RCB vs MI: ಬೆಂಗಳೂರು ವಿರುದ್ದದ ಮೊದಲ ಪಂದ್ಯದಲ್ಲಿಯೇ ಮುಂಬೈ ನಾಯಕ ರೋಹಿತ್ ಶರ್ಮ ಕಣಕ್ಕಿಳಿಯಲ್ವಾ? ತಂಡದ ಕೋಚ್ ನೀಡಿದ್ದಾರೆ ಮಹತ್ವದ ನಿರ್ಧಾರ.
IPL 16 ಆವೃತ್ತಿಯ ಎರಡನೇ ಡಬಲ್ ಹೆಡ್ಡರ್ ಪಂದ್ಯ ಭಾನುವಾರ ಅಂದರೆ ೦೨/೦೪/೨೦೨೩ ರಂದು ನಡೆಯಲಿದೆ. ಇಂದಿನ ಎರಡನೇ ಪಂದ್ಯದಲ್ಲಿ ಬಲಿಷ್ಠ ತಂಡಗಳಾದ ಮುಂಬೈ ಇಂಡಿಯನ್ಸ್ (Mumbai Indians) ಹಾಗು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Chalengers Bengaluru) ಮುಖಾಮುಖಿ ಆಗಲಿದೆ. ಈ ಪಂದ್ಯ ಎರಡು ತಂಡಗಳಿಗೆ ಅತ್ಯಂತ ಮಹತ್ವದ್ದಾಗಿದೆ. ಆದರೆ ಪಂದ್ಯ ಶುರುವಿಗೂ ಮುನ್ನ ಮುಂಬೈ ತಂಡದ ನಾಯಕ ರೋಹಿತ್ ಶರ್ಮ (Rohit Sharma) ಹಾಗು ಬೌಲರ್ ಜೊಫ್ರಾ ಆರ್ಚರ್ (jofra Archer) ಅವರುಗಳ ಫಿಟ್ನೆಸ್ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಇದಕ್ಕೆ ತಂಡದ ತರಬೇತು ಗಾರ ಮಾರ್ಕ್ ಬೌಚೆರ್ ಉತ್ತರ ನೀಡಿದ್ದಾರೆ.
ಭಾನುವಾರದ ಪಂದ್ಯದಲ್ಲಿ ಆಡಲು ನಾಯಕ ರೋಹಿತ್ ಶರ್ಮ ಹಾಗು ಬೌಲರ್ ಜೊಫ್ರಾ ಆರ್ಚರ್ ಇಬ್ಬರು ಕೂಡ ಫಿಟ್ ಆಗಿದ್ದಾರೆ. ಹಾಗಾಗಿ ಇಬ್ಬರು ಕೂಡ ಇಂದು ಮೈದಾನದಲ್ಲಿ ಕಾಣಿಸಿಕೊಳ್ಳುವುದು ಖಚಿತವಾಗಿದೆ. ರೋಹಿತ್ ಶರ್ಮ ಅವರು ಆರೋಗ್ಯದಲ್ಲಿ ಏರುಪೇರಿತ್ತು ಹಾಗಾಗಿ ಅವರನ್ನು ಎರಡು ದಿನಗಳ ಹಿಂದೆ ಮನೆಯಲ್ಲಿ ಇರುವಂತೆ ಸೂಚಿಸಿದ್ದೆವು. ಆದರೆ ಇದೀಗ ಅವರು ಎರಡು ದಿನಗಳಿಂದ ಅಭ್ಯಾಸ ಮಾಡುತ್ತಿದ್ದು, ಸಂಪೂರ್ಣವಾಗಿ ಫಿಟ್ ಆಗಿದ್ದಾರೆ ಎಂದು ಮಾರ್ಕ್ ಬೌಚೆರ್ ಹೇಳಿದ್ದಾರೆ.
ಮುಂಬೈ ಇಂಡಿಯನ್ಸ್ ನ ವೇಗಿ ಹಾಗು ಸ್ಟಾರ್ ಆಟಗಾರ ಜೊಫ್ರಾ ಆರ್ಚರ್ ಕೂಡ ಗಾಯದ ಸಮಸ್ಯೆಯಿಂದ ಹೊರಗೆ ಬಂದಿದ್ದು ಸಂಪೂರ್ಣವಾಗಿ ಫಿಟ್ ಆಗಿದ್ದಾರೆ. ಮುಂಬೈ ನ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಗಾಯದಿಂದಾಗಿ ಈ ಆವೃತ್ತಿ ಪೂರ್ತಿ ಹೊರಗುಳಿಯಲಿದ್ದು. ಅವರ ಬದಲಿಗೆ ಬೌಲಿಂಗ್ ನೇತೃತ್ವ ಜೊಫ್ರಾ ವಹಿಸಿಕೊಳ್ಳಲಿದ್ದು ಮುಂಬೈ ಗೆ ಸಮಾಧಾನ ನೀಡಿದೆ. ಇನ್ನು ಎರಡು ವರ್ಷ ಜೊಫ್ರಾ ಮುಂಬೈ ಪರ ಐಪಿಎಲ್ ಆಡಲಿದ್ದಾರೆ. ನಿನ್ನೆ ಮುಂಬೈ ಗೆ ಬಂದಿಳಿದ್ದಾರೆ ಜೊಫ್ರಾ ಆರ್ಚರ್.