Shah Rukh Khan: ಶಾರುಖ್ ಖಾನ್ ಜೊತೆ ಸಿನೆಮಾ ಮಾಡಲ್ಲ ಎಂದು ಊಹಾಪೋಹಗಳಿಗೆ ಸ್ಪಷ್ಟನೆ ಕೊಟ್ಟ ರಿಷಬ್ ಶೆಟ್ಟಿ.

191

ರಿಷಬ್ ಶೆಟ್ಟಿ (Rishab Shetty) ಹಾಗು ರಕ್ಷಿತ್ ಶೆಟ್ಟಿ (Rakshit Shetty) ಹೊಂಬಾಳೆ ಫಿಲಂಸ್ (Hombale Films) ನಿರ್ಮಾಣ ಸಂಸ್ಥೆ ಯಲ್ಲಿ ಮುಂದೆ ನಡೆಯಲಿರುವ ಸಿನೆಮಾದಲ್ಲಿ ಶಾರುಖ್ ಖಾನ್ (Shah Rukh Khan) ಜೊತೆ ನಟಿಸಲಿದ್ದಾರೆ ಎನ್ನುವ ಸುದ್ದಿ ಕೆಲ ದಿನಗಳಿಂದ ಹರಿದಾಡುತಿತ್ತು. ಇದು ಅನೇಕರಿಗೆ ಖುಷಿ ತಂದರು ಕೂಡ ಈ ಸುದ್ದಿ ಸುಳ್ಳು ಎಂದು ಎಲ್ಲ ಊಹಾಪೋಹಗಳಿಗೆ ಪೂರ್ಣವಿರಾಮ ಇಟ್ಟಿದ್ದಾರೆ ರಿಷಬ್ ಶೆಟ್ಟಿ (Rishab Shetty). ಹಾಗೇನೇ ನಾನು ಕನ್ನಡದಲ್ಲಿಯೇ ಸಿನೆಮಾ ಮಾಡುತ್ತೇನೆ, ಅದರ ಮೂಲಕವೇ ಬೇರೆ ಭಾಷೆಗಳಿಗೆ ಹೋಗುತ್ತೇನೆ ಎಂದು ಹೇಳಿದ್ದಾರೆ.

pc-public tv

ಪಬ್ಲಿಕ್ ಟಿವಿ (Public TV) ವರದಿ ಪ್ರಕಾರ, ಈ ಎಲ್ಲ ಸುದ್ದಿ ಸುಳ್ಳು ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ. ಇನ್ನು ಮುಂದುವರೆಸುತ್ತ, ಇಂತಹ ಸುಳ್ಳು ಸುದ್ದಿ ಯಾರು ಹಬ್ಬಿಸುತ್ತಿದ್ದಾರೆ ಗೊತ್ತಿಲ್ಲ, ಹೊಂಬಾಳೆ ಫಿಲಂಸ್ ಶಾರುಖ್ ಖಾನ್ ಜೊತೆ ಸಿನೆಮಾ ಮಾಡುತ್ತಾರೆ ಅಂತಾದರೆ ಅವರೇ ಅದನ್ನು ಹೇಳುತ್ತಾರೆ. ಅಧಿಕೃತ ಸುದ್ದಿ ಅವರು ಸಮಯ ಬಂದಾಗ ಹೇಳುತ್ತಾ ಬಂದಿದ್ದಾರೆ. ಇದರ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಸುದ್ದಿ ಶುದ್ಧ ಸುಳ್ಳು ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.

ನಾನು ಕನ್ನಡದಲ್ಲಿ ಮಾತ್ರ ಸಿನೆಮಾ ಮಾಡುವುದು, ಅದನ್ನು ಬೇರೆ ಭಾಷೆಗೆ ಡಬ್ ಮಾಡುವುದರ ಮೂಲಕ ಬೇರೆ ಇಂಡಸ್ಟ್ರಿ ಗೆ ಕಾಲಿಡುತ್ತೇನೆ. ಮುಂದೆ ಯಾವ ಸಿನೆಮಾ ಮಾಡುತ್ತೇನೆ, ಯಾರನ್ನು ಸಿನೆಮಾದಲ್ಲಿ ತಗೊಳುತ್ತೆನೆ, ಅದರ ಬಗ್ಗೆ ನಾನೆ ನಿಮಗೆ ಮಾಹಿತಿ ಕೊಡುತ್ತೇನೆ. ಶಾರುಖ್ ಖಾನ್ ಜೊತೆಗಿನ ಸಿನೆಮಾ ಸುದ್ದಿ ಒಂದು ಗಾಸಿಪ್ ಅಷ್ಟೇ ಎಂದು ಹೇಳಿದ್ದಾರೆ. ಇನ್ನು ಕಾಂತಾರ (Kantara) ಸಿನೆಮಾ ಯಶಸ್ಸಿನ ನಂತರ ರಿಷಬ್ ಶೆಟ್ಟಿ ಸ್ವಲ್ಪ ಬ್ರೇಕ್ ತಗೊಂಡಿದ್ದಾರೆ.

Leave A Reply

Your email address will not be published.