Sandalwood: ಹಾಳ್ ಮಾಡೋರ್ ಹತ್ತು ಜನ ಇದ್ರೆ, ಕಾಯೋಕ್ಕೆ ಅಂತ ಸಾವಿರ ಜನ ಇರ್ತಾರೆ. ಸೆಲೆಬ್ರಿಟಿ ಗಳನ್ನ ಹೊಗಳಿದ DBoss.

181

ಚಾಲೆಂಜಿಂಗ್ ಸ್ಟಾರ್ ದರ್ಶನ (Challenging Star Darshan) ಅದ್ಬುತ ಪ್ರತಿಭೆ. ತನ್ನ ಸ್ವಂತ ಬಲದಿಂದ ಮೇಲೆ ಬಂದು ಕನ್ನಡ ಸಿನಿಮಾ ರಂಗವನ್ನು ಒಂದು ಹಂತಕ್ಕೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಅಂದರೆ ತಪ್ಪಾಗಲಾರದು. ಏನೋ ಒಂದು ಕಾರಣಕ್ಕೆ ತನ್ನ ತಪ್ಪಿಲ್ಲದಿದ್ದರು ಮಾಧ್ಯಮಗಳಿಂದ ಪ್ರಚಾರ ಪಡೆಯದೇ ಇರುವ ದರ್ಶನ ಗೆ ಅವರ ಬೆನ್ನೆಲುಬಾಗಿ ನಿಂತಿದ್ದು ಅವರ ಅಭಿಮಾನಿಗಳು ಅಂದರೆ ಅವರ ಸೆಲೆಬ್ರೆಟಿಸ್. ದರ್ಶನ ಅವರ ಮುಂದಿನ ಸಿನಿಮಾ ಕ್ರಾಂತಿ (Kranthi) ಗೆ ಅಭಿಮಾನಿಗಳು ಸ್ವತಃ ಪ್ರಚಾರಕ್ಕೆ ಮುಂದೆ ಬಂದಿದ್ದು ದರ್ಶನ ಗೆ ತುಂಬಾ ಖುಷಿ ತಂದಿದೆ.

ಯಾವಾಗಲು ಅಭಿಮಾನಿಗಳಿಂದಲೇ ನಾವು ಎಂದು ಹೇಳುತ್ತಿದ್ದ ದರ್ಶನ್ (DBoss), ಕ್ರಾಂತಿ ಸಿನೆಮಾ ನಿರ್ಮಾಣ ಮಾಡುವವರೆಗೂ ಮಾತ್ರ ಅದು ನಮ್ಮ ಸಿನೆಮಾ, ಅದಾದ ಮೇಲೆ ಆ ಸಿನೆಮಾ ಅಭಿಮಾನಿಗಳದ್ದು ಎಂದು ಮತ್ತೊಮ್ಮೆ ಹೇಳಿದ್ದಾರೆ. ದರ್ಶನ ಅವರ ಕ್ರಾಂತಿ ಪ್ರಚಾರ ಪ್ರತಿ ಹಳ್ಳಿ ಹಳ್ಳಿ ಗು ತಲುಪುತ್ತಿದೆ. ಅಭಿಮಾನಿಗಳು ಸಹ ಅದೇ ಉತ್ಸಾಹದೊಂದಿಗೆ ಪ್ರಚಾರ ಮಾಡುತ್ತಿದ್ದಾರೆ. zee ವಾಹಿನಿ ನಡೆಸಿದ ಸಂದರ್ಶನದಲ್ಲಿ ಮಾತಾಡುತ್ತ, ಹಾಳ್ ಮಾಡೋಕೆ ಹತ್ತು ಜನ ಇದ್ರೆ, ಕಾಯೋಕೆ ಅಂತ ಸಾವಿರ ಜನ ಇರ್ತಾರೆ. ಅದು ನನ್ನ ಸೆಲೆಬ್ರಿಟಿ ಗಳು.

ಅಭಿಮಾನಿಗಳಿಗೆ ಈ ಸಿನೆಮಾ ಯಾವುದೇ ನಿರಾಸೆ ಮೂಡಿಸಲ್ಲ. ಅದರ ಗ್ಯಾರಂಟೀ ನಾನು ಕೊಡಬಲ್ಲೆ. ಇನ್ನು ಈ ಕ್ರಾಂತಿ ಸಿನೆಮಾ ಬರುವ ವರ್ಷ ಜನವರಿ 26 ರಂದು ಅಂದರೆ ಗಣರಾಜ್ಯೋತ್ಸವದಂದು (Republic Day) ಬಿಡುಗಡೆ ಗೊಳ್ಳಲಿದೆ. ಮೀಡಿಯಾ ಪ್ರಚಾರಗಿಂತ ಹೆಚ್ಚಾಗಿ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಇವರ ಅಭಿಮಾನಿ ಬಳಗಕ್ಕೆ ನಮ್ಮದೊಂದು ಸಲಾಂ. ಅದೇ ರೀತಿ ನ್ಯೂಸ್ ಮಾಧ್ಯಮದವರ ದರ್ಶನ ಬಹಿಷ್ಕಾರಕ್ಕೆ ಎಲ್ಲೆಡೆಯಿಂದ ಆಕ್ರೋಶ ಕೂಡ ಬಂದಿದೆ.

Leave A Reply

Your email address will not be published.