ಹೃತಿಕ್ ರೋಷನ್ ಗಿಂತ ನಮ್ಮಲ್ಲಿ ಉತ್ತಮ ನಟರಿದ್ದಾರೆ ಎಂದು ಹೇಳಿದ್ದ ರಾಜಮೌಳಿ ಅವರ ಹಳೆ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

126

S S Rajamauli ಎನ್ನುವ ಹೆಸರು ಇಂದು ಪ್ರತಿ ಭಾರತೀಯರಿಗೂ ಗೊತ್ತಿರುವ ವಿಷಯ. ಇದಕ್ಕೆ ಕಾರಣ ಬಾಹುಬಲಿ (Bahubali) ಎನ್ನುವ ಸಿನೆಮಾ ಪ್ರಪಂಚದಾದ್ಯಂತ ಮಾಡಿದ ಚಮತ್ಕಾರ. ಇದಕ್ಕಿಂತ ಮೊದಲು ಭಾರತದಲ್ಲಿ ದಕ್ಷಿಣ ಭಾರತದ ಸಿನೆಮಾ ಮಾಡದಂತಹ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿ ನಾವು ಯಾರಿಗೂ ಕಡಿಮೆ ಇಲ್ಲ ಎಂದು ತಿಳಿಸಿದ ಸಿನೆಮಾ. ಇದರ ಶ್ರೇಯ ರಾಜಮೌಳಿ ಗೆ ಸಲ್ಲುತ್ತದೆ.

ಇದೀಗ ಅವರ ಹೆಸರು ಮತ್ತೊಮ್ಮೆ ಇಂಟರ್ನೆಟ್ ಅಲ್ಲಿ ಸದ್ದು ಮಾಡುತ್ತಿದೆ. ಇವರ ಮುಂದಿನ ಚಿತ್ರಕ್ಕಲ್ಲ ಬದಲಾಗಿ ಇವರು ಹಿಂದೆ ಹೇಳಿದ ಒಂದು ಭಾಷಣಕ್ಕೆ. ಹೌದು ಹಿಂದೆ ಇವರು ಒಂದು ಸಿನೆಮಾ ಪ್ರಮೋಷನ್ ಗಾಗಿ ಹೋದ ಸಂಧರ್ಭದಲ್ಲಿ ಹೇಳಿದ ಮಾತು ಇದೀಗ ವೈರಲ್ ಆಗಿದ್ದು ಹಿಂದಿ ಸಿನಿ ಪ್ರೇಕ್ಷಕರು ಅದರಲ್ಲಿ ಹೃತಿಕ್ ರೋಷನ್ (Hritik Roshan) ಅಭಿಮಾನಿಗಳು ಗರಂ ಆಗುವಂತೆ ಮಾಡಿದೆ. ಅಷ್ಟಕ್ಕೂ ರಾಜಮೌಳಿ ಅವರು ಹೇಳಿದ್ದೇನು?

2008 ರಲ್ಲಿ ತೆಲುಗಿನ ಬಿಲ್ಲ (Billa) ಎನ್ನುವ ಸಿನೆಮಾ ಪ್ರಚಾರಕ್ಕೆ ಹೋಗಿದ್ದರು. ಇದು ಪ್ರಭಾಸ್ (Prabhas) ಅವರ ಸಿನೆಮಾ ಆಗಿತ್ತು. ಆ ಸಮಯದಲ್ಲಿ ರಾಜಮೌಳಿ ಅವರು ಚಿತ್ರದ ಟ್ರೈಲರ್ ನೋಡಿದ ನಂತರ. ನಮ್ಮ ಪ್ರಭಾಸ್ ಬಾಲಿವುಡ್ ನ ಹೃತಿಕ್ ರೋಷನ್ ಗಿಂತ ಯಾವುದರಲ್ಲಿ ಕಡಿಮೆ ಇಲ್ಲ ಎಂದು ಹೇಳಿದ್ದಾರೆ. ಇದು ಬಾಲಿವುಡ್ ಅನ್ನು ಕೆಂಡಾಮಂಡಲವಾಗಿಸಿದೆ. ಮೊದಲೇ ಮಕಾಡೆ ಮಲಗಿದ ಬಾಲಿವುಡ್ ಗೆ ರಾಜಮೌಳಿ ಅವರು ಹೇಳಿದ ಈ ಮಾತು ಸಹಿಸಿಕೊಳ್ಳಲು ಆಗುತ್ತಿಲ್ಲ.

ಇದಕ್ಕೆ ಮಿಶ್ರ ಪ್ರತಿಕ್ರಿಯೆ ಬಂದಿದ್ದು ಅನೇಕರು ರಾಜಮೌಳಿ ಅವರ ಪರ ಇದ್ದರೆ ಇನ್ನು ಕೆಲವರು ವಿರೋಧ ವ್ಯಕ್ತ ಪಡಿಸಿದ್ದಾರೆ. ಪ್ರಭಾಸ್ (Prabhas) ಖುದ್ದಾಗಿ ಹೃತಿಕ್ ರೋಷನ್ (hritik Roshan) ಅಭಿಮಾನಿ ಎನ್ನುವಾಗ ಈ ರಾಜಮೌಳಿ ಯಾಕೆ ಹೀಗೆ ಹೇಳುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ಕೆಲವರು ರಾಜಮೌಳಿ ಗೆ ತೆಲುಗು ಸಿನೆಮಾ ಬಾಲಿವುಡ್ ಗಿಂತ ಶ್ರೇಷ್ಠ ಎಂದಾದರೆ ಇಂದು ಬಾಲಿವುಡ್ ಕದ ಯಾಕೆ ತಟ್ಟುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ಕೆಲವರು ಬಾಹುಬಲಿ ಸಿನೆಮಾದಲ್ಲಿ ಕೆಲ ಚಿತ್ರಣಗಳು ಹಾಲಿವುಡ್ ಸಿನೆಮಾದಿಂದ ಕದ್ದಿದ್ದು ಎಂದು ಕೂಡ ಟೀಕಿಸಿದ್ದಾರೆ.

Leave A Reply

Your email address will not be published.