ಕಾಂತಾರ ಚಿತ್ರದ ಯಶಸ್ಸಿನಲ್ಲಿರುವಾಗಲೇ ಮತ್ತೊಂದು ಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡ ರಿಷಬ್ ಶೆಟ್ಟಿ.

517

ಕಾಂತಾರ ಕನ್ನಡ ಚಿತ್ರರಂಗದಲ್ಲೇ ಹೆಚ್ಚು ಕುತೂಹಲ ಹಾಗು ನಿರೀಕ್ಷೆ ಹೆಚ್ಚಿಸಿದ್ದ ಸಿನಿಮಾ. ಹಾಗೇನೇ ಈ ನಿರೀಕ್ಷೆಯನ್ನು ಹುಸಿ ಮಾಡಲಿಲ್ಲ ರಿಷಬ್ ಶೆಟ್ಟಿ. ಅದೇ ರೀತಿ ಈ ಚಿತ್ರ ಉತ್ತಮವಾಗಿ ಮೂಡಿ ಬರಲು ಕಾರಣ ಇದಕ್ಕೆ ಬಂಡವಾಳ ಹೂಡಿದ ಹೊಂಬಾಳೆ ಪ್ರೊಡಕ್ಷನ್. ಇದೀಗ ಉತ್ತಮವಾಗಿ ದೇಶಾದ್ಯಂತ ವಿವಿಧ ಭಾಷೆಗಳಲ್ಲಿ ಬಿಡುಗಡೆ ಹೊಂದಿ ಬಾಕ್ಸ್ ಆಫೀಸ್ ಅಲ್ಲಿ ಉತ್ತಮವಾಗಿ ಗಳಿಕೆ ಮಾಡುತ್ತಿದೆ. ಇದೀಗ ಕಾಂತಾರ ಯಶಸ್ಸಿನ ಜೊತೆಗೆ ಇನ್ನೊಂದು ಖುಷಿ ವಿಚಾರ ರಿಷಬ್ ಶೆಟ್ಟಿ ಅವರಿಗೆ ಸಿಕ್ಕಿದೆ.

ರಿಷಬ್ ಶೆಟ್ಟಿ ಅವರು ನಿರ್ಮಿಸಿದ ಶಿವಮ್ಮ ಎನ್ನುವ ಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ ದೊರಕಿದೆ. ೨೭ ನೇ ಬೂಸಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ದೊರಕಿದೆ ನಮ್ಮ ತುಳುನಾಡಿನ ರಿಷಬ್ ಶೆಟ್ಟಿ ಗೆ. ಇದು ಜೈ ಶಂಕರ್ ನಿರ್ದೇಶಿಸಿರುವ ಹಾಗು ರಿಷಬ್ ಶೆಟ್ಟಿ ಬಂಡವಾಳ ಹಾಕಿದ ಸಿನೆಮಾ ಆಗಿದೆ. ಈ ಶಿವಮ್ಮ ಚಿತ್ರ ಒಬ್ಬ ಮಹಿಳೆ ಕಷ್ಟಪಟ್ಟು ದುಡಿದು ಅದರಲ್ಲಿ ಬಂದ ಹಣವನ್ನು ನೆಟ್ವರ್ಕ್ ಉದ್ಯಮದಲ್ಲಿ ಹಾಕಿ ಅದರಿಂದ ಕಷ್ಟ ಪಡುವ ಬಗೆಗಿನ ಸಿನೆಮಾ ಆಗಿದೆ.

ಇದನ್ನು ವಿಕ್ಸಿಸಿದ ಬೂಸಾನ್ ತೀರ್ಪುಗಾರರು ಚಿತ್ರದ ನಿರ್ದೇಶಕ ಜೈ ಶಂಕರ್ ಅವರನ್ನು ಹಾಗು ಅವರ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ಕತೆ ಹಾಗು ಅದರ ಆಳ ಮತ್ತು ಸೂಕ್ಷ್ಮವನ್ನು ಸಿನೆಮಾ ರೂಪದಲ್ಲಿ ತೋರಿಸಿದ ನಿರ್ದೇಶಕರ ಜಾಣ್ಮೆ ತೀರ್ಪುಗಾರರ ಮೆಚ್ಚುಗೆಗೆ ಕಾರಣವಾಗಿದೆ. ಇದಕ್ಕೆ ಹಣ ಹಾಕಿ ಹೊಸ ನಿರ್ದೇಶಕನ ಬೆಳೆಸುವಲ್ಲಿ ರಿಷಬ್ ಶೆಟ್ಟಿ ಅವರ ನಡೆಗೆ ಇದೀಗ ಎಲ್ಲ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇಂತಹ ನಿರ್ದೇಶಕರಿಂದ ಮುಂದೆ ಕನ್ನಡ ಸಿನೆಮಾ ಉತ್ತುಂಗಕ್ಕೆ ಬೆಳೆಯಲಿ ಎನ್ನುವುದು ನಮ್ಮೆಲರ ಬಯಕೆ.

Leave A Reply

Your email address will not be published.