Paraolympic 2024: ಪ್ಯಾರ ಒಲಂಪಿಕ್ಸ್ ಮೂರನೇ ಪದಕ ಗೆದ್ದ ಭಾರತ! ಟ್ರ್ಯಾಕ್ ಅಂಡ್ ಫೀಲ್ಡ್ ವಿಭಾಗದಲ್ಲಿ ದಾಖಲೆ ಸೃಷ್ಟಿಸಿದ ಭಾರತ?

34

ಈ ಬಾರಿಯ ಪ್ಯಾರ ಒಲಂಪಿಕ್ಸ್ ನಲ್ಲಿ ಭಾರತ ಅತ್ಯದ್ಭುತ ಪ್ರದರ್ಶನ ನೀಡುವ ಭರವಸೆಯೊಂದಿಗೆ ಪ್ಯಾರಿಸ್ ತಲುಪಿತ್ತು. ಅದರಂತೆ ಕೊಟ್ಟ ಭರವಸೆ ಹುಸಿ ಆಗಲಿಲ್ಲ. ಭಾರತ ಒಂದೇ ದಿನಕ್ಕೆ ಮೂರು ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿ ಮಾಡಿದೆ. 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಆವನಿ ಮತ್ತು ಮೋನಾ ಚಿನ್ನ ಮತ್ತು ಕಂಚಿನ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. ಇದೀಗ ಭಾರತ ಮೂರನೆಯ ಪದಕವನ್ನು ಪಡೆದಿದೆ.

ಹೌದು ಇದೆ ಮೊದಲ ಬಾರಿಗೆ ಟ್ರ್ಯಾಕ್ ಅಂಡ್ ಫೀಲ್ಡ್ ವಿಭಾಗದಲ್ಲಿ ಪದಕ ಗೆಲ್ಲುವ ಮೂಲಕ ಭಾರತ ತನ್ನ ಮೂರನೇ ಪದಕ ಗೆದ್ದಿದ್ದು ಅಷ್ಟೇ ಅಲ್ಲದೆ. ಈ ವಿಭಾಗದಲ್ಲಿ ಇದು ಚೊಚ್ಚಲ ಪದಕವಾಗಿದೆ . 23ರ ಹರೆಯದ ಪ್ರೀತಿ ಪಾಲ್ ಅವರು 100 ಮೀಟರ್ ಓಟದಲ್ಲಿ ಕಂಚಿನ ಪದಕ ಪಡೆಯುವ ಮೂಲಕ ಈ ಸಾಧನೆ ಮಾಡಿದ್ದಾರೆ.14.21 ಸೆಕೆಂಡ್ ನಲ್ಲಿ ಓಟ ಮುಗಿಸಿದ ಇವರು ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ . ಈ ಅಮೋಘ ಸಾಧನೆಗೆ ಅವರನ್ನು ಅಭಿನಂದಿಸುತ್ತಾ ಭಾರತ ಇನ್ನಷ್ಟು ಪದಕ ಗೆಲ್ಲಲಿ ಎಂದು ಆಶಿಸೋಣ.

Leave A Reply

Your email address will not be published.