RCB ಗೆ ಬಂದ್ಮೇಲೆ ಈ ಐದು ಆಟಗಾರರ ಅದೃಷ್ಟ ಖುಲಾಯಿಸಿದೆ. ಯಾರ್ಯಾರು ಈ ಟಾಪ್ ಬ್ಯಾಟ್ಸಮನ್ ಗಳು?

1,184

RCB ಒಂದೇ ಒಂದು ಟ್ರೋಫಿ ಗೆಲ್ಲದಿದ್ದರು ಕೂಡ ಪ್ರಪಂಚದಾದ್ಯಂತ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ. ಈ ತಂಡದಲ್ಲಿ ತಮ್ಮ ಕೌಶಲ್ಯಗಳನ್ನು ತೋರಿಸಿ ತಮ್ಮ ಮೂಲ ಬೆಲೆ ಹೆಚ್ಚಿಸಿಕೊಂಡು ಅತಿ ಹೆಚ್ಚು ಜನಪ್ರಿಯರಾದವರು ಈ ತಂಡದಲ್ಲಿ ಆಟವಾಡಿದವರೇ. ಕೆಲ ಆಟಗಾರರು RCB ತಂಡದಲ್ಲಿ ಇರುವಾಗ ಉತ್ತಮ ಪ್ರದರ್ಶನ ನೀಡದೆ ಇದ್ದರು ಕೂಡ ಬೇರೆ ತಂಡಕ್ಕೆ ಹೋದ ಕೂಡಲೇ ಉತ್ತಮ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದಾರೆ. ಈ ಐದು ಆಟಗಾರರು ಯಾರ್ಯಾರು ಇಲ್ಲಿದೆ ನೋಡಿ ಪಟ್ಟಿ.

೧. ವಿರಾಟ್ ಕೊಹ್ಲಿ- RCB ಪರ ಮೊದಲ ಆವೃತ್ತಿ ಇಂದಲು ಆಡುತ್ತಿರುವ ಆಟಗಾರ ವಿರಾಟ್ ಕೊಹ್ಲಿ. ಇವರು ಈ ಪಟ್ಟಿಯಲ್ಲಿ ನಂಬರ್ ೧. ಈ ನಡುವೆ ಅವರು ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಕೂಡ ಆಗಿದ್ದಾರೆ. ಮೊದಲ ಆವೃತ್ತಿಯಲ್ಲಿ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಅಂತಹ ದಿಗ್ಗಜರ ಜೊತೆ ಆಡಿ ತಮ್ಮ ಪ್ರದರ್ಶನ ಉತ್ತಮ ಪಡಿಸಿಕೊಂಡರು. ಇಲ್ಲಿಯವರೆಗೂ RCB ಪರ ಆಡಿ ತಮ್ಮ ಮೂಲ ಬೆಲೆ ಜೊತೆ ಉತ್ತಮ ಆಟಗಾರ ಎನಿಸಿಕೊಂಡಿದ್ದಾರೆ.

೨. ಕೆ ಎಲ್ ರಾಹುಲ್- ಕೆ ಎಲ್ ರಾಹುಲ್ ಇತ್ತೀಚಿಗೆ ನಡೆದ ಸೌತ್ ಆಫ್ರಿಕಾ ತಂಡದ ಜೊತೆಗಿನ ಪಂದ್ಯಕ್ಕೆ ನಾಯಕನಾಗಿ ಆಯ್ಕೆ ಆದವರು. ಏಕದಿನ ಆಗಿರಲಿ ಟಿ-೨೦ ಆಗಿರಲಿ ಉತ್ತಮ ಪ್ರದರ್ಶನ ನೀಡಿ ಭಾರತ ತಂಡದ ಆಟಗಾರನಾಗಿ ಹೊರ ಹೊಮ್ಮಿದ್ದಾರೆ. RCB ಪರ ಕೇವಲ ಒಂದು ಆವೃತ್ತಿಯಲ್ಲಿ ಆಡಿದ್ದರು ಕೂಡ ಅವರ ವೃತ್ತಿ ಜೀವನವನ್ನು ಇದು ಸಂಪೂರ್ಣವಾಗಿ ಬದಲಾಯಿಸಿತು. ಪಂಜಾಬ್ ತಂಡದ ನಾಯಕನಾಗಿ ಉತ್ತಮ ಪ್ರದರ್ಶನ ನೀಡಿದ್ದಲ್ಲದೆ ಈ ಬಾರಿಯ ಐಪಿಎಲ್ ಗು ಕೂಡ ಅತಿ ಹೆಚ್ಚು ಮೊತ್ತಕ್ಕೆ ಹರಾಜಾಗಿದ್ದರೆ.

