Kannada BigBoss News: ದೊಡ್ಮನೆಯಲ್ಲಿ ತಮ್ಮ ಆತ ಮುಗಿಸಿದ ನಿರೂಪಕಿ ಅನುಪಮಾ ಗೌಡ. ನಿರೀಕ್ಷೆ ಹುಸಿ ಮಾಡಿದ ಅನುಪಮಾ.
ಕನ್ನಡ ಬಿಗ್ ಬಾಸ್ ಸೀಸನ್ 9 ರ ಮುಕ್ತಾಯ ಹಂತ ತಲುಪಿದ್ದು ಈಗಾಗಲೇ ಅನೇಕ ಕುತೂಹಲಕ್ಕೆ ಸಾಕ್ಷಿಯಾಗಿದೆ. ಗಾಸಿಪ್ಗಳಿಗೆ ಹೆಚ್ಚು ಪ್ರಸಿದ್ದವಾದ ಕಾರ್ಯಕ್ರಮವಾದ ಬಿಗ್ ಬಾಸ್ ಇದೀಗ ಮುಕ್ತಾಯ ಹಂತದಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ನೀಡಿದೆ. 84 ದಿನದಲ್ಲಿ ಈಗಾಗಲೇ 11 ಜನರು ತಮ್ಮ ಪಯಣ ಮುಗಿಸಿದ್ದಾರೆ. ಹಾಗೇನೇ ಕೆಲವರು ಹೊರಗೆ ಹೋದರು ಕೂಡ ವೈಲ್ಡ್ ಕಾರ್ಡ್ ಆಗಿ ರೀ ಎಂಟ್ರಿ ಪಡೆದಿದ್ದರೆ ಅದರಲ್ಲಿ ದೀಪಿಕಾ ದಾಸ್ ಕೂಡ ಒಬ್ಬರು.
ದರ್ಶ್, ನೇಹಾ ಗೌಡ, ಸಾನಿಯಾ ಅಯ್ಯರ್, ವಿನೋದ್ ಗೊಬ್ಬರಗಲ, ಪ್ರಶಾಂತ್ ಸಂಭರ್ಗಿ ಇಂತಹ ಘಟಾನುಘಟಿ ಸ್ಪರ್ದಿಗಳೇ ಈ ಬಾರಿಯ ಬಿಗ್ ಬಾಸ್ ಆವೃತ್ತಿಯಿಂದ ಎಲಿಮಿನೇಟ್ ಆಗಿದ್ದು ವಾರಾಂತ್ಯ ಬಂದರೆ ಯಾರು ಹೋಗುತ್ತಾರೆ ಎನ್ನುವ ಕುತೂಹಲ ಎಲ್ಲರಿಗು ಹೆಚ್ಚು ಮಾಡುತಿತ್ತು. ಎಲ್ಲರು ಕೂಡ ತಮ್ಮ ನೆಚ್ಚಿನ ಆಟಗಾರರು ಮನೆಯಿಂದ ಹೊರಗೆ ಹೋಗಬಾರದು ಎಂದು ಕೂಡ ಪ್ರಾರ್ಥಿಸಿಕೊಂಡಿದ್ದು ಇದೆ. ಇದೀಗ ಈ ವಾರ ಯಾರು ಮನೆಯಿಂದ ಹೊರಗೆ ಹೋಗುತ್ತಿದ್ದಾರೆ ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ.
ಕಲರ್ಸ್ ಕನ್ನಡದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದ ಅನುಪಮಾ ಗೌಡ ಅವರು ಧಾರಾವಾಹಿಯಲ್ಲಿ ದ್ವಿಪಾತ್ರದಲ್ಲಿ ಅಭಿನಯಿಸಿ ಎಲ್ಲರ ಮನೆ ಮಾತಾಗಿದ್ದರು. ಅದಾದ ನಂತರ ನಿರೂಪಕಿಯಾಗಿ ರಿಯಾಲಿಟಿ ಶೋ ಗಳಲ್ಲಿ ಕಾಣಿಸಿಕೊಂಡಿದ್ದ ಇವರು ತಾನು ಎಲ್ಲದರಲ್ಲೂ ಸೈ ಎನಿಸಿಕೊಂಡಿದ್ದರು. ಇವರ ಜನಪ್ರಿಯತೆ ಇವರನ್ನು ಬಿಗ್ ಬಾಸ್ ಮನೆಗೆ ಎರಡು ಬಾರಿ ಕರೆತಂದಿದೆ. ಇವರು ಎಲ್ಲರೊಂದಿಗೆ ಚೆನ್ನಾಗಿಯೇ ಇದ್ದರು ಆದರೂ ಒಂದು ಗುಂಪು ಜೊತೆ ಹೆಚ್ಚು ಸಲಿಗೆಯಲ್ಲಿದ್ದರು. ಇದೆ ಇವರ ಗುಂಪುಗಾರಿಕೆ ಇಂದ ಎಲಿಮಿನೇಷನ್ ಆಗಿರಬಹುದು ಎಂದು ನಮಗೆ ಅನಿಸುತ್ತಿದ್ದೆ. ಅಲ್ಲದೆ ಯಾವಾಗಲು ಆರ್ಯವರ್ಧನ್ ಗುರೂಜಿ, ಪ್ರಶಾಂತ್ ಸಂಭರ್ಗಿ ಹಾಗು ರೂಪೇಶ್ ರಾಜಣ್ಣ ಅವರನ್ನು ಟಾರ್ಗೆಟ್ ಮಾಡುತ್ತಿದ್ದರು ಹಾಗೇನೇ ಕಳಪೆ ಕೂಡ ಈ ಮೂವರಲ್ಲಿ ಒಬ್ಬರಿಗೆ ಹೆಚ್ಚಾಗಿ ಕೊಡುತ್ತಿದ್ದರು. ಉತ್ತಮ ತಮ್ಮಲ್ಲಿಯೇ ಹಂಚಿಕೊಳ್ಳುತ್ತಿದ್ದರು. ಇದು ನೋಡುವವರಿಗೆ ಅಷ್ಟೇನೂ ಇಷ್ಟ ಆಗದೆ ಇರಬಹದು ಅದೇ ಕಾರಣಕ್ಕೆ ಈ ವಾರ ಅವರು ಮನೆಯಿಂದ ಹೊರ ಬರುತ್ತಿರಬಹುದು.