Virat Kohli: ರನ್ ಮಷೀನ್ ವಿರಾಟ್ ಕೊಹ್ಲಿ ಮತ್ತೊಮ್ಮೆ ಹಿಂದಿನ ದಾಖಲೆಗಳೆಲ್ಲ ಉಡೀಸ್ ಮಾಡಿದ್ದಾರೆ. ಸಚಿನ್ ತೆಂಡೂಲ್ಕರ್ ರೆಕಾರ್ಡ್ ಕೂಡ ಹಿಂದಿಕ್ಕಿದ ಕೊಹ್ಲಿ.

329

ವಿರಾಟ್ ಕೊಹ್ಲಿ (Virat Kohli) ಈ ಹೆಸರು ವಿಶ್ವದಾದ್ಯಂತ ಎಲ್ಲ ಕ್ರಿಕೆಟ್ ಅಭಿಮಾನಿಗಳ ಹೃದಯದಲ್ಲಿ ಸದಾ ಇರುತ್ತದೆ. ಇದಕ್ಕೆ ಕಾರಣ ಇವರ ಪ್ರದರ್ಶನ. ಕೊಹ್ಲಿ ಕ್ರಿಸ್ ಅಲ್ಲಿ ಇದ್ದರೆ ಭಾರತ ಇಂತಹ ಪರಿಸ್ಥಿತಿಯಲ್ಲಿ ಇದ್ದರು ಗೆಲ್ಲುತ್ತದೆ ಎನ್ನುವ ವಿಶ್ವಾಸ ಅಭಿಮಾನಿಗಳಲ್ಲಿ ಇರುತ್ತದೆ. ಕೊಹ್ಲಿ ಮೊದಲೇ T20 World Cup ಅಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದು ಮಿಂಚಿದ್ದಾರೆ. ಅಲ್ಲದೆ ಈ ಬಾರಿ ವಿಶ್ವಕಪ್ ಅಲ್ಲೂ ಕೂಡ ಆಡಿದ ನಾಲ್ಕು ಪಂದ್ಯದಲ್ಲಿ ಮೂರೂ ಪಂದ್ಯದಲ್ಲಿ ಅರ್ಧ ಶತಕ ದಾಖಲಿಸಿದ್ದಾರೆ.

ಅತಿ ಹೆಚ್ಚು ರನ್ ಗಳಿಸಿದ ಆಟಗಾರರಲ್ಲಿ ಮೊದಲನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಇದ್ದಾರೆ. ಹಾಗೇನೇ ಅತಿ ಹೆಚ್ಚು ಆವರೇಜ್ ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲೂ ಕೂಡ ಕೊಹ್ಲಿ ಮೊದಲನೇ ಸ್ಥಾನದಲ್ಲಿ ಇದ್ದಾರೆ. ಬಾಂಗ್ಲಾದೇಶದ ವಿರುದ್ಧ ಪಂದ್ಯದಲ್ಲಿ ಇವರ ಅರ್ಧಶತಕ ದ ಕಾರಣದಿಂದ ಭಾರತ 184 ರನ್ ಗಳಿಸಲು ಸಾಧ್ಯವಾಯಿತು. ಇದರಿಂದಲೇ ಭಾರತ ಸೆಮಿಫೈನಲ್ ತಲುಪುವ ಅವಕಾಶ ಕೂಡ ಸರಳವಾಗಿದೆ.

ಮೊದಲನೇದಾಗಿ ವಿರಾಟ್ ಕೊಹ್ಲಿ ಟಿ-೨೦ ವಿಶ್ವಕಪ್ ಅಲ್ಲಿ ಅತಿ ಹೆಚ್ಚು ರನ್ ಮಾಡಿದ ಆಟಗಾರರಾಗಿ ಹೊರಹೊಮ್ಮಿದ್ದಾರೆ. ಶ್ರೀಲಂಕಾದ ಮಹೇಲಾ ಜಯವರ್ಧನ ಅವರನ್ನು ಹಿಂದಿಕ್ಕಿ ಮೊದಲನೇ ಸ್ಥಾನಕ್ಕೇರಿದ್ದಾರೆ. ಜಯವರ್ಧನ 31 ಇನ್ನಿಂಗ್ಸ್ ಅಲ್ಲಿ 1016 ರನ್ ಗಳಿಸಿದರೆ, ವಿರಾಟ್ ಕೊಹ್ಲಿ ಕೇವಲ 23 ಇನ್ನಿಂಗ್ಸ್ ಅಲ್ಲಿ ಈ ದಾಖಲೆ ಹಿಂದಿಕ್ಕಿದ್ದಾರೆ.

