ಪಂಚಾಯತ್ ರಾಜ್ ಇಲಾಖೆ ನೇರ ನೇಮಕಾತಿ 2024 – RDWSD Karnataka Recruitment 2024

703

RDWSD Karnataka Recruitment 2024 – ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಖಾಲಿ ಇರುವ 47 ಸಂಗ್ರಹಣೆ ಸಲಹೆಗಾರ, ಪರಿಸರ ಸಲಹೆಗಾರ, ಸಾಮಾಜಿಕ ಅಭಿವೃದ್ಧಿ ಸಲಹೆಗಾರ, ಕಾನೂನು ಸಲಹೆಗಾರರು ಮತ್ತು ಮಾನಿಟರಿಂಗ್ ಮತ್ತು ಮೌಲ್ಯಮಾಪನ ಸಲಹೆಗಾರ ಸೇರಿದಂತೆ ವಿವಿಧ ಹುದ್ದೆಗಳನ್ನು ಹೊರಗುತ್ತಿಗೆಯ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಒಟ್ಟು 47 ಹುದ್ದೆಗಳು ಖಾಲಿಯಿದ್ದು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸುವಂತೆ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಉದ್ಯೋಗ ಸ್ಥಳ ಕರ್ನಾಟಕದಾದ್ಯಂತ ಇರಲಿದೆ.

ಸಂಗ್ರಹಣೆ ಸಲಹೆಗಾರ 9ಮಾನಿಟರಿಂಗ್ ಮತ್ತು ಮೌಲ್ಯಮಾಪನ ಸಲಹೆಗಾರ 10ಪರಿಸರ ಸಲಹೆಗಾರ 10ಸಾಮಾಜಿಕ ಅಭಿವೃದ್ಧಿ ಸಲಹೆಗಾರ 7ಹಣಕಾಸು ಸಲಹೆಗಾರ 11 ಒಟ್ಟು 47 ಹುದ್ದೆಗಳು ಖಾಲಿಯಿದ್ದು ಇನ್ನು ವಿಧ್ಯಾಭ್ಯಾಸ ವಿಚಾರಕ್ಕೆ ಬರುವುದಾದರೆ ಅಭ್ಯರ್ಥಿಗಳು BCA, BE ಅಥವಾ B.Tech, M.Tech, MCA, MSW, MA, MBA, M.Com ಪದವಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವ ವಿದ್ಯಾಲಯದಿಂದ ಪಡೆದಬೇಕು. ವೃತ್ತಿ ಅನುಭವವನ್ನು ಹೊಂದಿದವರಿಗೆ ಮೊದಲ ಆಧ್ಯತೆ ನೀಡಲಾಗುವುದು.

ಗರಿಷ್ಠ ವಯೋಮಿತಿ 50 ವರ್ಷ ಎಂದು ನಿಗದಿ ಪಡಿಸಲಾಗಿದೆ.ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ 75000/- ರಿಂದ 150000/- ವರೆಗೆ ಮಾಸಿಕ ವೇತನವನ್ನು ನಿಗದಿಪಡಿಸಲಾಗಿದೆ. ಅರ್ಜಿ ಸಲ್ಲಿಸಲು ಯವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ.ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಸಂದರ್ಶನ ಮತ್ತು ದಾಖಲಾತಿ ಪರಿಶೀಲನೆಯ ಮೂಲಕ ಆಯ್ಕೆಮಾಡಿಕೊಳ್ಳಲಾಗತ್ತದೆ. ಸೆಪ್ಟೆಂಬರ್ 12 ರಿಂದ ಅಕ್ಟೋಬರ್ 23 ರ ವರೆಗೆ ಅರ್ಜಿ ಸಲ್ಲಿಸಬಹುದು.https://www.ksrwspdtsuonline.in/jobapplicationform

Leave A Reply

Your email address will not be published.