ಅಕ್ಷಯ್ ಕುಮಾರ್ ಅಭಿನಯದ ಸೂರ್ಯವಂಶಿ ಸೂಪರ್ ಹಿಟ್. ಈ ಸಿನೆಮಾಗೆ ನಟ ನಟಿಯರು ಪಡೆದ ಸಂಭಾವನೆ ಎಷ್ಟು ಗೊತ್ತೇ?
ಅಕ್ಷಯ್ ಕುಮಾರ್ ದೇಶದ ಒಬ್ಬ ಉತ್ತಮ ನಟ ಹಾಗು ವರ್ಷಕ್ಕೆ ನಾಲ್ಕೈದು ಚಲನಚಿತ್ರ ಬಿಡುಗಡೆ ಮಾಡುವವರು. ಇತ್ತೀಚಿನ ಆರೇಳು ವರ್ಷಗಳಲ್ಲಿ ಅವರು ನಟಿಸಿದ ಎಲ್ಲ ಚಲನಚಿತ್ರಗಳು ಹೊಸ ಹೊಸ ದಾಖಲೆ ಮಾಡಿದೆ. ಕಳೆದೆರಡು ವರ್ಷ ಕೋರೋಣ ಕಾರಣದಿಂದ ಯಾವುದೇ ಚಲನಚಿತ್ರಗಳು ಬಿಡುಗಡೆ ಹೊಂದಿಲ್ಲದಿದ್ದರು ಅತಿ ಹೆಚ್ಚಿನ ಜಾಹಿರಾತಿನಲ್ಲಿ ನಟಿಸಿ ಹಣ ಮಾಡಿದ್ದಾರೆ. ಅದೇ ಅಲ್ಲದೆ ಎರಡು ವರ್ಷದಲ್ಲಿ ಅತಿ ಹೆಚ್ಚು ತೆರಿಗೆ ಕಟ್ಟಿದ ನಟ ಎನ್ನುವ ಬಿರುದು ಕೂಡ ಪಡೆದಿದ್ದರೆ ಅಕ್ಷಯ್ ಕುಮಾರ್.
ಕಳೆದ ವರ್ಷವೇ ಬಿಡುಗಡೆ ಆಗ ಬೇಕಿದ್ದ ರೋಹಿತ್ ಶೆಟ್ಟಿ ನಿರ್ದೇಶನ ಹಾಗು ಅಕ್ಷಯ್ ಕುಮಾರ್ ಮತ್ತು ಕತ್ರಿನಾ ಕೈಫ್ ನಟನೆಯ ಸೂರ್ಯವಂಶಿ ಚಿತ್ರ ನವೆಂಬರ್ ಅಲ್ಲಿ ಬಿಡುಗಡೆ ಗೊಂಡಿದೆ. ಕೋರೋಣ ದಿಂದ ನಷ್ಟ ಅನುಭವಿಸಿದ ಚಲನಚಿತ್ರ ಮಂದಿರಗಳಿಗೆ ಸೂರ್ಯವಂಶಿ ಚಿತ್ರ ಹೊಸ ಆಶಾಕಿರಣ ನೀಡಿದೆ. ಚಿತ್ರ ಇದುವರೆಗೂ ೨೦೦ ಕೋಟಿಗೂ ಅಧಿಕ ಗಳಿಕೆ ಮಾಡಿದ್ದೂ, ಚಿತ್ರ ಒಳ್ಳೆದಿದೆ ಎನ್ನುವ ಜನರ ಅಭಿಪ್ರಾಯ ಕೂಡ ಸಂಗ್ರಹವಾಗಿದೆ. ಈ ಚಿತ್ರ ಪೊಲೀಸ್ ಕಥೆಯನ್ನಾಧರಿಸಿದ ಚಿತ್ರವಾಗಿದ್ದು ಅಕ್ಷಯ್ ಕುಮಾರ್ ಭ-ಯೋತ್ಪಾದನಾ ನಿಗ್ರಹ ದಳದ ದ ಅಧಿಕಾರಿಯಾಗಿ ಪಾತ್ರ ನಿರ್ವಹಿಸಿದ್ದಾರೆ.
ಸೂರ್ಯವಂಶಿ ಚಿತ್ರದ ಒಟ್ಟು ಬಜೆಟ್ ೧೬೫ ಕೋಟಿ ಆಗಿದ್ದು, ಸ್ಟಾರ್ ನಟರು ಎಷ್ಟು ಸಂಭಾವನೆ ಪಡೆದಿದ್ದಾರೆ? ಇಲ್ಲಿದೆ ಅದರ ಮಾಹಿತಿ. ಅಕ್ಷಯ್ ಕುಮಾರ್ ಒಟ್ಟು ೨೩-೨೫ ಕೋಟಿ ಪಡೆದಿದ್ದಾರೆ ಎನ್ನುವ ಮಾಹಿತಿ ಇದೆ. ಅದೇ ರೀತಿ ಕತ್ರಿನಾ ಕೈಫ್ ೯-೧೦ ಕೋಟಿ ಪಡೆದಿದ್ದಾರೆ ಎಂದು ಬಾಲಿವುಡ್ ಲೈಫ್ ವರದಿ ಮಾಡಿದೆ. ಇನ್ನು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಆಯ್ ದೇವಗನ್ ಹಾಗು ರಣವೀರ್ ಸಿಂಗ್ ಯಾವುದೇ ತರಹದ ಸಂಭಾವನೆ ಪಡೆದಿಲ್ಲ ಎಂದು ಹೇಳಿದ್ದಾರೆ. ಒಟ್ಟಾರೆ ಸೂರ್ಯವಂಶಿ ಚಿತ್ರ ಉತ್ತಮವಾಗಿದ್ದು ವಾರಾಂತ್ಯದಲ್ಲಿ ಇನ್ನು ಅಧಿಕ ಪ್ರೇಕ್ಷಕರನ್ನು ಚಿತ್ರ ಮದಿರಕ್ಕೆ ಸೆಳೆಯುವ ಸಯತೇ ಇದೆ ಎಂದು ಚಿತ್ರ ತಂಡ ಹೇಳುತಿದೆ.