೩. ಕ್ರೈಸ್ ಗೇಲ್- ಕ್ರೈಸ್ ಗೇಲ್ ಯಾರಿಗೆ ಗೊತ್ತಿಲ್ಲ ಹೇಳಿ. ಟಿ-೨೦ ಮಾದರಿಯ ಪಂದ್ಯಗಳಿಗೆ ಹೇಳಿ ಮಾಡಿಸಿದ ಆಟಗಾರ. ೨೦೧೧ ರಲ್ಲಿ ಯಾವ ತಂಡಗಳು ಇವರನ್ನು ಖರೀದಿ ಮಾಡದೇ ಇದ್ದಾಗ ಅವರ ವೃತ್ತಿ ಜೀವನ ಅಲ್ಲಿಗೆ ಕೊನೆ ಎಂದು ಎಲ್ಲರು ಕೂಡ ಭಾವಿಸಿದ್ದರು. ಆದರೆ RCB ಅವರನ್ನು ಖರೀದಿ ಮಾಡಿ ತಂಡಕ್ಕೆ ಆಯ್ಕೆ ಮಾಡಿಕೊಂಡಿತ್ತು. ಆ ನಂತರ ನಡೆದದ್ದು ವಿಸ್ಮಯ. ತಮ್ಮ ಬ್ಯಾಟ್ ನಿಂದ ಅವರು ಇನ್ನು ಕೂಡ ಆಡಬಲ್ಲೆ ಎಂದು ಎಲ್ಲರಿಗು ತೋರಿಸಿಕೊಟ್ಟವರು. ಅತ್ಯಧಿಕ ಸಿಕ್ಸ್, ಅತ್ಯಧಿಕ ರನ್ ಮುಕಾಂತರ ಎಲ್ಲರಿಗು ಮನರಂಜನೆ ನೀಡಿದವರು. ಕಳೆದ ಆವೃತ್ತಿ ವರೆಗೂ ಉತ್ತಮ ಬೇಡಿಕೆ ಹೊಂದಿದ್ದ ಆಟಗಾರ.

೪. ಯಜುವೇಂದ್ರ ಚಾಹಲ್- ಭಾರತ ತಂಡ ಬಿಡಿ ಆ ಸಮಯದಲ್ಲಿ ಚಾಹಲ್ ದೇಶಿಯ ತಂಡ ಹರ್ಯಾಣ ತಂಡದಲ್ಲೂ ಸ್ಥಾನ ಪಡೆಯಲು ಹೆಣಗಾಡುತ್ತಿದ್ದರು. ಯಜುವೇಂದ್ರ ಚಾಹಲ್ ಅವರನ್ನು ಎರಡನೇ ಲೆಗ್ ಸ್ಪಿನ್ ಆಯ್ಕೆ ಆಗಿ RCB ಅವರನ್ನು ಖರೀದಿ ಮಾಡಿತ್ತು. ಅಲ್ಲಿಂದ ಅವರ ಅದೃಷ್ಟವೇ ಬದಲಾಯಿತು. ಸ್ಪಿನ್ ಬೌಲಿಂಗ್ ಮೂಲಕ ಎಲ್ಲರನ್ನು ಸೆಳೆದರು ಇಂದು ಕೂಡ ತಮ್ಮ ಬೆಲೆಯನ್ನು ಹೆಚ್ಚಿಸುತ್ತಲೇ ಇದ್ದಾರೆ. ೯೮ ಪಂದ್ಯಗಳಲ್ಲಿ ೨೨.೨೨ ಸರಾಸರಿಯಲ್ಲಿ ೧೨೧ ವಿಕೆಟ್ ಪಡೆದಿದ್ದಾರೆ. RCB ತಂಡದ ಬೌಲಿಂಗ್ ಬೆನ್ನೆಲುಬು ಅಂತಾನೂ ಕರೆಸಿಕೊಂಡಿದ್ದರು.

೫. ರಾಸ್ ಟೈಲರ್- ರಾಸ್ ಟೈಲರ್ ತಮ್ಮ ವೃತ್ತಿ ಜೀವನದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರಲಿಲ್ಲ. ಆದರೂ ನ್ಯೂಜಿಲ್ಯಾಂಡ್ ತಂಡದಲ್ಲಿ ಇದ್ದರು. ಆದರೂ RCB ಅವರನ್ನು ಖರೀದಿ ಮಾಡಿತ್ತು. RCB ಗೆ ಬಂದಮೇಲೆ ೩ ಆವೃತ್ತಿಯಲ್ಲಿ ಟೈಲರ್ ಆಡಿದ್ದರು. ೩೧ ಪಂದ್ಯಗಳಲ್ಲಿ ೩೧.೬೮ ಸರಾಸರಿಯಲ್ಲಿ ೧೪೮.೬೮ ರ ಸ್ಟ್ರೈಕ್ ರೇಟ್ ಅಲ್ಲಿ ೭೩೩ ರನ್ ಗಳಿಸಿದ್ದಾರೆ. ಮೂರೂ ಆವೃತ್ತಿಗಳಲ್ಲಿ ಟೈಲರ್ RCB ಪರ ಉತ್ತಮವಾಗಿ ಆಡಿದ್ದರು. RCB ಹಾಗು ಐಪಿಎಲ್ ಅಲ್ಲಿ ಆಡಿದ ನಂತರ ಅವರು ಅವರು ಅಂತಾರಾಷ್ಟ್ರೀಯ ಮಟ್ಟದ ಪಂದ್ಯಗಳಲ್ಲಿ ಉತ್ತಮ ಆಟವಾಡಲು ಸಾಧ್ಯವಾಗಿತ್ತು. ವಿಶ್ವಕಪ್ ಅಲ್ಲೂ ಕೂಡ ಉತ್ತಮ ಪ್ರದರ್ಶನ ನೀಡ್ದಿದರು.

Leave A Reply

Your email address will not be published.