ಎರಡನೇದಾಗಿ ಬಾಂಗ್ಲಾ ವಿರುದ್ದದ ಪಂದ್ಯದಲ್ಲಿ ಅರ್ಧ ಶತಕ ಗಳಿಸುವ ಮೂಲಕ ಸಚಿನ್ ತೆಂಡೂಲ್ಕರ್ ಅವರ ರೆಕಾರ್ಡ್ ಕೂಡ ಸರಿದೂಗಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ಭಾರತೀಯ ಆಟಗಾರ ಅತಿ ಹೆಚ್ಚು ರನ್ ಗಳಿಸಿದ್ದೆಂದರೆ ಅದು ಸಚಿನ್ ತೆಂಡೂಲ್ಕರ್. 84 ಪಂದ್ಯಗಳಲ್ಲಿ ೪೨.೮೫ ರ ಆವರೇಜ್ ಅಲ್ಲಿ ೩,೩೦೦ ರನ್ ಪೇರಿಸಿದ್ದಾರೆ. ವಿರಾಟ್ ಕೊಹ್ಲಿ ಕೇವಲ ೫೭ ಪಂದ್ಯಗಳಲ್ಲಿ ೫೬.೭೭ ಆವರೇಜ್ ಮೂಲಕ ೩,೫೫೦ ರನ್ ಮಾಡುವ ಮೂಲಕ ತೆಂಡೂಲ್ಕರ್ ದಾಖಲೆ ಕೂಡ ಹಿಂದಿಕ್ಕಿದ್ದಾರೆ.

ಇನ್ನು ಮೂರನೆದಾಗಿ ಅಡಿಲೇಡ್ ಅಂಗಳದಲ್ಲಿ ವಿರಾಟ್ ಕೊಹ್ಲಿ ತಮ್ಮ ಪ್ರಾಬಲ್ಯ ಉಳಿಸಿಕೊಂಡಿದ್ದಾರೆ. ಈ ಮೈದಾನದಲ್ಲಿ ಆಡಿದ ಎಲ್ಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸಾಧನೆ ಉತ್ತಮವಾಗಿದೆ. ಇವರು ಈ ಅಂಗಳದಲ್ಲಿ ಒಟ್ಟು 10 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 75 ಕ್ಕೂ ಹೆಚ್ಚಿನ ಸರಾಸರಿಯಲ್ಲಿ 907 ರನ್ ಗಳಿಸಿದ್ದಾರೆ. ಇದು ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಪಂದ್ಯಗಳನ್ನು ಕೂಡ ಒಳಗೊಂಡಿದೆ. ಏಕದಿನ, ಟೆಸ್ಟ್ ಹಾಗು ಟಿ-೨೦.

ನಾಲ್ಕಂಡೆದಾಗಿ ವಿರಾಟ್ ಕೊಹ್ಲಿ ಅತಿ ಹೆಚ್ಚು ಸರಾಸರಿ ರನ್ ಗಳಿಸಿದ ಆಟಗಾರರಾಗಿದ್ದಾರೆ. ೮೮.೭೫ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ ವಿರಾಟ್ ಕೊಹ್ಲಿ. ಅಷ್ಟೇ ಅಲ್ಲದೆ ಟಿ-೨೦ ಇತಿಹಾಸದಲ್ಲಿ ಅತಿ ಹೆಚ್ಚು ಅರ್ಧಶತಕ ಮಾಡಿದ ಆಟಗಾರರಾಗಿದ್ದಾರೆ ವಿರಾಟ್ ಕೊಹ್ಲಿ. ವಿರಾಟ್ ಕೊಹ್ಲಿ ಅವರ 13 ನೇ ಅರ್ಧಶತಕವಾಗಿತ್ತು ಬಾಂಗ್ಲಾದೆದುರಿನ ಅರ್ಧಶತಕ.

Leave A Reply

Your email address will not be published.