Your email address will not be published.