ಕಳೆದ ವರ್ಷ ಉತ್ತಮ ಪ್ರದರ್ಶನ ನೀಡಿದ ಆಟಗಾರರ ಪಟ್ಟಿ ಬಿಡುಗಡೆ ಮಾಡಿದ ಬಿಸಿಸಿಐ. ರೋಹಿತ್ ಹಾಗು ವಿರಾಟ್ ಕೊಹ್ಲಿ ಹೆಸರೇ ಇಲ್ಲ. ಸಿಗುತ್ತಾ ಇವರಿಗೆ ಕೊಕ್?

139

2022 ನೇ ವರ್ಷ ಕೊನೆಗೊಳ್ಳುತ್ತಿದ್ದಂತೆಯೇ ಬಿಸಿಸಿಐ (BCCI) ಕಳೆದ ವರ್ಷ ಉತ್ತಮ ಪ್ರದರ್ಶನ ನೀಡಿದ ಆಟಗಾರರ ಪಟ್ಟಿ ಬಿಡುಗಡೆ ಮಾಡಿದೆ. ಆಶ್ಚರ್ಯಕರ ವಿಷಯವೇನೆಂದರೆ ಈ ಪಟ್ಟಿಯಲ್ಲಿ ಎ ಲಿಸ್ಟ್ ಆಟಗಾರರಾದ ವಿರಾಟ್ ಕೊಹ್ಲಿ (Virat kohli) ಹಾಗು ರೋಹಿತ್ ಶರ್ಮ (rohit Sharma) ಅವರುಗಳ ಹೆಸರೇ ಇಲ್ಲ. ಪ್ರತಿ ಫಾರ್ಮ್ಯಾಟ್ ನಲ್ಲಿ ಉತ್ತಮ ಪ್ರದರ್ಶನ ನೀಡಿದವರ ಪಟ್ಟಿ ಬಿಡುಗಡೆ ಮಾಡುತ್ತದೆ ಬಿಸಿಸಿಐ ಆದರೆ ಇವರಿಬ್ಬರ ಹೆಸರು ಏಕದಿನ, ಟೆಸ್ಟ್ ಹಾಗು ಟಿ-೨೦ ಯಾವುದರಲ್ಲಿ ಇಲ್ಲ.

ಟೆಸ್ಟ್ ಮಾದರಿಗೆ ಬಂದರೆ, ಇಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರ ಹೆಸರಲ್ಲಿ ಮೊದಲಿಗೆ ರಿಷಬ್ ಪಂತ್ (Rishab Pant) ಹಾಗು ಜಸ್ಪ್ರೀತ್ ಬುಮ್ರಾ (jasprit Bumra) ಹೆಸರು ಬಿಸಿಸಿಐ ಹೆಸರಿಸಿದೆ. ರಿಷಬ್ ಪಂತ್ ೭ ಪಂದ್ಯಗಳಲ್ಲಿ ಎರಡು ಶತಕ ಹಾಗು ನಾಲ್ಕು 61 ರ ಸರಾಸರಿಯಲ್ಲಿ ಒಟ್ಟಾರೆ 680 ರನ್ ಗಳಿಸಿದ್ದಾರೆ. ಇನ್ನು ಜಸ್ಪ್ರೀತ್ ಬುಮ್ರಾ ಆಡಿದ ಕೇವಲ ೫ ಪಂದ್ಯಗಳಲ್ಲಿ 22 ವಿಕೆಟ್ ಪಡೆದುಕೊಂಡಿದ್ದಾರೆ. ಇವರ ಬೆಸ್ಟ್ ಆಟ ಅಂದರೆ 47 ರನ್ ನೀಡಿ 8 ವಿಕೆಟ್ ಪಡೆದಿರುವುದು.

ಇನ್ನು ಏಕದಿನ ಪಂದ್ಯಕ್ಕೆ ಬಂದರೆ ಉತ್ತಮ ಪ್ರದರ್ಶನ ನೀಡಿದವರಲ್ಲಿ ಬ್ಯಾಟರ್ ಶ್ರೇಯಸ್ ಅಯ್ಯರ್ (shreyas Iyer) ಹೆಸರು ಬಿಸಿಸಿಐ ಸೂಚಿಸಿದೆ. 2022 ಅಯ್ಯರ್ ಗೆ ಉತ್ತಮ ವರ್ಷ ಸಾಬೀತಾಗಿದೆ. 17 ಪಂದ್ಯಗಳಲ್ಲಿ ೭೨೪ ರನ್ ಗಳಿಸಿದ್ದಾರೆ. 55 ರ ಆವರೇಜ್ ಅಲ್ಲಿ ಇವರು ೬ ಅರ್ಧ ಶತಕ ಹಾಗು ಒಂದು ಶತಕ ದಾಖಲಿಸಿದ್ದಾರೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಮೊಹೆಮ್ಮೆದ್ ಸಿರಾಜ್ (Mohammed Siraj) ಹೆಸರು ಕೇಳಿ ಬಂದಿದೆ. 15 ಏಕದಿನ ಪಂದ್ಯದಲ್ಲಿ 24 ವಿಕೆಟ್ ಪಡೆದಿದ್ದಾರೆ.

ಇನ್ನು ಟಿ-೨೦ ವಿಷಯಕ್ಕೆ ಬಂದರೆ ಬ್ಯಾಟಿಂಗ್ ವಿಆಭಾಗದಲಿ ಒಂದು ಹೆಸರು ಇದ್ದೆ ಇರುತ್ತದೆ. ಅದು ಭಾರತದ ಮಿಸ್ಟರ್ 360 ಸೂರ್ಯ ಕುಮಾರ್ ಯಾದವ್ (Suryakumar Yadav). ಸ್ಕೈ ಆಡಿದ 31 ಪಂದ್ಯಗಳಲ್ಲಿ 1164 ರನ್ ಗಳಿಸಿದ್ದಾರೆ. ಇವರ ಸರಾಸರಿ 47 ಆಗಿದೆ ಹಾಗೇನೇ ಇವರು ಎರಡು ಶತಕ ಕೂಡ ದಾಖಲಿಸಿದ್ದಾರೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್ (Bhuvaneshwar Kumar) ಹೆಸರು ಕೇಳಿ ಬಂದಿದೆ. ಸ್ವಿಂಗ್ ಸ್ಪೆಷಲಿಸ್ಟ್ ಭುವಿ ಆಡಿದ 32 ಪಂದ್ಯದಲ್ಲಿ 37 ವಿಕೆಟ್ ಪಡೆದು ಮಿಂಚಿದ್ದಾರೆ. ಇವರ ಉತ್ತಮ ಬೌಲಿಂಗ್ ಅಂದರೆ ೫-೪ ಶ್ರೇಷ್ಠ ಸಾಧನೆ ಆಗಿದೆ.

Leave A Reply

Your email address will not be published.