ಜಮ್ಮು ಮತ್ತು ಕಾಶ್ಮೀರದಲ್ಲಿ ಭ-ಯೋತ್ಪಾದನಾ ವಿರೋಧಿ ಕಾರ್ಯಾಚರಣೆಯ ಸಮಯದಲ್ಲಿ ಒಂದು ಕಾಲು ಕಳೆದುಕೊಂಡ ಇವರು ಇಂದು ಪ್ಯಾರಾಲಿಂಪಿಕ್ ಪದಕ ವಿಜೇತರಾಗಿದ್ದಾರೆ! ಬನ್ನಿ ಇವರ ಬಗ್ಗೆ ತಿಳಿಯೋಣ

15

ಶುಕ್ರವಾರ ಪ್ಯಾರಿಸ್‌ನಲ್ಲಿ ನಡೆದ ಪ್ಯಾರಾಲಿಂಪಿಕ್ ಕ್ರೀಡಾಕೂಟದ ಪುರುಷರ ಎಫ್57 ವಿಭಾಗದ ಫೈನಲ್‌ನಲ್ಲಿ ಭಾರತೀಯ ಶಾಟ್‌ಪುಟ್ ಆಟಗಾರ ಹೊಕಾಟೊ ಸೆಮಾ ಅವರು ತಮ್ಮ ವೃತ್ತಿಜೀವನದ ಅತ್ಯುತ್ತಮ 14.65 ಮೀಟರ್‌ಗಳನ್ನು ಎಸೆಯುವ ಮೂಲಕ ದೇಶಕ್ಕೆ ಕಂಚಿನ ಪದಕವನ್ನು ಖಚಿತಪಡಿಸಿದರು. ಇವರು ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತೀಯ ತಂಡದ ಭಾಗವಾಗಿರುವ ನಾಗಾಲ್ಯಾಂಡ್‌ನ ಏಕೈಕ ಅಥ್ಲೀಟ್ ಇವರು ತನ್ನ ಎರಡನೇ ಎಸೆತದಲ್ಲಿ 14 ಮೀ ದೂರ ಎಸೆಯುವ ಮೂಲಕ ತಮ್ಮದೇ ವೈಯಕ್ತಿಕ ದಾಖಲೆ ಮುರಿದರು ಇದು ಅವರ ಕರಿಯರ್ ನ ಅತೀ ದೂರ ಎಸೆದ ಗುಂಡಾಗಿತ್ತು.

ಅತೀ ಸಣ್ಣ ಪ್ರಾಯದಲ್ಲಿ ಭಾರತ ಸೇನೆಯನ್ನು ಸೇರಿದ್ದ ಇವರು 2002 ರಲ್ಲಿ ಜಮ್ಮು ಮತ್ತು ಕಾಶ್ಮೀರದ ಚೌಕಿಬಾಲ್‌ನಲ್ಲಿ ಭ-ಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಭಾಗವಹಿಸುತ್ತಿದ್ದಾಗ ನೆಲಬಾಂಬ್ ಸ್ಫೋಟದಲ್ಲಿ ತನ್ನ ಎಡಗಾಲನ್ನು ಕಳೆದುಕೊಂಡಿದ್ದರು.ಎಂದು ದೇಶದ ಪರ ಹೋರಾಟ ಮಾಡುವಾಗ ತಮಗಾದ ನೋವಿನಿಂದ ಎಂದು ಕುಗ್ಗಲಿಲ್ಲ. ಅಂದು ಕೂಡ ದೇಶದ ಜನರು ತಲೆ ಎತ್ತಿ ನಡೆಯುವ ಕೆಲಸ ಮಾಡಿದ್ದರು ಇಂದು ಕೂಡ ತಮ್ಮ ಸಾಧನೆಯಿಂದ ಮತ್ತೆ ದೇಶದ ಜನರು ಹೆಮ್ಮೆ ಪಡುವ ಸಾಧನೆ ಮಾಡಿದ್ದಾರೆ.

ಎಂದಿಗೂ ಅವರ ಅಂಗ ವೈಕಲ್ಯ ಅವರ ಸಾಧನೆಗೆ ಅಡ್ಡಿ ಆಗಲಿಲ್ಲ. ಕೇವಲ ನೆಪ ಹೇಳಿಕೊಂಡು ಬದುಕುವ ನಾವುಗಳು ನಮ್ಮ ಭಾರತೀಯ ಪ್ಯಾರ ಅಥ್ಲೀಟ್ ಗಳನ್ನು ನೋಡಿ ನಮ್ಮೊಳಗೆ ನಾವು ಬದಲಾವಣೆ ತರಿಸಿಕೊಳ್ಳಬೇಕು. ಅದೇನೇ ಆಗಲಿ ಈ ಬಾರಿಯ ಪ್ಯಾರ ಒಲಂಪಿಕ್ಸ್ ನಲ್ಲಿ ಅಭೂತಪೂರ್ವ ಸಾಧನೆ ಮಾಡಿದ ಭಾರತ ತಂಡಕ್ಕೆ ಅಭಿನಂದನೆ ಸಲ್ಲಿಸೋಣ.

Leave A Reply

Your email address will not be published.