5 ವರ್ಷ ನಂತರವೂ ನಿಂತಿಲ್ಲ “ಕುರುಕ್ಷೇತ್ರ ಶಾಪ”, ಡಿ ಬಾಸ್, ನಿಖಿಲ್, ಮೇಘನಾ ಇನ್ನೂ ಯಾರಿಗೆ ಏನೆಲ್ಲಾ ಸಂಕಷ್ಟ ಎದುರಾಗಿದೆ ಇಲ್ಲಿ ಓದಿರಿ!

31

ಕುರುಕ್ಷೇತ್ರ ಸಿನೆಮಾ ಕನ್ನಡ ಸಿನಿ ಇಂಡಸ್ಟ್ರಿ (Cine industry) ಅಲ್ಲಿ ಬಹಳ ಸದ್ದು ಮಾಡಿದ ಸಿನೆಮಾ. ತೆಲುಗಿನ ಬಾಹುಬಲಿ (Bahubali) ನಂತರ ಕನ್ನಡದಲ್ಲಿ ಇಂತಹ ಒಂದು ದೊಡ್ಡ ಬಜೆಟ್ ಸಿನಿಮಾ ಆಗಬೇಕು ಎಂದು ಆಲೋಚನೆ ನಡೆಸಿ ತೆರೆತಂದ ಸಿನೆಮಾ ದರ್ಶನ್ (Darshan Toogudeepa) ನಟನೆಯ ಕುರುಕ್ಷೇತ್ರ. ಆದರೆ ಇದೀಗ ಜನರಲ್ಲಿ ಒಂದು ಮಾತುಕತೆ ಚರ್ಚೆ ಹುಟ್ಟಿದೆ. ಕುರುಕ್ಷೇತ್ರ ಸಿನೆಮಾದಲ್ಲಿ ನಟಿಸಿದ ಹೆಚ್ಚಿನ ಎಲ್ಲಾ ನಟ ನಟಿಯರಿಗೆ ಏನೋ ಒಂದಿಲ್ಲ ಒಂದು ಸಮಸ್ಯೆ ಎದುರಾಗುತ್ತಲೇ ಇದೆ. ಕುರುಕ್ಷೇತ್ರ ದ ಶಾಪ ಎಂದೇ ಜನರು ಈಗ ಮಾತಾಡಿದಿಕೊಳ್ಳುತ್ತಿದ್ದಾರೆ. ಹಾಗದರೆ ಏನಿದು ವಿಷಯ ಬನ್ನಿ ತಿಳಿಯೋಣ.

ಸಿನೆಮಾದಲ್ಲಿ ಬಂಡವಾಳ ಹಾಕಿದ ಶಾಸಕ ಮುನಿರತ್ನ (Muniratna) ಅವರ ಇತ್ತೀಚಿನ ಬಂಧನ ಹಿನ್ನಲೆಯಲ್ಲಿ ಈ ಒಂದು ಚರ್ಚೆ ಆರಂಭ ವಾಗಿದೆ. ಇದಕ್ಕೆ ಕುರುಕ್ಷೇತ್ರ ಶಾಪವೇ ಕಾರಣ ಎಂದು ಜನ ಆಡಿಕೊಳ್ಳುತ್ತಿದ್ದಾರೆ. ಸಿನೆಮಾ ಹಲವಾರು ಅಡೆತಡೆ ಎದುರಿಸಿದರು ತೆರೆಗೆ ಬಂದಿತ್ತು. ಆದರೆ ತೆರೆಗೆ ಬರುವ ಮುನ್ನವೇ ಭೀಷ್ಮನ ಪಾತ್ರದಾರಿ ಅಂಬರೀಷ್ (Ambareesh) ಅವರು ಇಹಲೋಕ ತ್ಯಜಿಸಿದ್ದರು. ಅಭಿಮನ್ಯು ಪಾತ್ರ ಧರಿಸಿದ್ದ ನಿಖಿಲ್ ಕುಮಾರ ಸ್ವಾಮಿ ಕೂಡ ರಾಜಕೀಯ ಎಂಬ ಚಕ್ರವ್ಯೂಹ ಸಿಲುಕಿ ಎಂಎಲ್ಎ ಎಂಪಿ ಚುನಾವಣೆಯಲ್ಲಿ ಸೋತರು.ಭಾನುಮತಿ ಪಾತ್ರ ಧರಿಸಿದ್ದ ಮೇಘನಾ ರಾಜ್ ಜೀವನದಲ್ಲಿ ಕೂಡ ಒಂದು ಘಟನೆ ನಡೆದು ಹೋಗಿದ್ದು ನಮಗೂ ಗೊತ್ತು.

ಇನ್ನು ಕರ್ಣನ ಪಾತ್ರ ಮಾಡಿದ್ದ ಅರ್ಜುನ್ ಸರ್ಜಾ ಅವರು ಕೂಡ ತಮ್ಮ ಸಿನಿ ಕರಿಯರ್ ನಲ್ಲಿ ಎದುರಿಸದ ಅಪವಾದಕ್ಕೆ ಸಿಲುಕಿ ತಮ್ಮ ವರ್ಚಸ್ಸಿಗೆ ಪೆಟ್ಟು ಮಾಡಿಕೊಂಡಿದ್ದರು. ಅದು ಮೀ ಟೂ ಆರೋಪ .ಇನ್ನುಳಿದಂತೆ ಪ್ರದಾನ ಪಾತ್ರದಾರಿ ದರ್ಶನ್ ಕೂಡ ಜೈಲು ಸೇರಿದ್ದು ಇದೀಗ ಜನರು ಇದಕ್ಕೆಲ್ಲಾ ಕುರುಕ್ಷೇತ್ರ ಶಾಪವೇ ಕಾರಣ ಎಂದು ಹೇಳಿಕೊಳ್ಳುತ್ತಾ ಇದ್ದಾರೆ. ಆದರೆ ಇವೆಲ್ಲ ಸತ್ಯಕ್ಕೆ ದೂರ ಸಂಗತಿ ಎಂದು ಕೆಲವರು ಹೇಳುತ್ತಾರೆ. ಅದೇನೇ ಆಗಲಿ ಜನರಿಗೆ ಅವರವರ ಭಾವನೆ ವ್ಯಕ್ತ ಪಡಿಸುವ ಎಲ್ಲಾ ಅಧಿಕಾರ ಇದೆ.

Leave A Reply

Your email address will not be published.