ಇಷ್ಟಾರ್ಥಗಳನ್ನು ಈಡೇರಿಸದ ದೇವರುಗಳನ್ನು ವಿಚಾರಣೆಗೆ ಒಳಪಡಿಸಿ ಶಿಕ್ಷೆ ನೀಡಲಾಗುವುದು! ಎಲ್ಲಿ ನಡೆಯುತ್ತದೆ ಈ ವಿಭಿನ್ನ ಪದ್ಧತಿ?

115

ಎಲ್ಲಾ ಕಷ್ಟಗಳು ಏನೇ ಕೆಲಸಗಳು ಆಗಬೇಕೆಂದು ಮನಸಿನಲ್ಲಿ ಇದ್ದರೆ ಅದಕ್ಕೆ ಒಂದು ಭಲ ತುಂಬುವ ಜಾಗ ಇದ್ದರೆ ಅದು ದೇವಸ್ಥಾನ ಮಾತ್ರ. ನಮ್ಮ ಏನೇ ಆಗುಹೋಗುಗಳು ಒಳಿತು ಕೆಡುಕುಗಳ ಕಷ್ಟ ಪರಿಹಾರಗಳು ನಾವು ಯಾರ ಬಳಿ ಆದರೂ ಹಿಂಜರಿಯದೆ ಹೇಳುತ್ತೇವೆ ಅಂದರೆ ಅದು ದೇವರ ಬಳಿ ಮಾತ್ರ. ನಂಬಿಕೆಗಳು ಆಚಾರ ವಿಚಾರಗಳು ವಿಭಿನ್ನ ಆಗಿರಬಹುದು ಆದರೆ ಶಕ್ತಿಯೊಂದೇ. ಎಲ್ಲಾ ಕೆಲಸಗಳು ದೇವರ ಬಳಿ ಇಟ್ಟಕ್ಷಣ ಆಗುತ್ತದೆ ಎಂದೇನಿಲ್ಲ ,ನಮ್ಮ ಪ್ರಯತ್ನಗಳು ಕೂಡ ಅಷ್ಟೇ ಮುಖ್ಯವಾಗುತ್ತದೆ. ಆದರೆ ಇಲ್ಲಿ ಒಂದು ಕಡೆ ಇಷ್ಟಾರ್ಥಗಳನ್ನು ಈಡೇರಿಸು ಎಂದು ಬೇಡಿಕೊಂಡ ಭಕ್ತರು ಬಿಡಿಕೊಂಡ ಕೆಲಸ ಆಗದೆ ಇದ್ದಾಗ ದೇವರನ್ನೇ ವಿಚಾರಣೆಗೆ ಒಳಪಡಿಸುವ ವಿಭಿನ್ನ ಆಚರಣೆ ನಡೆಯುತ್ತದೆ. ಅಷ್ಟೇ ಅಲ್ಲದೆ ಇಷ್ಟಾರ್ಥ ಈಡೇರದ ದೇವರಿಗೆ ಶಿಕ್ಷೆಯನ್ನು ಕೂಡ ನೀಡಲಾಗುತ್ತದೆ. ಮನುಷ್ಯನ ಕರ್ಮಗಳಿಗೆ ಶಿಕ್ಷಿಸುವ ಭಗವಂತನಿಗೆ ಶಿಕ್ಷೆ ಎಂದರೆ ಅಚ್ಚರಿ ಎನಿಸಿಸುತ್ತದೆ.

ಅಚ್ಚರಿ ಅನಿಸಿದರೂ ಇದು ಸತ್ಯ ಸಂಗತಿ, ಈ ಒಂದು ವಿಭಿನ್ನ ಪರಂಪರೆ ನಡೆಯುವುದು ಚತ್ತೀಸ್ ಘಡದಲ್ಲಿ. ಪ್ರತಿ ವರ್ಷ ಮಾನ್ಸೂನ್ ಸಮಯದಲ್ಲಿ ನಡೆಯುವ ಭಾಡೋ ಜಾತ್ರೆ ಉತ್ಸವ ಸಂದರ್ಭದಲ್ಲಿ ದೇವರನ್ನು ವಿಚಾರಣೆಗೆ ಒಳಪಡಿಸುತ್ತಾರೆ. ಚತ್ತೀಸ್ ಘಡದ ಬಸ್ತಾರ್ ಪ್ರಾಂತ್ಯದ ಬಂಗಾರಂ ದೇವಿ ದೇವಸ್ಥಾನದಲ್ಲಿ ಈ ಒಂದು ಆಚರಣೆ ನಡೆಯುತ್ತದೆ, ಇದನ್ನು ದೇವರ ನ್ಯಾಯಾಲಯ ಎಂದೇ ಕರೆಯಲಾಗುತ್ತದೆ. ಹಳ್ಳಿಯ ಜನರು ತಾವು ನಂಬಿದ ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡು ತಮ್ಮ ಸಮಸ್ಯೆ ಬಗೆಹರಿಯದೆ ಇದ್ದಲ್ಲಿ ಅಂತಹ ದೇವರ ಮೂರ್ತಿಗಳನ್ನು ಈ ದೇವಸ್ಥಾನಕ್ಕೆ ವಿಚಾರಣೆಗೆ ತರಲಾಗುವುದು . ವಿಚಿತ್ರ ಎನಿಸಿದರೂ ಸತ್ಯ ಸಂಗತಿ ಇದು. ಇನ್ನು ಮುಂದಕ್ಕೆ ತಿಳಿದುಕೊಳ್ಳಿ, ಇಷ್ಟವಾದರೆ ನಿಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳಿ.

ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಹೇಳುವ ಪ್ರಕಾರ ಹೀಗೆ ಬಂದ ವಿಗ್ರಹಗಳು ವಿಚಾರಣೆ ನಡೆದು ಹೌದು ಎಂದಾದಲ್ಲಿ ಊರಿನ ಜನರು ತಾವು ನಂಬಿದ ದೇವರ ವಿಗ್ರಹಗಳನ್ನು ಅಲ್ಲಿಯೇ ಬಿಟ್ಟು ಹೋಗುತ್ತಾರೆ. ದೇವರಿಗೆ ಆಡಿಯಾದ ಬಟ್ಟೆ ತೊಡಿಸಿದ ಆಭರಣ ಎಲ್ಲವನ್ನೂ ದೇವರ ಜೊತೆಗೆ ಬಿಟ್ಟು ತಮ್ಮ ತಮ್ಮ ಹಳ್ಳಿಗಳಿಗೆ ವಾಪಸಾಗುತ್ತಾರೆ. ಇಂತಹ ಒಂದು ಆಚರಣೆ ನೋಡುವುದು ಇರಲಿ ಕೇಳಿಯೂ ಇರಲಿಕ್ಕಿಲ್ಲ. ಇಂತಹ ವಿಭಿನ್ನ ಆಚರಣೆಗಳು ಭಾರತದ ಮೂಲೆ ಮೂಲೆಗಳಲ್ಲಿ ಕಾಣಸಿಗುತ್ತದೆ.

Leave A Reply

Your email address will not be published.