Kantara: ಕೋರ್ಟ್ ಗೆ ಹೋಗ್ತಿ, ಮೆಟ್ಟಿಲಲ್ಲಿ ನಾನು ತೀರ್ಮಾನ ಮಾಡ್ತೇನೆ. ಸಿಕ್ಕಾಪಟ್ಟೆ ಟ್ರೆಂಡ್ ಆಗ್ತಿದೆ‌ ಕಾಂತಾರ ಡೈಲಾಗ್.

414

ಕಾಂತಾರ (Kantara) ಕನ್ನಡ ಸಿನೆಮಾ ಪ್ರಪಂಚದಾದ್ಯಂತ ಸುದ್ದಿ ಮಾಡಿದ ಸಿನೆಮಾ. ಕಥೆ ಆಗಲಿ, ಮೇಕಿಂಗ್ ಇಂದ ಹಿಡಿದು, ಎಲ್ಲ ನಟರ ನಟನೆ ಅದರಲ್ಲೂ ರಿಷಬ್ ಶೆಟ್ಟಿ (Rishab Shetty) ನಟನೆಗೆ ಎಲ್ಲರಿಂದಲೂ ಮೆಚ್ಚುಗೆ ಬಂದಿತ್ತು. ಈ ಮೆಚ್ಚುಗೆ ನಡುವೆ‌ ಒಂದು ಆರೋಪ ಕೂಡಾ ಬಂದಿತ್ತು ಅದೇ ಈ ಸಿನೆಮಾದಲ್ಲಿ ಅತಿ ಹೆಚ್ಚು ಪ್ರಖ್ಯಾತ ಗೊಂಡ ಹಾಡು ವರಾಹ‌ರೂಪಂ.

ತೈಕುಡಂ ಬ್ರಿಡ್ಜ್ ಎನ್ನುವ ಮಲಯಾಳಂ ಅಂದರೆ ಕೇರಳದ ಮ್ಯೂಸಿಕ್ ಸಂಸ್ಥೆ, ಹೊಂಬಾಳೆ (Hombale Films) ಸಂಸ್ಥೆ ತಮ್ಮ ಸಂಗೀತ ಕದ್ದಿದೆ ಎಂದು ಕೋರ್ಟ್ ಮೊರೆ ಹೋಗಿತ್ತು. ಇದು ದೇಶಾದ್ಯಂತ ಸುದ್ದಿ ಕೂಡಾ ಆಗಿತ್ತು. ಇದರಂತೆಯೆ ಅಲ್ಲಿಮ ಜಿಲ್ಲಾ ನ್ಯಾಯಾಲಯವು ಹಾಡನ್ನು ಮುಂದೆ ಬಳಸಬಾರದು‌‌‌ ಎಂದು ತೀರ್ಪು ನೀಡಿತ್ತು. ಇದರಿಂದ ಕರ್ನಾಟಕ ಮಾತ್ರವಲ್ಲದೇ ಇಡೀ ದೇಶದ ಜನರು ಬೇಸರಗೊಂಡಿದ್ದರು. ಕೇರಳದ ಸಂಗೀತ ಕಂಪೆನಿ ವಿರುದ್ದ ಜನ ಕೋಪ ಕೂಡಾ ಹೊರಹಾಕಿದ್ದಾರೆ.

ಕಾಂತಾರ ಅಮೇಜಾನ್ ಪ್ರೈಮ್ (Amazon Prime) ಅಲ್ಲಿ ಬಿಡುಗಡೆ ಗೊಂಡಿದೆ. ಆದರೆ‌ ವರಾಹರೂಪಂ ಸಂಗೀತ ಸಂಪೂರ್ಣ ಬದಲಾವಾಲಣೆ ಆಗಿದ್ದರಿಂದ ಜನರು ಬೇಸರಗೊಂಡಿದ್ದರು. ಹೊಂಬಾಳೆ (Hombale Films) ಸಿನೆಮಾ ಹೈಕೋರ್ಟ್ ಮೊರೆ ಹೋಗಿ‌ ಜಿಲ್ಲಾ ನ್ಯಾಯಾಲಯದ ತಡೆಯನ್ನು ತೆರವುಗೊಳಿಸಬೇಕೆಂದು ಅರ್ಜಿ ಸಲ್ಲಿಸಿತ್ತು. ಇದಕ್ಕೆ ಹೈಕೋರ್ಟ್ ಒಪ್ಪಿಗೆ ಸೂಚಿಸಿ, ವರಾಹರೂಪಂ ಹಾಡನ್ನು ಬಳಸುವಂತೆ ಹೊಂಬಾಳೆ‌ ಫಿಲ್ಮ್ ಗೆ ಹೇಳಿದೆ.

ಇದೀಗ ಸಾಮಜಿಕ ಜಾಲತಾಣದಲದಲಿ‌ ವರಾಹರೂಪಂ (Varaha Roopam) ಬರೆದ ಶಶಿರಾಜ್ ಕಾವೂರ್ ಹೈಕೋರ್ಟ್ ಆದೇಶದ ಬಗ್ಗೆ‌ ಪ್ರಕಟ ಮಾಡಿದ್ದು ಎಲ್ಲರಿಗೂ ಖುಷಿ ತಂದಿದೆ. ಹಾಗೆನೇ ಅನೇಕರು ಕಾಂತಾರದ ಡೈಲಾಗ್ ಹಾಕಿ ಸಿನೆಮಾ ಹಾಗು ನಿಜ‌ ಜೀವನದ ಈ ಕಥೆಗೆ ಸಿಂಕ್ ಮಾಡುತ್ತಿದ್ದಾರೆ. ಎಲ್ಲರೂ ಸಿನೆಮಾ ಡೈಲಾಗ್ ” ನೀನು ಕೋರ್ಟ್ ಗೆ ಹೋಗ್ತಿ, ಆದರೆ ತೀರ್ಮಾನ ನಾನು ಕೋರ್ಟ್ ಮೆಟ್ಟಿಲಲ್ಲಿ ನಿನಗೆ ಕೊಡ್ತೇನೆ” ಎಂದು ಹಾಕುತ್ತಿದ್ದಾರೆ.

Leave A Reply

Your email address will not be published.