ಧೋನಿ, ಕೊಹ್ಲಿ, ತೆಂಡೂಲ್ಕರ್ ಗಿಂತಲೂ ಅತೀ ಶ್ರೀಮಂತ ಈ ಭಾರತೀಯ ಕ್ರಿಕೆಟಿಗ? ಯಾರು ಈ ಕ್ರಿಕೆಟರ್?

22

ಕ್ರಿಕೆಟ್ ಎಂದಾಕ್ಷಣ ಮೊದಲಿಗೆ ಮನಸಿಗೆ ಬರುವ ಹೆಸರುಗಳೇ ಸಚಿನ್ , ಧೋನಿ, ವಿರಾಟ್ ಕೊಹ್ಲಿ. ಹೌದು ಈ ದಿಗ್ಗಜರುಗಳ ಹೆಸರು ಅತಿ ಚಾಲ್ತಿಯಲ್ಲಿರುವ ಕ್ರಿಕೆಟರ್ ಗಳ ಪೈಕಿ ಹೆಚ್ಚಿನ ರೀತಿಯಲ್ಲಿ ಸುದ್ದಿಯಲ್ಲಿ ಇರುತ್ತದೆ. ಇವರುಗಳು ತಮ್ಮದೇ ಆದ ಬ್ರಾಂಡ್ ಕ್ರಿಯೇಟ್ ಮಾಡಿದ್ದಾರೆ ಕ್ರಿಕೆಟ್ ಜಗತ್ತಿನಲ್ಲಿ. ಕ್ರಿಕೆಟ್ ಮಾತ್ರ ಅಲ್ಲದೇ ತಮ್ಮ ಸಂಪತ್ತಿನ ವಿಚಾರದಲ್ಲೂ ಕೂಡ ಅಷ್ಟೇ ಇವರು ಅತಿ ಹೆಚ್ಚು ಸಂಪತ್ತು ಹೊಂದಿರುವ ಕ್ರಿಕೆಟರ್ ಗಳ ಸಾಲಿನಲ್ಲಿ ಮೊದಲೆಯವರಾಗಿ ಎಲ್ಲರಿಗೂ ಚಿರ ಪರಿಚಿತ. ಆದರೆ ನಾವು ಇಂದು ಒಬ್ಬ ಭಾರತೀಯ ಕ್ರಿಕೆಟರ್ ಬಗ್ಗೆ ನಿಮಗೆ ತಿಳಿಸುತ್ತಿದ್ದೇವೆ. ಈತನ ಸಂಪತ್ತು ಮಾತ್ರ ಧೋನಿ ಕೊಹ್ಲಿ ಸಚಿನ್ ಅವರ ಸಂಪತ್ತನ್ನು ಒಟ್ಟು ಮಾಡಿದರೆ ಈತನ ಸಂಪತ್ತು ಅದಕ್ಕಿಂತ ಹೆಚ್ಚಾಗಿದೆ ಹೌದು ಆಶ್ಚರ್ಯ ಎನಿಸಿದರೂ ಇದು ಸತ್ಯ ಸಂಗತಿ. ಯಾರು ಈ ಕ್ರಿಕೆಟರ್ ಬನ್ನಿ ತಿಳಿಯೋಣ.

ಇವರ ಹೆಸರು ಆರ್ಯಮಾನ್ ಬಿರ್ಲಾ, ESPN Cricinfo ಪ್ರಕಾರ, ಆರ್ಯಮನ್ ಬಿರ್ಲಾ ಈವರೆಗೆ 9 ಪಂದ್ಯಗಳನ್ನು ಆಡಿದ್ದಾರೆ ಮತ್ತು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಒಂದು ಶತಕ ಮತ್ತು ಒಂದು ಅರ್ಧ ಶತಕ ಸೇರಿದಂತೆ 414 ರನ್ ಗಳಿಸಿದ್ದಾರೆ. ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅವರು ನಾಲ್ಕು ಪಂದ್ಯಗಳಲ್ಲಿ 36 ರನ್ ಗಳಿಸಿದ್ದರು. 2017-18ರಲ್ಲಿ ಮಧ್ಯಪ್ರದೇಶಕ್ಕಾಗಿ ರಣಜಿ ಟ್ರೋಫಿಗೆ ಪಾದಾರ್ಪಣೆ ಮಾಡುವ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ಪಾದಾರ್ಪಣೆ ಮಾಡಿದರು. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ, ಅವರು 2018 ರಲ್ಲಿ ರಾಜಸ್ಥಾನ ರಾಯಲ್ಸ್‌ ತಂಡ 30ಲಕ್ಷ ಕೊಟ್ಟು ಇವರನ್ನು ಖರೀದಿ ಮಾಡಿತ್ತು.

ಬಿಲಿಯನೇರ್ ಕೈಗಾರಿಕೋದ್ಯಮಿ ಕುಮಾರ್ ಮಂಗಳಂ ಬಿರ್ಲಾ ಅವರ ಪುತ್ರ ಆರ್ಯಮಾನ್ ವಿಕ್ರಮ್ ಬಿರ್ಲಾ.ಆರ್ಯಮಾನ್ ವಿಕ್ರಮ್ ಬಿರ್ಲಾ ಯಶಸ್ವಿ ಉದ್ಯಮಿ ಆದರೆ, ಅವರು ಕ್ರಿಕೆಟಿಗರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.ಕ್ರಿಕೆಟ್‌ನಲ್ಲಿ ಭರವಸೆಯ ವೃತ್ತಿಜೀವನವನ್ನು ಹೊಂದಿದ್ದರೂ ಕೂಡ ಅವರು 2019 ರಲ್ಲಿ ವೈಯಕ್ತಿಕ ಕಾರಣಗಳಿಗಾಗಿ ಕ್ರೀಡೆಯಿಂದ ವಿರಾಮ ತೆಗೆದುಕೊಂಡರು. ಆರ್ಯಮನ್ ಬಿರ್ಲಾ ಅವರು ಸುಮಾರು 70,000 ಕೋಟಿ ರೂ. ಸಂಪತ್ತು ಹೊಂದಿದ್ದು ಇದು ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಒಟ್ಟು ಮೌಲ್ಯಕ್ಕಿಂತ ಅಧಿಕವಾಗಿದೆ.

Leave A Reply

Your email address will not be published.